February 23, 2019
Prajanudi
ನ್ಯೂಸ್ ವಿದೇಶ

ಅಬುಧಾಬಿ ಕೋರ್ಟ್ ನಲ್ಲಿ ಹಿಂದಿಗೆ ಮೂರನೇ ಅಧಿಕೃತ ಭಾಷೆ ಸ್ಥಾನ


ದುಬೈ: ಅಬುಧಾಬಿ  ನ್ಯಾಯಾಲಯದಲ್ಲಿ ಹಿಂದಿ ಭಾಷೆಯನ್ನು ಮೂರನೇ ಅಧಿಕೃತ ಭಾಷೆಯನ್ನಾಗಿ ಬಳಸುವ ಐತಿಹಾಸಿಕ ನಿರ್ಣಯವನ್ನು ಅಬುಧಾಬಿ ನ್ಯಾಯಾಂಗ ಇಲಾಖೆ ತೆಗೆದುಕೊಂಡಿದೆ. ಅಬುಧಾಬಿ ನ್ಯಾಯಾಂಗ ಇಲಾಖೆ ಈ ಕುರಿತು ಆದೇಶ ಹೊರಡಿಸಿದೆ.ಅರೇಬಿಕ್ ಹಾಗೂ ಒಂಗ್ಲೀಷ್ ಭಾಷೆಗಳು ಮೊದಲೆರಡು ಅಧಿಕೃತ ಭಾಷೆಗಳಾಗಿದ್ದು ಇದೀಗ ಹಿಂದಿ ಭಾಷೆಯನ್ನು ಮೂರನೇ ಅಧಿಕೃತ ಭಾಷೆಯನ್ನಾಗಿ ಘೋಷಿಸಲಾಗಿದೆ.ಅಬುಧಾಬಿಯಲ್ಲಿ ಭಾರತೀಯರು ಸೇರಿ ಏಷ್ಯಾದ ಅನೇಕ ಭಾಗಗಳ ಜನರು ಇದ್ದು ಕಾರ್ಮಿಕ  ವರ್ಗದವರು ಹಿಂದಿಯನ್ನೇ ಹೆಚ್ಚು ಬಳಸುವ ಕಾರಣ ಹಿಂದಿಯನ್ನು ನ್ಯಾಯಾಲಯದಲ್ಲಿ ಬಳಸಿದ್ದಾದರೆ ವಾದ-ಪ್ರತಿವಾದಗಳನ್ನು ಸಮರ್ಪಕವಾಗಿ ನಡೆಸಲು ಅನುಕೂಲವಾಗಲಿದೆ.  ಭಾಷಾ ಸಮಸ್ಯೆಯಿಂದ ಆಗಬಹುದಾದ ಸಮಸ್ಯೆಗಳು ಇದರಿಂದ ದೂರಾಗಲಿದೆ,ಅರಬ್ ಸಂಯುಕ್ತ ಒಕ್ಕೂಟ (ಅರಬ್ ಎಮಿರೇಟ್ಸ್) ನಲ್ಲಿ ಶೇ.30ರಷ್ಟು ಭಾರತೀಯರು ವಾಸವಿದ್ದಾರೆ. ಅಬುಧಾಬಿ ನ್ಯಾಯಾಂಗ ಇಲಾಖೆಯ ನಿರ್ಧಾರದಿಂದ ಅವರಿಗೆ ಅನುಕೂಲವಾಗಲಿದೆ.

Related posts

ಶಬರಿಮಲೆ ಪ್ರವೇಶಿಸಿದ ಇಬ್ಬರು ಮಹಿಳೆಯರು ಅಯ್ಯಪ್ಪ ಭಕ್ತರಲ್ಲ, ಮಾವೋವಾದಿಗಳು: ಬಿಜೆಪಿ

Prajanudi Admin

ಕುಖ್ಯಾತ ಶ್ರೀಗಂಧ ಮರಗಳ್ಳರ ಸೆರೆಗೆ ಸಿನಿಮೀಯ ರೀತಿ ಬೇಟೆ ನಡೆಸಿದ 200 ಪೊಲೀಸರ ಪಡೆ!

Prajanudi Admin

ಅವೈಜ್ಞಾನಿಕ ಗಣಿಗಾರಿಕೆ ಎಫೆಕ್ಟ್: ಬ್ರೆಜಿಲ್ ನ ಬೃಹತ್ ಅಣೆಕಟ್ಟು ಕುಸಿತ, 65 ಸಾವು, ನೂರಾರು ಮಂದಿ ನಾಪತ್ತೆ

Prajanudi Admin

Leave a Comment