February 23, 2019
Prajanudi
ಕ್ರೀಡೆ

ಎಂ ಎಸ್ ಧೋನಿ ದೇಶಾಭಿಮಾನಕ್ಕೆ ಟ್ವೀಟಿಗರ ಉಘೇ.. ಉಘೇ…!


ಹ್ಯಾಮಿಲ್ಟನ್​: ಟೀಮ್​ ಇಂಡಿಯ ಮಾಜಿ ನಾಯಕ​ ಹಾಗೂ ವಿಕೆಟ್​ ಕೀಪರ್​ ಧೋನಿ ದೇಶಾಭಿಮಾನಕ್ಕೆ ಟ್ವೀಟಿಗರು ಫುಲ್ ಫಿದಾ ಆಗಿದ್ದು, ತ್ರಿವರ್ಣ ಧ್ವಜ ಗೌರವ ಕಾಪಾಡಿದ ಧೋನಿ ಕಾರ್ಯಕ್ಕೆ ಎಲ್ಲಡೆ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ.ಭಾನುವಾರ ನ್ಯೂಜಿಲೆಂಡ್ ನ ಹ್ಯಾಮಿಲ್ಟನ್ ನಲ್ಲಿ ಕಿವೀಸ್ ವಿರುದ್ಧ ನಡೆದ 3ನೇ ಟಿ20 ಪಂದ್ಯದಲ್ಲಿ ಭಾರತ 4 ರನ್ ಗಳ ವೀರೋಚಿತ ಸೋಲನುಭವಿಸಿತು. ಆದರೆ, ಈ ಪಂದ್ಯದಲ್ಲಿ ನಡೆದ ಒಂದು ಘಟನೆಯಿಂದ ಮಹೇಂದ್ರ ಸಿಂಗ್ ಕೇವಲ ಕ್ರಿಕೆಟ್ ಅಭಿಮಾನಿಗಳ ಮನ ಮಾತ್ರವಲ್ಲದೇ ಇಡೀ ದೇಶದ ಜನತೆಯ ಮನಸು ಗೆದ್ದಿದ್ದಾರೆ.ಪಂದ್ಯದ ವೇಳೆ ಅಭಿಮಾನಿಯೊಬ್ಬ ಸ್ಟೇಡಿಯಂನಲ್ಲಿದ್ದ ಭದ್ರತೆಯನ್ನೂ ಲೆಕ್ಕಿಸದೆ ಮೈದಾನಕ್ಕೆ ನುಗ್ಗಿದ್ದ. ಧೋನಿ ಹತ್ತಿರ ಧಾವಿಸಿದ ಆತ ತನ್ನ ನೆಚ್ಚಿನ ಆಟಗಾರನ ಪಾದಕ್ಕೆ ಬಿದ್ದು ನಮಸ್ಕಾರ ಮಾಡಿದ. ಆದರೆ ಅಭಿಮಾನದ ಭರದಲ್ಲಿ ಆತ ತನ್ನ ಕೈಯಲ್ಲಿದ್ದ ತ್ರಿವರ್ಣ ಧ್ವಜದ ಸಮೇತ ಧೋನಿ ಕಾಲಿಗೆರಗಿದೆ. ಇದನ್ನು ಗಮನಿಸಿದ ಧೋನಿ ಕೂಡಲೇ ಆತನ ಕೈಯಿಂದ ತ್ರಿವರ್ಣ ಧ್ವಜವನ್ನು ಕಿತ್ತುಕೊಂಡರು. ಆ ಮೂಲತ ಧ್ವಜ ಗೌರವ ಕಾಪಾಡಿದರು. ಬಳಿಕ ಭದ್ರತಾ ಅಧಿಕಾರಿಗಳ ಕೈಗೆ ತ್ರಿವರ್ಣ ಧ್ವಜ ನೀಡಿದರು.ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಇದನ್ನ ನೋಡಿದ ಧೋನಿ ಅಭಿಮಾನಿಗಳು, ಮಾಹಿಯ ದೇಶಾಭಿಮಾನಕ್ಕೆ ಶಹಬ್ಬಾಸ್ ಎಂದಿದ್ದಾರೆ. ಅಲ್ಲದೆ ಧೋನಿ ಕಾರ್ಯಕ್ಕೆ ಟ್ವಿಟರ್ ನಲ್ಲಿ ಪ್ರಶಂಸೆಯ ಸುರಿಮಳೆಯನ್ನೇ ಸುರಿಸುತ್ತಿದ್ದಾರೆ.Was Indian Cricket tream captain, Lieutenant colonel in the Indian Army, above all a true patriot and son of soil!!! #Captaincoolinspires— Arjun Vijay (@ArjunRet) February 10, 2019

Being Indian is our pride🙏& To Respect our flag is our duty & MSD is just another Indian who took pride of being one💙💙💙 #Respect #Dhoni #NZvIND— P a l l a v i (@pallzie) February 10, 2019

Such a lovely man he is…we are proud of him great player captain and wicket keeper with heaps of records but no ego..salute— JPSundriyal (@SundriyalJp) February 11, 2019

He is asset of Team India…Great— Subhabrata Aich (@AichSubhabrata) February 11, 2019

सैल्यूट सर— Shashi Bhushan (@ShashiB91036521) February 11, 2019

You are great sir jai hind— JayPrakash Bharti (@JayPrak75627709) February 11, 2019

Jay Hind Jay Dhoni— Surjit Kumar Jena (@Jenasurjit2) February 11, 2019

His presence of mind is what we have have to learn.— Paras Shah (@paraspshah) February 10, 2019

Desh to usi moment pe jeet gaya bhai!!! 🙌🙏🇮🇳— Dharmendra Bhargava (@iDharmendraB) February 10, 2019

King of Presence of Mind @msdhoni— Deepankar Chakravorty (@deepankar456) February 10, 2019

Show this video to Rahul Gandhi without background commentary, he can’t able to understand what’s happening? What great Dhoni did in the video?— Tamal Das 🇮🇳 (@AskTamal) February 10, 2019

Related posts

ಮೈದಾನದಲ್ಲಿ ಕೊಹ್ಲಿಯ ’ವಿರಾಟ’ ವರ್ತನೆ ಟೀಕಾಕಾರರಿಗೆ ಕಪಿಲ್ ದೇವ್ ತೀಕ್ಷ್ಣ ಉತ್ತರ ಇದು!

Prajanudi Admin

ಪಾಕ್ ಆಯ್ತು, ಈಗ ಆಸೀಸ್‌ನಲ್ಲೂ ಬುಮ್ರಾ ಹವಾ, ಬಾಲಕನ ಬೌಲಿಂಗ್ ವಿಡಿಯೋ ವೈರಲ್!

Prajanudi Admin

ರಾಂಚಿ ಸ್ಟೇಡಿಯಂನ ಸೌತ್ ಸ್ಟ್ಯಾಂಡ್ ಗೆ ಧೋನಿ ಹೆಸರು

Prajanudi Admin

Leave a Comment