February 23, 2019
Prajanudi
ಕ್ರೀಡೆ

ವಿಶ್ವಕಪ್‌ನಲ್ಲಿ ಭಾರತ ವಿರುದ್ಧದ ಸೋಲಿನ ಕಳಂಕವನ್ನು ಕಳಚುತ್ತೇವೆ: ಮೋಯಿನ್ ಖಾನ್


ಕರಾಚಿ: ಏಕದಿನ ವಿಶ್ವಕಪ್ ನಲ್ಲಿ ಟೀಂ ಇಂಡಿಯಾ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಸೋತಿರುವ ಇತಿಹಾಸವೇ ಇಲ್ಲ. ಆದರೆ ಮುಂಬರುವ ವಿಶ್ವಕಪ್ ನಲ್ಲಿ ಈ ಸೋಲಿನ ಕಳಂಕವನ್ನು ಕಳಚುತ್ತೇವೆ ಎಂದು ಪಾಕಿಸ್ತಾನ ಮಾಜಿ ನಾಯಕ ಮೋಯಿನ್ ಖಾನ್ ಹೇಳಿದ್ದಾರೆ.2019ರ ಐಸಿಸಿ ವಿಶ್ವಕಪ್ ಗೆ ಇನ್ನು ಕೆಲ ತಿಂಗಳುಗಳು ಬಾಕಿ ಇದ್ದು ಇಂಗ್ಲೆಂಡ್ ನಲ್ಲಿ ನಡೆಯಲಿರುವ ವಿಶ್ವಕಪ್ ನಲ್ಲಿ ಟೀಂ ಇಂಡಿಯಾವನ್ನು ಪಾಕಿಸ್ತಾನ ಮಣಿಸಲಿದೆ ಎಂದು ಮೋಯಿನ್ ಖಾನ್ ಹೇಳಿದ್ದಾರೆ.ಈ ಹಿಂದೆ ಆರು ಬಾರಿ ಏಕದಿನ ವಿಶ್ವಕಪ್ ನಲ್ಲಿ ಭಾರತ ಹಾಗೂ ಪಾಕಿಸ್ತಾನ ಮುಖಾಮುಖಿಯಾಗಿದ್ದವು. ಈ ಪಂದ್ಯಗಳಲ್ಲಿ ಭಾರತ ಗೆಲುವು ಸಾಧಿಸಿತ್ತು. ಈ ಸೋಲಿನ ಕಳಂಕವನ್ನು ಕಳಚುತ್ತೇವೆ. ಈಗಿನ ಪಾಕ್ ತಂಡ ಅತೀವ ಪ್ರತಿಭೆಯನ್ನು ಹೊಂದಿದ್ದು ಭಾರತ ವಿರುದ್ಧ ಗೆಲ್ಲುವ ಸಾಮರ್ಥ್ಯವನ್ನು ಪಡೆದಿದೆ. ನಾಯಕ ಸರ್ಫರಾಜ್ ಅಹ್ಮದ್ ತಂಡವನ್ನು ಉತ್ತಮವಾಗಿ ಕಟ್ಟಿದ್ದಾರೆ ಎಂದು ಹೇಳಿದ್ದಾರೆ.

Related posts

ಸರ್ಫರಾಜ್ ಖಾನ್ ಸಹೋದರನಿಗೆ ಅಮಾನತು ಶಿಕ್ಷೆ, 3 ವರ್ಷ ಬ್ಯಾಟ್ ಮುಟ್ಟುವಂತಿಲ್ಲ!

Prajanudi Admin

ಯುದ್ಧಕ್ಕೆ ಯುದ್ಧವೇ ಪ್ರತ್ಯುತ್ತರ; ಇಮ್ರಾನ್ ಖಾನ್ ಹೇಳಿಕೆಗೆ ಶಾಹಿದ್ ಆಫ್ರಿದಿ ಬೆಂಬಲ!

Prajanudi Admin

ನಾಯಕನ ಚೊಚ್ಚಲ ಶತಕದ ನೆರವು, ಚೊಚ್ಚಲ ಏಕದಿನ ಸರಣಿ ಗೆದ್ದ 'ಕ್ರಿಕೆಟ್ ಶಿಶು' ನೇಪಾಳ!

Prajanudi Admin

Leave a Comment