Prajanudi
ಕ್ರೀಡೆ

ಐಪಿಎಲ್ ಫೀವರ್ ಶುರು: ಟ್ವೀಟರ್‌ನಲ್ಲಿ ಆರ್‌ಸಿಬಿ ಕಿಚಾಯಿಸಿದ ಸಿಎಸ್‌ಕೆ!


ಹೈದರಾಬಾದ್: ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) 2019ರ ಮೊದಲ ಎರಡು ವಾರಗಳ ವೇಳಾಪಟ್ಟಿ ಬಿಡುಗಡೆಯಾಗಿದ್ದು ಉದ್ಘಾಟನಾ ಪಂದ್ಯದಲ್ಲಿ ಆರ್‌ಸಿಬಿ ಮತ್ತು ಸಿಎಸ್‌ಕೆ ಸೆಣೆಸಾಡಲಿದ್ದು ಇದಕ್ಕೂ ಮುನ್ನ ಸಿಎಸ್‌ಕೆ ಟ್ವೀಟರ್ ನಲ್ಲಿ ಆರ್‌ಸಿಬಿ ಕಾಲೆಳೆದಿದೆ.ಮಾರ್ಚ್ 23ರಂದು ಚೆನ್ನೈನಲ್ಲಿ ಐಪಿಎಲ್ ಉದ್ಘಾಟನಾ ಪಂದ್ಯ ನಡೆಯಲಿದ್ದು ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್(ಸಿಎಸ್‌ಕೆ) ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್‌ಸಿಬಿ) ಸೆಣೆಸಾಡಲಿವೆ. ವೇಳಾಪಟ್ಟಿ ಬಿಡುಗಡೆಯಾಗುತ್ತಿದ್ದಂತೆ ಟ್ವೀಟ್ ಮಾಡಿದ್ದ ಆರ್‌ಸಿಬಿ ದಕ್ಷಿಣ ಭಾರತದ ಖಾರವಾದ ಮೈದಾನದಲ್ಲಿ ನಮ್ಮ ಮೊದಲ ಪಂದ್ಯ, ಆದರೆ ನಾವು ಸಿಹಿಯಾದ ಸಾಂಬಾರ್ ಇಷ್ಟಪಡುತ್ತೇವೆ ಎಂದಿತ್ತು.A spicy south Indian Derby for starters – but we prefer the sweet sambar…Our VIVO IPL 2019 begins away from Bengaluru on Day 1 ❤ #PlayBold— Royal Challengers (@RCBTweets) February 19, 2019 ಇದಕ್ಕೆ ತಕ್ಷಣವೇ ಪ್ರತಿಕ್ರಿಯೆ ನೀಡಿದ ಸಿಎಸ್‌ಕೆ ಯಾವಾಗಲೂ ಸಾಂಬಾರ್ ಹಳದಿ ಬಣ್ಣದಲ್ಲಿ ಇರುತ್ತದಲ್ಲಾ..? ಎಂದು ಆರ್ ಸಿಬಿಗೆ ಟ್ವೀಟ್ ಗೆ ಟಾಂಗ್ ನೀಡಿದೆ.But sambar is always #Yellove in colour no? 🤔💛🦁 https://t.co/f5Rw9ZtpH6— Chennai Super Kings (@ChennaiIPL) February 19, 2019

Related posts

ಪಾಂಡ್ಯಾ, ಕೆಎಲ್ ರಾಹುಲ್ ಅಸಭ್ಯ ಹೇಳಿಕೆ ವಿವಾದ: ನಾಯಕ ವಿರಾಟ್ ಕೊಹ್ಲಿ ಹೇಳಿದ್ದು?

Prajanudi Admin

ಐಸಿಸಿ ಟಿ-20 ರ‍್ಯಾಂಕಿಂಗ್‌ : ಜೆಮಿಮಾ ರಾಡ್ರಿಗಸ್ ನಂಬರ್ 2, ಸ್ಮೃತಿ ಮಂಧಾನ ಆರನೇ ಸ್ಥಾನಕ್ಕೆ ಜಿಗಿತ

Prajanudi Admin

ಬಿಸಿಸಿಐ ಅಮಾನತಿನ ನಂತರ ಪಾಂಡ್ಯ ಕೈ ತಪ್ಪಿದ ಬ್ರಾಂಡ್ ರಾಯಬಾರಿ ಒಪ್ಪಂದ

Prajanudi Admin

Leave a Comment