February 23, 2019
Prajanudi
ಕ್ರೀಡೆ

ಟಿ20 ಯಲ್ಲಿ ದೊಡ್ಡ ಹೈಡ್ರಾಮಾ: ಧೋನಿ ಅಪೀಲ್‌ಗೆ ಕಂಗಾಲಾಗಿ ಅಂಪೈರ್ ಔಟ್ ತೀರ್ಪು, ವಿವಾದ!


ಆಕ್ಲೆಂಡ್: ನ್ಯೂಜಿಲ್ಯಾಂಡ್ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಭರ್ಜರಿ ಗೆಲುವು ಸಾಧಿಸಿದೆ. ಈ ಮಧ್ಯೆ ಧೋನಿ ಅಪೀಲ್ ನಿಂದ ಕಂಗಲಾಗಿ ಅಂಪೈರ್ ಹಾಗೂ 3ನೇ ಅಂಪೈರ್ ಸಹ ನಾಟೌಟನ್ನು ಔಟ್ ಎಂದು ತೀರ್ಪು ನೀಡಿರುವುದು ಇದೀಗ ವಿವಾದಕ್ಕೆ ಕಾರಣವಾಗಿದ್ದು ಈ ವಿಡಿಯೋ ಇದೀಗ ವೈರಲ್ ಆಗಿದೆ.ಆಕ್ಲೆಂಡ್ ನಲ್ಲಿ ನಡೆದ ಎರಡನೇ ಟಿ20 ಪಂದ್ಯದಲ್ಲಿ ಈ ಘಟನೆ ನಡೆದಿದೆ. ಪಂದ್ಯದ 6ನೇ ಓವರ್ ನಲ್ಲಿ ಕೃಣಾಲ್ ಪಾಂಡ್ಯ ಬೌಲಿಂಗ್ ನಲ್ಲಿ ಡ್ಯಾರಿಲ್ ಮಿಚೆಲ್ ಡಿಫೇನ್ಸ್ ಆಡಲು ಹೋಗಿದ್ದರು. ಈ ವೇಳೆ ಚೆಂಡು ಬ್ಯಾಟ್ ಗೆ ತಲುಗಿ ಪ್ಯಾಡ್ ಗೆ ಬಿದ್ದಿತ್ತು. ಈ ವೇಳೆ ಎಂಎಸ್ ಧೋನಿ ಎಲ್ಬಿಡಬ್ಲ್ಯೂಗೆ ಜೋರಾಗಿ ಅಪೀಲ್ ಮಾಡಿದರು. ಇದರಿಂದ ಮೈದಾನದ ಅಂಪೈರ್ ಔಟ್ ಎಂದು ತೀರ್ಪು ನೀಡಿದರು. ಅಂಪೈರ್ ರ ತೀರ್ಪಿನಿಂದ ಕಂಗಾಲಾದ ಡ್ಯಾರಿಲ್ ಡಿಆರ್ಎಸ್ ಗೆ ಅಪೀಲ್ ಮಾಡಿದರು. ಅಂತೇ ಮೂರನೇ ಅಂಪೈರ್ ಸಹ ದೃಶ್ಯಗಳನ್ನು ಪರಿಶೀಲಿಸಿದರು. ಈ ವೇಳೆ ಚೆಂಡು ಬ್ಯಾಟ್ ಗೆ ತಗುಲಿದ್ದರು. ಔಟ್ ಎಂದು ತೀರ್ಪು ನೀಡಿರುವುದು ಸದ್ಯ ವಿವಾದಕ್ಕೆ ಕಾರಣವಾಗಿದೆ. ಇನ್ನು ಮೂರನೇ ಅಂಪೈರ್ ತೀರ್ಪಿನ ವಿರುದ್ದ ನೆಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.Once the DRS messed it up there was no solution other than asking the batsman to leave. The 3rd umpire has preferred snicko over hot spot. We haven’t heard the last of this.— Harsha Bhogle (@bhogleharsha) 8 February 2019

THE GREATEST DRS FARCE OF ALL TIME JUST HAPPENEDDaryl Mitchell given out LBW by the TV umpire, despite Hotspot and replays showing a clear inside edge! Why even have it?!? #NZvIND #INDvNZLIVE: https://t.co/yeSfCoJdU9 pic.twitter.com/GRVJS8CqLm— FlashScore Cricket Commentators (@FlashCric) 8 February 2019Related posts

'ಬೇಬಿ ಸಿಟ್ಟರ್' ವೀರೇಂದ್ರ ಸೆಹ್ವಾಗ್ ಕಾಲೆಳೆದ ಮ್ಯಾಥ್ಯೂವ್ ಹೇಡನ್!

Prajanudi Admin

ಎಡಗೈ ದಾಂಡಿಗ ಬಲಗಡೆ ನಿಂತು ಸಿಕ್ಸ್: ಸ್ವಿಚ್ ಹಿಟ್ ವಿಡಿಯೋ ವೈರಲ್!

Prajanudi Admin

2020ರ ಮಹಿಳಾ, ಪುರುಷರ ಟಿ20 ವಿಶ್ವಕಪ್ ವೇಳಾಪಟ್ಟಿ ಪ್ರಕಟ; ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ!

Prajanudi Admin

Leave a Comment