February 23, 2019
Prajanudi
ನ್ಯೂಸ್ ವಿದೇಶ

ನನ್ನಿಂದ ಹಣ ಪಡೆದುಕೊಳ್ಳುವಂತೆ ಪ್ರಧಾನಿ ಮೋದಿ ಏಕೆ ಬ್ಯಾಂಕುಗಳಿಗೆ ಹೇಳುತ್ತಿಲ್ಲ: ವಿಜಯ್ ಮಲ್ಯ ಪ್ರಶ್ನೆ


ಲಂಡನ್: ಪ್ರಧಾನಿ ನರೇಂದ್ರ ಮೋದಿಯವರನ್ನು ನಿರರ್ಗಳ ಮಾತುಗಾರ ಎಂದು ಶ್ಲಾಘಿಸಿದ ಮದ್ಯ ಉದ್ಯಮಿ ವಿಜಯ್ ಮಲ್ಯ, ಸಾರ್ವಜನಿಕರಿಗೆ ತಾವು ನೀಡಬೇಕಾಗಿರುವ ಹಣವನ್ನು ನೀಡಲು ತಾವು ಮುಂದೆ ಬಂದಿದ್ದರೂ ಕೂಡ ಹಣ ಪಡೆಯಲು ಅವರು ಸೂಚಿಸುವುದಿಲ್ಲವೇಕೆ ಎಂದು ಕೇಳಿದ್ದಾರೆ.ಈ ಕುರಿತು ಇಂದು ಟ್ವೀಟ್ ಮಾಡಿರುವ ಅವರು, ಕಳೆದ ಬಾರಿ ಸಂಸತ್ತಿನಲ್ಲಿ ಪ್ರಧಾನಿ ಮೋದಿಯವರು ಮಾಡಿದ ಭಾಷಣ ನನ್ನ ಗಮನ ಸೆಳೆಯಿತು. ಅವರು ಖಂಡಿತವಾಗಿಯೂ ಉತ್ತಮ ಮಾತುಗಾರ. 9 ಸಾವಿರ ಕೋಟಿ ರೂಪಾಯಿ ಪಡೆದುಕೊಂಡು ಒಬ್ಬರು ಓಡಿಹೋಗಿದ್ದಾರೆ ಎಂದು ಹೆಸರನ್ನು ಹೇಳದೆ ಪ್ರಸ್ತಾಪಿಸಿದರು. ಮಾಧ್ಯಮಗಳು ಮಾಡಿರುವ ವಿಶ್ಲೇಷಣೆ ಪ್ರಕಾರ ಪ್ರಧಾನಿಯವರು ನನ್ನನ್ನು ಉಲ್ಲೇಖಿಸಿ ಹೇಳಿದ್ದಾಗಿತ್ತು.ನಾನು ಈ ಹಿಂದೆ ಮಾಡಿರುವ ಟ್ವೀಟ್ ಗಳಿಗೆ ಅನುಗುಣವಾಗಿ, ನಾನು ಕೊಡಲು ಮುಂದೆ ಬಂದಿರುವ ಹಣವನ್ನು ಪಡೆಯಲು ಬ್ಯಾಂಕುಗಳಿಗೆ ಪ್ರಧಾನಿಯವರು ಆದೇಶ ನೀಡುವುದಿಲ್ಲವೇಕೆ ಎಂದು ನಾನು ಕೇಳುತ್ತೇನೆ. ನನ್ನಿಂದ ಹಣ ತೆಗೆದುಕೊಂಡರೆ ಕಿಂಗ್ ಫಿಶರ್ ನಲ್ಲಿ ಹಾಕಿದ ಹಣವನ್ನು ಸಾರ್ವಜನಿಕರು ಪಡೆಯಬಹುದಲ್ಲವೇ ಎಂದು ವಿಜಯ್ ಮಲ್ಯ ಸರಣಿ ಟ್ವೀಟ್ ಗಳ ಮೂಲಕ ಪ್ರಶ್ನಿಸಿದ್ದಾರೆ.ಹಣಕಾಸಿಗೆ ಸಂಬಂಧಿಸಿದ ವಿವಾದವನ್ನು ಕರ್ನಾಟಕ ಹೈಕೋರ್ಟ್ ಮುಂದೆ ಬಗೆಹರಿಸಿಕೊಳ್ಳಲು ತಾನು ಅವಕಾಶ ನೀಡಿದ್ದೆ ಎಂದು ಕೂಡ ವಿಜಯ್ ಮಲ್ಯ ಹೇಳಿದ್ದಾರೆ.The Prime Ministers last speech in Parliament was brought to my attention. He certainly is a very eloquent speaker. I noticed that he referred to an unnamed person who “ran away” with 9000 crores. Given the media narrative I can only infer that reference is to me.— Vijay Mallya (@TheVijayMallya) February 14, 2019
The Prime Ministers last speech in Parliament was brought to my attention. He certainly is a very eloquent speaker. I noticed that he referred to an unnamed person who “ran away” with 9000 crores. Given the media narrative I can only infer that reference is to me.— Vijay Mallya (@TheVijayMallya) February 14, 2019
I have made the offer to settle before the Hon’Ble High Court Court of Karnataka. This cannot be dismissed as frivolous. It is a perfectly tangible, sincere, honest and readily achievable offer. The shoe is on the other foot now. Why don’t the Banks take the money lent to KFA ?— Vijay Mallya (@TheVijayMallya) February 14, 2019

Related posts

ಮದ್ಯದ ನಶೆಯಲ್ಲಿ ಕುಟುಂಬದವರನ್ನು ಗುಂಡಿಕ್ಕಿ ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡ ಥಾಯ್ ವ್ಯಕ್ತಿ!

Prajanudi Admin

ರಾಜ್ಯ ಸರ್ಕಾರಕ್ಕೆ ಭಾರೀ ಹಿನ್ನೆಡೆ, ಸ್ಟೀಲ್ ಬ್ರಿಜ್ ನಿರ್ಮಾಣಕ್ಕೆ ಹೈಕೋರ್ಟ್ ತಡೆ

Prajanudi Admin

ಬೆಂಗಳೂರು: ಸರ್ಕಾರಿ ಬಾಲ ಮಂದಿರದಲ್ಲಿ ರಾತ್ರಿ ಊಟ ಸೇವಿಸಿ 103 ಮಕ್ಕಳು ಅಸ್ವಸ್ಥ

Prajanudi Admin

Leave a Comment