February 23, 2019
Prajanudi
ಕ್ರೀಡೆ

ಟೀಂ ಇಂಡಿಯಾ ಆಟಗಾರರ ಕಳಪೆ ಫೀಲ್ಡಿಂಗ್ ನೋಡಿ ಹಣೆ ಚಚ್ಚಿಕೊಂಡ ಹಾರ್ದಿಕ್ ಪಾಂಡ್ಯ, ವಿಡಿಯೋ ವೈರಲ್!


ಹ್ಯಾಮಿಲ್ಟನ್: ನ್ಯೂಜಿಲ್ಯಾಂಡ್ ವಿರುದ್ಧದ ಮೂರನೇ ಹಾಗೂ ನಿರ್ಣಾಯಕ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ರೋಚಕ ಸೋಲು ಕಂಡಿದೆ. ಈ ಮಧ್ಯೆ ಟೀಂ ಇಂಡಿಯಾ ಆಟಗಾರರ ಮಿಸ್ ಫೀಲ್ಡಿಂಗ್ ನಿಂದ ಬೇಸರಗೊಂಡು ಹಾರ್ದಿಕ್ ಪಾಂಡ್ಯ ಹಣೆ-ಹಣೆ ಜಜ್ಜಿಕೊಂಡಿರುವ ವಿಡಿಯೋ ಇದೀಗ ವೈರಲ್ ಆಗಿದೆ. ಪಂದ್ಯದ 12.5 ಓವರ್ ನಲ್ಲಿ ಹಾರ್ದಿಕ್ ಪಾಂಡ್ಯ ಎಸೆತದಲ್ಲಿ ಮನ್ರೋ ಥರ್ಡ್ ಮ್ಯಾನ್ ನಲ್ಲಿ ಕ್ಯಾಚ್ ನೀಡಿದ್ದರು. ಕುಲದೀಪ್ ಯಾದವ್ ಆ ಕ್ಯಾಚ್ ಮಿಸ್ ಮಾಡಿದ್ದರು. ಇದರಿಂದ ಬೇಸರಗೊಂಡ ಹಾರ್ದಿಕ್ ಹಣೆ ಜಜ್ಜಿಕೊಂಡರು. ಒಟ್ಟಿನಲ್ಲಿ ಸ್ಫೋಟಕ ಬ್ಯಾಟಿಂಗ್ ಮಾಡುತ್ತಿದ್ದ ಮನ್ರೋ ಅವರ ಕ್ಯಾಚ್ ಅನ್ನು ಕುಲದೀಪ್ ಯಾದವ್ ಹಿಡಿದಿದ್ದರೆ ಪಂದ್ಯದ ಗತಿ ಸ್ವಲ್ಪ ಬದಲಾಗುತ್ತಿತ್ತೇನೋ. ಆದರೆ ಪದೇ ಪದೇ ಕಳಪೆ ಫೀಲ್ಡಿಂಗ್ ಮಾಡಿ ಟೀಂ ಇಂಡಿಯಾ ಆಟಗಾರರು ದುಬಾರಿಯಾಗುತ್ತಿದ್ದಾರೆ. ಇದೇ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯರ ಬೌಲಿಂಗ್ ನಲ್ಲೇ ಮನ್ರೋ ಅವರ ಕ್ಯಾಚ್ ಅನ್ನು ಖಲೀಲ್ ಸಹ ಬಿಟ್ಟಿದ್ದರು. ಇದರಿಂದ ಬೇಸರಗೊಂಡ ಹಾರ್ದಿಕ್ ಅವರನ್ನು ಬೈಯ್ಯುವುದಕ್ಕಿಂತ ಬದಲಾಗಿ ತಮ್ಮ ಹಣೆಯನ್ನೇ ಜಜ್ಜಿಕೊಂಡಿದ್ದಾರೆ.Kane OUT c Kuldeep Yadav b Ahmed 🎳 27(21) 0x6 3x4Nz 150/3 14.4 OvColin 3(2)#NZvIND pic.twitter.com/5Q7SMYhFE4— Asim Majeed (@AsimTeach) 10 February 2019

pic.twitter.com/PiqIfYRwir— रति शंकर शुक्ल (@rati_sankar) 10 February 2019Related posts

ಅಸಭ್ಯ ಹೇಳಿಕೆ: ಪಾಂಡ್ಯ, ರಾಹುಲ್ ಬೇಷರತ್ ಕ್ಷಮೆಯಾಚನೆ; ಎಸ್‏ಜಿಎಂಗೆ ಬಿಸಿಸಿಐ ಸದಸ್ಯರ ಬೇಡಿಕೆ

Prajanudi Admin

ಭಾರತದ ವಿರುದ್ಧದ ಏಕದಿನ ಸರಣಿಗೆ ಆಸಿಸ್ ತಂಡ ಪ್ರಕಟ: ಬೌಲಿಂಗ್ ಲೆಜೆಂಡ್ ಶೇನ್ ವಾರ್ನ್ ಕಿಡಿ!

Prajanudi Admin

ಮೊದಲ ಭೇಟಿಯಲ್ಲೇ ರೋಹಿತ್ ನನಗೆ ಕಿಸ್ ಮಾಡಿದ್ರು: ರೋ'ಹಿಟ್' ಕುರಿತು ಸೋಫಿಯಾ ಬಿಚ್ಚಿಟ್ಟ ರಹಸ್ಯ!

Prajanudi Admin

Leave a Comment