February 23, 2019
Prajanudi
ನ್ಯೂಸ್ ವಿದೇಶ

ಬ್ರಿಟನ್ ಮಹಿಳೆಗೆ ಲೈಂಗಿಕ ಕಿರುಕುಳ: ದುಬೈನಲ್ಲಿ ಭಾರತೀಯನ ಬಂಧನ


ದುಬೈ: ರೆಸಿಡೆಂಟ್ ಟವರ್ ಒಂದರ ಲಿಫ್ಟ್ ನಲ್ಲಿ ಬ್ರಿಟೀಷ್ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ್ದ ಆರೊಪದ ಮೇಲೆ ದುಬೈಯಲ್ಲಿ ಭಾರತೀಯನೊಬ್ಬನ ಮೇಲೆ ದೂರು ದಾಖಲಾಗಿದೆ.24 ವರ್ಷದ ಭಾರತೀಯ ಕಾರ್ಮಿಕನೊಬ್ಬನ ಮೇಲೆ ದುಬೈ ಕೋರ್ಟ್ ಆಫ್ ಫಸ್ಟ್ ಇನ್ಸ್ಟನ್ಸ್ ನಲ್ಲಿ ದೂರು ದಾಖಲಾಗಿದ್ದು ಈತ 35 ವರ್ಷದ ಬ್ರಿಟನ್ ಪ್ರವಾಸಿ ಮಹಿಳೆಯೊಡನೆ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಆರೋಪ ದಾಖಲಾಗಿದೆ.ಅದು ಸಂಜೆ  4.40ರ ಸಮಯ, ನಾನು ರೆಸಿಡೆನ್ಸ್ ಟವರ್ ನ 37ನೇ ಮಹಡಿಯಲ್ಲಿದ್ದ ಜಿಮ್ ಗೆ ಯೋಗಾಭ್ಯಾಸಕ್ಕಾಗಿ ತೆರಳುತ್ತಿದ್ದೆ, ಆಗ ಓರ್ವ ಏಷ್ಯನ್ ವ್ಯಕ್ತಿ ಸಹ ನನ್ನೊಂದಿಗೆ ಲಿಫ್ಟ್ ಹತ್ತಿದ. ಆಗ ಲಿಫ್ಟ್ ನಲ್ಲಿ ನಾವಿಬ್ಬರಷ್ಟೇ ಇದ್ದೆವು. ಆತ ನನ್ನ ಅತ್ಯಂತ ಸಮೀಪದಲ್ಲಿ ನಿಂತನಲ್ಲದೆ ಅನನು ನನ್ನನ್ನು ಸ್ಪರ್ಷಿಸಲು ಮುಂದಾದ. ನಾನು ದೂರ ಸರಿದರೂ ಅವನು ದೂರ ಹೋಗಲಿಲ್ಲ,.ಎಂದು ಸಂತ್ರಸ್ಥ ಮಹಿಳೆ ದೂರು ಹೇಳಿದ್ದಾರೆ ಎಮ್ದು  ಖಲೀಜ್ ಟೈಮ್ಸ್ ವರದಿ ಮಾಡಿದೆ.”ಆತ 34ನೇ ಮಹಡಿಯಲ್ಲಿ ಹೊರ ಹೋಗಿದ್ದ. ನಾನು 37ನೇ ಮಹಡಿ ತಲುಪಿ ಲಿಫ್ಟ್ ಬಿಟ್ಟಾಗ ನನ್ನ ಬಟ್ಟೆಯಲ್ಲಿ ಆತನ ವೀರ್ಯದ ಗುರುತುಗಳನ್ನು ಪತ್ತೆ ಮಾಡಿದ್ದೆ.” ಆಕೆ ತನಿಖಾಧಿಕಾರಿಗಳಿಗೆ ಹೇಳಿದ್ದಾರೆ.ಆತನೊಬ್ಬ ಭದ್ರತಾ ಸಿಬ್ಬಂದಿ ಎಂದು ಸಂತ್ರಸ್ಥ ಮಹಿಳೆ ಹೇಳಿದ್ದಾರೆ.ಲಿಫ್ಟ್ ನಲ್ಲಿ ಯಾವುದೇ ಕ್ಯಾಮರಾಗಳಿರಲಿಲ್ಲ.ಆದರೆ ಲಿಫ್ಟ್ ಹತ್ತುವ ಮುನ್ನ ಇದ್ದ ಕ್ಯಾಮರಾದಲ್ಲಿ ಇಬ್ಬರೂ ಒಬ್ಬರ ಹಿಂದೆ ಒಬ್ಬರು ಲಿಫ್ಟ್ ಹತ್ತಿರುವುದು ಕಂಡಿದೆ. ಇದೇ ಆಧಾರದ ಮೇಲೆ ಮರುದಿನ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.”ವಿಚಾರಣೆಯ ಸಮಯದಲ್ಲಿ ಅವರು ಮಹಿಳೆ ಅತಿ ಸಮೀಪದಲಿ ನಿಂತದ್ದಾಗಿ ಆತ ಒಪ್ಪಿಕೊಂಡಿದ್ದಾನೆ.” ಎಂದು ಪೊಲೀಸರು ತಿಳಿಸಿದ್ದಾರೆ. ಈ ವೇಳೆ ಮಹಿಳೆಯ ಉಡುಪನ್ನು ವಶಕ್ಕೆ ಪಡೆದು ಪರಿಶೀಲಿಸಲಾಗಿ ಆಕೆ ಹೇಳಿದಂತೆ ಭಾರತೀಯ ವ್ಯಕ್ತಿಯ ಡಿ ಎನ್ ಎ ಕುರುಹುಗಳು ಆ ಬಟ್ಟೆಯಲಿ ಕಂಡುಬಂದಿದೆ. ಆದರೆ ಆರೋಪಿ ನ್ಯಾಯಾಲಯದಲ್ಲಿ ತನ್ನ ಮೇಲಿನ ಆರೋಪವನ್ನು ನಿರಾಕರಿಸಿದ್ದಾನೆ. ನ್ಯಾಯಾಲಯವು ಫೆ.25ರಂದು ಈ ಪ್ರಕರಣದ ತೀರ್ಪು ನೀಡಲಿದೆ.

Related posts

ಹಫೀಜ್ ಸಯೀದ್ ಜಮಾತ್-ಉದ್-ದವಾ, ಅದರ ಚಾರಿಟಿಗೆ ಪಾಕ್ ನಿಷೇಧ

Prajanudi Admin

ದಸರಾ ಉದ್ಘಾಟನೆಗೆ ಒಪ್ಪಿದ್ದ ಶ್ರೀಗಳಿಗಿತ್ತು ಜೀವ ಬೆದರಿಕೆ!

Prajanudi Admin

ಮಂಡ್ಯದ ಜನಗಳೇ ನಿಮ್ಮ ಪ್ರೀತಿಯಲ್ಲಿ ಸಣ್ಣ ಭಾಗ ಅಭಿಷೇಕ್‌ಗೂ ಇರಲಿ: ನಟಿ ಸುಮಲತಾ

Prajanudi Admin

Leave a Comment