February 23, 2019
Prajanudi
ಕ್ರೀಡೆ

ಪಿಚ್ ಗೆ ನುಗ್ಗಿ ಕಾಲಿಗೆ ಬಿದ್ದ ಅಭಿಮಾನಿ ಧೋನಿ ಪ್ರತಿಕ್ರಿಯೆ ಹೇಗಿತ್ತು ಗೊತ್ತೇ?


ಟೀಂ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿ ಅಭಿಮಾನಿಯೊಬ್ಬ ಪಿಚ್ ಗೆ ನುಗ್ಗಿದ್ದು ಕಾಲಿಗೆ ಬಿದ್ದಿರುವ ಘಟನೆ  ನ್ಯೂಜಿಲ್ಯಾಂಡ್ ವಿರುದ್ಧದ ಮೂರನೇ ಹಾಗೂ ಕೊನೆಯ ಟಿ 20 ಪಂದ್ಯದಲ್ಲಿ ನಡೆದಿದೆ. ಭದ್ರತಾ ಕೋಟೆಯನ್ನು ಭೇದಿಸಿ ಮೈದಾನ ಪ್ರವೇಶಿಸಿದ ಅಭಿಮಾನಿ, ಮಹೇಂದ್ರ ಸಿಂಗ್ ಧೋನಿ ಅವರ ಕಾಲಿಗೆ ಬಿದ್ದಿದ್ದಾರೆ. ಈ ವೇಳೆ ಅಭಿಮಾನಿಯ ಕೈಲಿದ್ದ ತ್ರಿವರ್ಣ ಧ್ವಜ ಕೆಳಗುರುಳಿತ್ತು. ತಕ್ಷಣವೇ ಎಚ್ಚೆತ್ತುಕೊಂಡ ಧೋನಿ, ಅಭಿಮಾನಿಯ ಕೈಯಿಂದ ಬಾವುಟವನ್ನು ಪಡೆದು ಸುರಕ್ಷಿತವಾಗಿ ತಲುಪಿಸಿದರು, ಈ ಮೂಲಕ ಎಂಎಸ್ ಧೋನಿ ದೇಶಪ್ರೇಮವನ್ನು ಮೆರೆದಿದ್ದಾರೆ. ಈ ಹಿಂದೆಯೂ ಸಹ ಎಂಎಸ್ ಧೋನಿಗೆ ಇಂತಹ ಸಂದರ್ಭಗಳು ಎದುರಾಗಿದ್ದು, ಅಭಿಮಾನಿಗಳು ಧೋನಿಯನ್ನು ನೋಡಲು ಪಿಚ್ ಗೆ ನುಗ್ಗಿದ ಘಟನೆಗಳು ನಡೆದಿದೆ. ಪ್ರತಿ ಬಾರಿಯೂ ಧೋನಿ ಶಾಂತಿ ಸಂಯಮದಿಂದ ವರ್ತಿಸಿದ್ದಾರೆ. 

Related posts

5ನೇ ಪಂದ್ಯ: ನ್ಯೂಜಿಲ್ಯಾಂಡ್ ವಿರುದ್ಧ ಟೀಂ ಇಂಡಿಯಾಗೆ ರೋಚಕ ಗೆಲುವು!

Prajanudi Admin

ಆಸಿಸ್ ಪ್ರವಾಸದಲ್ಲಿ ಪಂತ್ ಗೆ ಖುಲಾಯಿಸಿದ ಅದೃಷ್ಟ; ವಿಶ್ವಕಪ್ ಟೂರ್ನಿಗೆ ಖಚಿತ ಆಯ್ಕೆ

Prajanudi Admin

ನ್ಯೂಜಿಲ್ಯಾಂಡ್ ವಿರುದ್ಧದ 2 ನೇ ಏಕದಿನ ಪಂದ್ಯ: ಸ್ಪಿನ್ನರ್ ಕುಲ್ದೀಪ್ ವಿನೂತನ ದಾಖಲೆ!: ಇಲ್ಲಿದೆ ಮಾಹಿತಿ

Prajanudi Admin

Leave a Comment