February 23, 2019
Prajanudi
ರಾಜಕೀಯ

ಶಾಸಕ ಸ್ಥಾನ ಅನರ್ಹ ಭೀತಿ ಬೆನ್ನಲ್ಲೇ 'ಕೈ' ರೆಬೆಲ್ ಶಾಸಕ ರಮೇಶ್ ಜಾರಕಿಹೊಳಿ ಕೊನೆಗೂ ಪ್ರತ್ಯಕ್ಷ!


ಬೆಂಗಳೂರು: ಸಚಿವ ಸ್ಥಾನ ಕೈಬಿಟ್ಟು ಹೋದ ಬಳಿಕ ರೆಬೆಲ್ ಶಾಸಕರ ದಂಡು ಸೇರಿ ನಾಪತ್ತೆ ಆಗಿದ್ದ ಕಾಂಗ್ರೆಸ್ ಶಾಸಕ ರಮೇಶ್ ಜಾರಕಿಹೊಳಿ ಕೊನೆಗೂ ಪತ್ತೆಯಾಗಿದ್ದಾರೆ.ನಿನ್ನೆ ತಡರಾತ್ರಿ ರಮೇಶ್ ಜಾರಕಿಹೊಳಿ ಅವರು ಬೆಂಗಳೂರಿನಲ್ಲಿ ಪ್ರತ್ಯಕ್ಷರಾಗಿದ್ದು, ಇಂದು ಪಕ್ಷದ ಮುಖಂಡರನ್ನು ಭೇಟಿಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.ಈ ಹಿಂದೆ ವಿಪ್ ಜಾರಿ ಹೊರತಾಗಿಯೂ ಪಕ್ಷ ಶಾಸಕಾಂಗ ಸಭೆಗೆ ಗೈರಾಗಿದ್ದ ನಾಲ್ಕು ಶಾಸಕರ ವಿರುದ್ಧ ಸ್ಪೀಕರ್ ಗೆ ದೂರು ನೀಡಲಾಗಿತ್ತು. ಈ ಪೈಕಿ ಶಾಸಕ ರಮೇಶ್ ಜಾರಕಿಹೊಳಿ, ಶಾಸಕ ಮಹೇಶ್ ಕುಮಟಹಳ್ಳಿ ಕೂಡ ಸೇರಿದ್ದಾರೆ. ಸ್ಪೀಕರ್ ಗೆ ಪಕ್ಷದ ಮುಖಂಡರು ದೂರು ನೀಡಿದ ಬೆನ್ನಲ್ಲೇ ಶಾಸಕ ಸ್ಥಾನ ಅನರ್ಹಗೊಳ್ಳುವ ಭೀತಿಯಿಂದ ನಾಪತ್ತೆಯಾಗಿದ್ದ ಶಾಸಕರು ಒಬ್ಬೊಬ್ಬರಾಗಿ ಪ್ರತ್ಯಕ್ಷರಾಗುತ್ತಿದ್ದು, ನಿನ್ನೆ ರಮೇಶ್ ಜಾರಕಿಹೊಳಿ ಕೂಡ ಬೆಂಗಳೂರಿಗೆ ವಾಪಸ್ ಆಗಿದ್ದಾರೆ.ಮೂಲಗಳ ಪ್ರಕಾರ ಎಐಸಿಸಿ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಸೇರಿದಂತೆ ಕಾಂಗ್ರೆಸ್ ನ ಒಂದು ತಂಡ ರಮೇಶ್ ಜಾರಕಿಹೊಳಿ ಜೊತೆ ಮಾತನಾಡಿದ್ದರು, ಜೊತೆಗೆ ಪಕ್ಷಕ್ಕೆ ಮರಳುವಂತೆ ಹೇಳಿದ್ದರು. ರಾಜಕೀಯ ದೊಂಬರಾಟಕ್ಕೆ ಅಂತ್ಯ ಹಾಡಲು ನಿರ್ದರಿಸಿರುವ ಕಾಂಗ್ರೆಸ್ ಅತೃಪ್ತರಿಗೆ ಸಂಪುಟದಲ್ಲಿ ಅವಕಾಶ ನೀಡಲು ನಿರ್ಧರಿಸಿದೆ. ಆದರೆ  ಕೆಸಿ ವೇಣುಗೋಪಾಲ್ ಕೋರಿಕೆಗೆ ಜಾರಕಿಹೊಳಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ಕೇಳಿ ಬಂದಿದೆ.ಸಹೋದರರಾದ ಬಾಲಚಂದ್ರ ಮತ್ತು ಲಖನ್ ಜಾರಕಿಹೊಳಿ, ಬಿಜೆಪಿ ಸೇರುವ ಪ್ರಯತ್ನ ಬಿಡಬೇಕೆಂದು ರಮೇಶ್ ಜಾರಕಿ ಹೊಳಿಗೆ ಹೇಳಿದ್ದಾರೆ. ಆದರೆ ರಮೇಶ್ ಮತ್ತು ಮಹೇಶ್ ಕುಮಟಳ್ಳಿ ಫೋನ್ ಗಳು ಸ್ವಿಚ್ ಆಫ್ ಆಗಿವೆ.Karnataka: Congress MLA Ramesh Jarkiholi arrived in Bengaluru last night. He had been incommunicado for the past few days. pic.twitter.com/mUPwNz1GzN— ANI (@ANI) February 13, 2019Related posts

ಜೆಡಿಎಸ್-ಕಾಂಗ್ರೆಸ್ ಸಂಬಂಧ ಡಿವೋರ್ಸ್ ಹಂತಕ್ಕೆ ತಲುಪಿದೆ-ಡಿ ವಿ ಸದಾನಂದ ಗೌಡ

Prajanudi Admin

ಉಪ್ಪಾರ ಸಮುದಾಯಕ್ಕೆ ಪರಿಶಿಷ್ಟ ವರ್ಗದ ಸ್ಥಾನಮಾನ ಸಿಗಬೇಕು: ಸಿದ್ದರಾಮಯ್ಯ

Prajanudi Admin

ಆಕೆ ನನ್ನ ತಂಗಿ ಇದ್ದಂತೆ, ಅದೊಂದು ಆಕಸ್ಮಿಕ ಘಟನೆಯಷ್ಟೇ ದುರ್ವರ್ತನೆ ಅಲ್ಲ: ಸಿದ್ದರಾಮಯ್ಯ ಸ್ಪಷ್ಟನೆ

Prajanudi Admin

Leave a Comment