February 23, 2019
Prajanudi
ಕ್ರೀಡೆ

ಬ್ಯಾಟಿಂಗ್‌ನಲ್ಲಿ ವೈಫಲ್ಯ ಕಂಡರು, ಸ್ಟಂಪಿಂಗ್‌ನಲ್ಲಿ ಎಂಎಸ್ ಧೋನಿ ಮಿಂಚು, ವಿಡಿಯೋ ವೈರಲ್!


ಹ್ಯಾಮಿಲ್ಟನ್: ನ್ಯೂಜಿಲ್ಯಾಂಡ್ ವಿರುದ್ಧ ಮೂರನೇ ಟಿ20 ಪಂದ್ಯದಲ್ಲಿ ಎಂಎಸ್ ಧೋನಿ ಮಾಡಿದ್ದ ಮಿಂಚಿನ ಸ್ಟಂಪಿಂಗ್ ವಿಡಿಯೋ ಇದೀಗ ವೈರಲ್ ಆಗಿದೆ.ಈ ಪಂದ್ಯದಲ್ಲಿ ಎಂಎಸ್ ಧೋನಿ ತಮ್ಮ ಚಾಣಾಕ್ಷತೆ ತೋರಿ ನ್ಯೂಜಿಲ್ಯಾಂಡ್ ತಂಡದ ಆಟಗಾರ ಟಿಮ್ ಸಿಫೇರ್ಟ್ ಅವರನ್ನು ಮಿಂಚಿನ ವೇಗದಲ್ಲಿ ಸ್ಟಂಪ್ ಔಟ್ ಮಾಡಿದ್ದರು. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.43 ಬಾರಿಸಿದ ಸ್ಫೋಟಕ ಬ್ಯಾಟಿಂಗ್ ಮಾಡುತ್ತಿದ್ದ ಸಿಫೇರ್ಟ್ ಕುಲದೀಪ್ ಯಾದವ್ ಬೌಲಿಂಗ್ ನಲ್ಲಿ ಬಿರುಸಿನ ಹೊಡೆತ ಹೊಡೆಯಲು ಮುಂದಕ್ಕೆ ಹೋಗಿದ್ದರು. ಈ ವೇಳೆ ಚೆಂಡು ಬ್ಯಾಟ್ ಗೆ ಮಿಸ್ ಆಗಿ ಕೀಪರ್ ಧೋನಿ ಕೈ ಸೇರಿತ್ತು. ಕೂಡಲೇ ಧೋನಿ ಸ್ಟಂಪಿಂಗ್ ಮಾಡಿದ್ದರು.ಕೂಡಲೇ ಅಂಪೈರ್ ಮೂರನೇ ಅಂಪೈರ್ ಗೆ ರವಾನಿಸಿದ್ದು ದೃಶ್ಯಗಳನ್ನು ಪರಿಶೀಲಿಸಿದ ಮೂರನೇ ಅಂಪೈರ್ ಔಟ್ ಎಂದು ತೀರ್ಪು ನೀಡಿದರು.pic.twitter.com/LyPxZu6xyA— रति शंकर शुक्ल (@rati_sankar) February 10, 2019



Related posts

'ಬೆಸ್ಟ್ ಮ್ಯಾಚ್ ಫಿನಿಷರ್ ಈಸ್ ಬ್ಯಾಕ್'; ಟೀಕಾಕಾರರಿಗೆ ಬ್ಯಾಟ್ ನಿಂದಲೇ ಉತ್ತರ ನೀಡಿದ ಎಂಎಸ್ ಧೋನಿ

Prajanudi Admin

'ಸಲಿಂಗ ಕಾಮಿ': ಕ್ಷಮೆಯಾಚಿಸಿದ ವಿಂಡಿಸ್‌ ವೇಗಿ ಶನ್ನೋನ್‌ ಗ್ಯಾಬ್ರಿಯಲ್‌

Prajanudi Admin

ಯೋಧರನ್ನು ಕಳೆದುಕೊಂಡ ನೋವು: ಕ್ರೀಡಾ ಪುರಸ್ಕಾರ ಕಾರ್ಯಕ್ರಮ ಬೇಡ ಅಂದ ಕೊಹ್ಲಿ!

Prajanudi Admin

Leave a Comment