February 23, 2019
Prajanudi
ನ್ಯೂಸ್ ವಿದೇಶ

ಬ್ರೆಜಿಲ್ ನ ಫುಟ್ಬಾಲ್ ಕ್ಲಬ್ ನಲ್ಲಿ ಅಗ್ನಿ ಅವಘಡ: 10 ಯುವ ಆಟಗಾರರು ಸಜೀವ ದಹನ


ರಿಯೊ ಡಿ ಜನೈರೊ: ಬ್ರೆಜಿಲ್ ಅತ್ಯಂತ ಜನಪ್ರಿಯ ಫುಟ್ಬಾಲ್ ಕ್ಲಬ್ ಫ್ಲೆಮಿಂಗೋದಲ್ಲಿ ಶುಕ್ರವಾರ ಭಾರೀ ಅಗ್ನಿ ಅವಘಡ ಸಂಭವಿಸಿದ್ದು, ತರಬೇತಿನಿರತ 10 ಯುವ ಆಟಗಾರರು ಸಜೀವ ದಹನವಾಗಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.ರಿಯೊ ಡಿ ಜನೈರೊದಲ್ಲಿರುವ ಫುಟ್ಬಾಲ್ ಕ್ಲಬ್ ಫ್ಲೆಮಿಂಗೋದಲ್ಲಿ 14ರಿಂದ 17 ವರ್ಷದ ಯುವಕರು ತರಬೇತಿ ಪಡೆಯುತ್ತಿದ್ದರು ಎಂದು ಟಿವಿ ಗ್ಲೋಬೋ ತಿಳಿಸಿದೆ.ಇಂದು ಬೆಳಗ್ಗೆ ಬ್ರೆಜಿಲ್ ಪ್ರಮುಖ ಫುಟ್ಬಾಲ್ ತಂಡವೊಂದು ಈ ಕ್ಲಬ್ ನಲ್ಲಿ ಅಭ್ಯಾಸ ನಡೆಸಲಿದ್ದು, ಅಭ್ಯಾಸಕ್ಕೂ ಮುನ್ನವೇ ಅಗ್ನಿ ಅವಘಡ ಸಂಭವಿಸಿದೆ.ಸದ್ಯ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ ಎಂದು ಗ್ಲೋಬೋ ವರದಿ ಮಾಡಿದೆ.

Related posts

ಅಕ್ರಮ ಮರಳು ಗಣಿಗಾರಿಕೆ ಕೇಸ್: ಅಖಿಲೇಶ್ ಯಾದವ್ ಸಿಬಿಐ ವಿಚಾರಣೆ?

Prajanudi Admin

ಶ್ರೀಗಳು ಕೊಟ್ಟ ಕಾರಲ್ಲಿ ತೆರಳಿ ನಾಮಪತ್ರ ಸಲ್ಲಿಸಿದ್ದ ಈ ಶಾಸಕನಿಗೆ ಸಿಕ್ತು ಹ್ಯಾಟ್ರಿಕ್ ಗೆಲುವು!

Prajanudi Admin

ಮತ್ತೆ ಪ್ರತ್ಯೇಕ ರಾಜ್ಯದ ಕೂಗು: ಮಧೋಳದಲ್ಲಿ ಉತ್ತರ ಕರ್ನಾಟಕ ಧ್ವಜಾರೋಹಣ

Prajanudi Admin

Leave a Comment