February 23, 2019
Prajanudi
ನಮ್ಮ ವಿಶೇಷ ವಿಶೇಷ ವರದಿ

ವೋಟರ್ ಐಡಿ ಇಲ್ಲವೇ? ಚಿಂತೆ ಬೇಡ,ಆನ್ ಲೈನ್ ನಲ್ಲಿ ಇಂದೇ ಅರ್ಜಿ ಸಲ್ಲಿಸಿ!


ನವದೆಹಲಿ: ಲೋಕಸಭಾ ಚುನಾವಣೆಗೆ ಸಿದ್ಧತೆಗಳು ನಡೆಯುತ್ತಿರುವಂತೆ  ಇದೇ ಮೊದಲ ಬಾರಿಗೆ ಮತದಾನ ಮಾಡಲು ಹಲವು ಮಂದಿ ಕುತೂಹಲದಿಂದ ಕಾಯುತ್ತಿದ್ದಾರೆ. ಒಂದು ವೇಳೆ  18 ವರ್ಷ ತುಂಬಿ, ವೋಟರ್  ಐಡಿಯನ್ನು  ಪಡೆಯದಿದ್ದರೆ ಚುನಾವಣಾ ಕಚೇರಿ ಮುಂಭಾಗ ಉದ್ದನೇಯ ಸಾಲಿನಲ್ಲಿ ನಿಲ್ಲಬೇಕೆಂಬ  ಆತಂಕಪಡಬೇಕಾಗಿಲ್ಲ. ಆನ್ ಲೈನ್ ಮೂಲಕ ಮತದಾರ ಚೀಟಿಗಾಗಿ ಅರ್ಜಿ ಸಲ್ಲಿಸಬಹುದಾಗಿದೆ.ಈ ಹಿಂದೆ ವೋಟರ್ ಐಡಿ ಚುನಾವಣಾ ಕಚೇರಿಗೆ  ಹಲವು ಬಾರಿ ಅಲೆಯಬೇಕಾಗಿತ್ತು. ಆದರೆ. ಈಗ ಆನ್ ಲೈನ್ ನಲ್ಲಿಯೇ ಹೆಸರು ನೋಂದಣಿ ಮಾಡಿಕೊಳ್ಳುವ ಮೂಲಕ ಮತದಾರರ ಚೀಟಿ ಪಡೆದುಕೊಳ್ಳುವುದು ಸುಲಭವಾಗಿದೆ.ಒಂದು ಕ್ಷೇತ್ರ, ನಗರ, ಜಿಲ್ಲೆ, ಅಥವಾ ರಾಜ್ಯದಿಂದ ಮತ್ತೊಂದು ಕಡೆಗೆ ಹೋಗುವವರು ,ಮತದಾರ ಚೀಟಿ ಕಳೆದುಕೊಂಡಿರುವವರು, ಅಥವಾ ವೋಟರ್ ಐಡಿಯಲ್ಲಿ ಬದಲಾವಣೆ ಮಾಡಿಸುವವರು ಈಗ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.ಆನ್ ಲೈನ್ ಅರ್ಜಿ ಸಲ್ಲಿಸುವ ಮುನ್ನ ಇಟ್ಟುಕೊಳ್ಳಬೇಕಾದ ಅಗತ್ಯವಾದ ದಾಖಲೆಗಳು 1. ಒಂದು ಪಾಸ್ ಪೋರ್ಟ್ ಸೈಜಿನ ಪೋಟೋ2.  ಹುಟ್ಟಿದ ದಿನಾಂಕ, ಪಾಸ್ ಪೋರ್ಟ್,  ಡ್ರೈವಿಂಗ್ ಲೈಸೆನ್ಸ್,  ಆಧಾರ್ ಕಾರ್ಡ್,  ಪ್ಯಾನ್ ಕಾರ್ಡ್  ಅಥವಾ 5, 8 ಅಥವಾ 10 ನೇ ತರಗತಿಯ ಅಂಕಪಟ್ಟಿ ಮತ್ತಿತರ ಯಾವುದೇ  ಗುರುತಿನ ಆಧಾರಗಳು 3. ಯಾವುದೇ ರೀತಿಯ ವಿಳಾಸದ ಪುರಾವೆಗಳು- ಪಾಸ್ ಪೋರ್ಟ್, ಬ್ಯಾಂಕ್ ಪಾಸ್ ಬುಕ್, ಪಡಿತರ ಚೀಟಿ, ಆದಾಯ ತೆರಿಗೆಗೆ ಸಂಬಂಧಿಸಿದ ದಾಖಲೆಗಳು, ಬಾಡಿಗೆ ಒಪ್ಪಂದದ ಪತ್ರ, ಡ್ರೈವಿಂಗ್ ಲೈಸೆನ್ಸ್,  ಅಥವಾ ನೀರು, ದೂರಸಂಪರ್ಕ, ವಿದ್ಯುತ್, ಗ್ಯಾಸ್ ಸಂಪರ್ಕದ ಬಿಲ್ ಮತ್ತಿತರ ದಾಖಲೆಗಳುಆನ್ ಲೈನ್ ಅರ್ಜಿ ಸಲ್ಲಿಕೆ ಹೇಗೆ ?1. ರಾಷ್ಟ್ರೀಯ ವೋಟರ್ ಸರ್ವೀಸಸ್ ಪೋರ್ಟಲ್ ಪೇಜ್  (ಎನ್ ವಿಎಸ್ ಪಿ)  ಭೇಟಿ ನೀಡಿ2. ಹೊಸ ವೋಟರ್ ಕಾರ್ಡ್ ನೋಂದಾಣಿಗಾಗಿ  ಇರುವ ( Apply online forRegistration ) ಕ್ಲಿಕ್ ಮಾಡಿ  ನಂತರ  ಹಿಂದಿ ಭಾಷೆಯಲ್ಲಿರುವ ಮತ್ತೊಂದು ಪುಟ ತೆರೆದುಕೊಳ್ಳುತ್ತದೆ.ನೀವು ಭಾಷೆಯನ್ನು ಬದಲಾಯಿಸಲು ಬಯಸಿದರೆ  ಪುಟದ ಮೇಲಿನ ಬಲ ಭಾಗದಲ್ಲಿರುವ ಡ್ರಾಪ್ ಡೌನ್  ಆಯ್ಕೆಯನ್ನು ಕ್ಲಿಕ್ ಮಾಡಬೇಕಾಗುತ್ತದೆ.3. ಅಗತ್ಯವಾದ ಮಾಹಿತಿ ಭರ್ತಿ ಮಾಡಿ,  ಪೋಟೋ, ವಯಸ್ಸು, ವಿಳಾಸದ ಪುರಾವೆ ಮತ್ತಿತರ ಅಗತ್ಯ ದಾಖಲೆಗಳನ್ನು ಆಟ್ಯಾಟ್ ಮಾಡಬೇಕಾಗುತ್ತದೆ. ನಂತರ ಪುಟದ ಕೆಳಭಾಗದಲ್ಲಿರುವ ‘Submit’ option  ಕ್ಲಿಕ್ ಮಾಡಿ. 4. ಒಮ್ಮೆ ನೀವು  ಅರ್ಜಿಯನ್ನು ಸಲ್ಲಿಸಿದ ನಂತರ   ಇ-ಮೇಲ್ ವೊಂದನ್ನು  ಸ್ವೀಕರಿಸುತ್ತೀರಿ.  ನಂತರ Track application status’  ಮೂಲಕ ನಿಮ್ಮ ಅರ್ಜಿಯನ್ನು ಗಮನಿಸಬಹುದು. ಎಲ್ಲಾ ಪ್ರಕ್ರಿಯೆ ಮುಗಿಯಲು ಒಂದು ತಿಂಗಳು ತೆಗೆದುಕೊಳ್ಳುತ್ತದೆ. ಪರ್ಯಾಯವಾಗಿ NVSP website ಗೆ ಹೋಗಿ  ‘Track application status ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ. ಎನ್ ಆರ್ ಐ- ಅನಿವಾಸಿ ಭಾರತೀಯರು ಹೇಗೆ ಅರ್ಜಿ ಸಲ್ಲಿಸಬಹುದು?1. NVSP website ತೆರೆಯಬೇಕು. 2. Click on the second option – Apply online for registration of overseas voter Form 6A.3. ಅಗತ್ಯ ಮಾಹಿತಿ ಭರ್ತಿ ಮಾಡಿ , Submit.’  ಮೇಲೆ  ಕ್ಲಿಕ್ ಮಾಡಬೇಕು. NVSP website  ನಲ್ಲಿನ  ವಿವಿಧ ಆಯ್ಕೆಗಳ ಮೂಲಕ ಮತದಾರರ ಪಟ್ಟಿಯಲ್ಲಿ ಹೆಸರು ಬದಲಾವಣೆ, ಅಥವಾ ತಿದ್ದುಪಡಿ  ಮಾಡಬಹುದಾಗಿದೆ.

Related posts

ವಿಶ್ವ ಯೋಗಾಚಾರ್ಯ ಬಿಕೆಎಸ್ ಅಯ್ಯಂಗಾರ್: ಶತಮಾನದ ನೆನಪು

Prajanudi Admin

ಅಮೆರಿಕ ಪ್ರವಾಸಿಗನ ಪ್ರಾಣಕ್ಕೆ ಎರವಾದ ನಿಗೂಢ ಸೆಂಟಿನೆಲ್ ದ್ವೀಪದ ಕುರಿತು ತಿಳಿದುಕೊಳ್ಳಿ!

Prajanudi Admin

ಅನುಮತಿ ಇಲ್ಲದೆ ತನ್ನನ್ನು 'ಸೃಷ್ಟಿ'ಸಿದ್ದಕ್ಕೆ ಪೋಷಕರನ್ನೇ ಕೋರ್ಟಿಗೆಳೆದ ಪುತ್ರ!

Prajanudi Admin

Leave a Comment