February 23, 2019
Prajanudi
ನಮ್ಮ ವಿಶೇಷ ವಿಶೇಷ ವರದಿ

ಏಕಾಂಗಿಯಾಗಿರುವ ಚೀನೀ ಮಹಿಳೆಯರಿಗೆ ಡೇಟಿಂಗ್ ಗಾಗಿಯೆ ಕೊಡ್ತಾರೆ ರಜೆ!


20-30 ವರೆಗಿನ ವಯಸ್ಸಿನಲ್ಲಿ ಮಹಿಳೆಯರು-ಪುರುಷರು ಡೇಟಿಂಗ್ ಮಾಡುವುದು ಸಹಜ. ಚೀನಾದಲ್ಲೂ ಇಂಥವರ ಸಂಖ್ಯೆ ಕಡಿಮೆಯೇನಿಲ್ಲ. ಇದರಲ್ಲೇನು ವಿಶೇಷ ಅಂದ್ರಾ? ವಿಶೇಷತೆ ಇರೋದು ಡೇಟಿಂಗ್ ಮಾಡುವವರಲ್ಲಿ ಅಲ್ಲ. ಡೇಟಿಂಗ್ ಮಾಡುವುದಕ್ಕಾಗಿ ಸಿಗುವ ಸವಲತ್ತುಗಳ ಬಗ್ಗೆ ಚೀನಾದಲ್ಲಿರುವ 20-30 ವರ್ಷದವರೆಗಿನ ಉದ್ಯೋಗಸ್ಥ ಮಹಿಳೆಯರಿಗೆ  ಡೇಟಿಂಗ್ ಮಾಡುವುದಕ್ಕಾಗಿಯೇ ಪ್ರತ್ಯೇಕವಾಗಿ ರಜೆ ನೀಡಲಾಗುತ್ತದೆ. ವಾರ್ಷಿಕವಾಗಿ ನೀಡಲಾಗುವ ರಜೆಗಳ ಜೊತೆಗೆ 8 ದಿನಗಳು ಪ್ರತ್ಯೇಕವಾಗಿ ತಮ್ಮ ಊರುಗಳಿಗೆ ತೆರಳು ಡೇಟಿಂಗ್ ಮಾಡುವುದಕ್ಕಾಗಿಯೇ ನೀಡಲಾಗುತ್ತದೆ. 2013 ರಿಂದ ಇತ್ತೀಚಿನ ವರ್ಷಗಳಲ್ಲಿ ಚೀನಾದಲ್ಲಿ ವಿವಾಹವಾಗುವವರ ಸಂಖ್ಯೆ ಇಳಿಕೆಯಾಗಿದ್ದು ಮಹಿಳೆಯರು ಹೆಚ್ಚು ತಮ್ಮ ಉದ್ಯೋಗಗಳತ್ತ ಗಮನ ಹರಿಸುತ್ತಿದ್ದಾರೆ. ಇದೇ ಕಾರಣದಿಂದಾಗಿ ಏಕಾಂಗಿಯಾಗಿ ಉಳಿಯುತ್ತಿರುವ ಮಹಿಳೆಯರ ಸಂಖ್ಯೆ ಹೆಚ್ಚುತ್ತಿದ್ದು, ಡೇಟಿಂಗ್ ಗಾಗಿಯೇ ಪ್ರತ್ಯೇಕ ರಜೆ ನೀಡಲು ಚೀನಾ ಸಂಸ್ಥೆಗಳು ಮುಂದಾಗುತ್ತಿವೆ. 

Related posts

ಭಾರತಕ್ಕೆ ಮೊದಲ ಪ್ರಶಸ್ತಿ! ಹರಿಯಾಣದ ನಿಶ್ತಾ ದುಡೆಜಾಗೆ ಮಿಸ್ ಡೆಫ್ ಏಷ್ಯಾ ಕಿರೀಟ

Prajanudi Admin

ಕಲಬುರಗಿ : ರಾಜ್ಯದ ಈ ಪಶುವೈದ್ಯರ ಬಳಿ ಇವೆ 29 ರಾಷ್ಟ್ರದ ಗಿಣಿಗಳು!

Prajanudi Admin

ತಾಯಿ ಹೃದಯ: ತಾಯಿಯಿಂದ ಬೇರ್ಪಟ್ಟ ಚಿರತೆ ಮರಿಯನ್ನು ದತ್ತು ಪಡೆದ ಸಿಂಹಿಣಿ, ವಿಡಿಯೋ ವೈರಲ್!

Prajanudi Admin

Leave a Comment