Prajanudi
ಕ್ರೀಡೆ

ಯುದ್ಧಕ್ಕೆ ಯುದ್ಧವೇ ಪ್ರತ್ಯುತ್ತರ; ಇಮ್ರಾನ್ ಖಾನ್ ಹೇಳಿಕೆಗೆ ಶಾಹಿದ್ ಆಫ್ರಿದಿ ಬೆಂಬಲ!


ಪುಲ್ವಾಮಾ ಉಗ್ರ ದಾಳಿ ಬಳಿಕ ಹಲವು ಆಟಗಾರರು ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ವಿರುದ್ಧ ಬಾಯ್ ಕಟ್ ಮಾಡಿ ಎಂದು ಕೇಳುತ್ತಿದ್ದು ಈ ಮಧ್ಯೆ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶಾಹಿದ್ ಆಫ್ರಿದಿ ಮಾತ್ರ ಪಾಕ್ ಪಿಎಂ ಇಮ್ರಾನ್ ಖಾನ್ ಅವರ ಯುದ್ಧಕ್ಕೆ ಯುದ್ಧವೇ ಉತ್ತರ ಹೇಳಿಕೆಗೆ ಬೆಂಬಲ ಸೂಚಿಸಿದ್ದಾರೆ. ಪುಲ್ವಾಮಾ ಭಯೋತ್ಪಾದನಾ ದಾಳಿಯನ್ನು ಖಂಡಿಸಿದ ಭಾರತದ ಕೆಲ ಕ್ರಿಕೆಟ್ ಮಂಡಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಸಂತಾಪವನ್ನು ಹಂಚಿಕೊಂಡಿವೆ. ಇನ್ನು ಫೆಬ್ರವರಿ 14ರಂದು ಪುಲ್ವಾಮಾ ಉಗ್ರ ದಾಳಿಯಲ್ಲಿ ತನ್ನ ದೇಶದ ಯಾವುದೇ ಪಾತ್ರವಿಲ್ಲ ಎಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದರು. ಅಲ್ಲದೆ ಯಾವುದೇ ಪ್ರತೀಕಾರದ ಕ್ರಮ ಕೈಗೊಂಡರೆ ನಾವು ಅದಕ್ಕೆ ಅದೇ ರೀತಿಯಲ್ಲಿ ಉತ್ತರ ನೀಡುತ್ತೇವೆ. ಇನ್ನು ಪುಲ್ವಾಮಾ ದಾಳಿ ಕುರಿತಂತೆ ಸಾಕ್ಷ್ಯಾಧಾರವನ್ನು ಹೊಂದಿಗಿಸಿದರೆ ಆಗ ಈ ಕುರಿತು ಕ್ರಮ ಕೈಗೊಳ್ಳುವ ಭರವಸೆಯನ್ನು ನೀಡಿದ್ದರು. ಇಮ್ರಾನ್ ಖಾನ್ ಹೇಳಿಕೆ ವಿಡಿಯೋ ಟ್ವೀಟ್ ಮಾಡಿರುವ ಶಾಹಿದ್ ಆಫ್ರಿದಿ ಅವರು ಇಮ್ರಾನ್ ಖಾನ್ ಸಂಪೂರ್ಣವಾಗಿ ಸ್ಪಷ್ಟವಾಗಿದೆ ಎಂದು ಹೇಳಿದ್ದಾರೆ.Absolutely crystal&Clear🇵🇰 https://t.co/AUc79pHvfO— Shahid Afridi (@SAfridiOfficial) February 19, 2019

Related posts

5ನೇ ಏಕದಿನ: ಕಿವೀಸ್ ಬೌಲಿಂಗ್ ದಾಳಿಗೆ ಮತ್ತೆ ತತ್ತರಿಸಿದ ಭಾರತ, 22/4

Prajanudi Admin

ಚುನಾವಣೆಯಲ್ಲಿ ಭರ್ಜರಿ ಅಂತರದಿಂದ ಗೆದ್ದ ಬಾಂಗ್ಲಾ ಕ್ರಿಕೆಟ್ ಟೀಂ ನಾಯಕ!

Prajanudi Admin

ಬ್ಯಾಟಿಂಗ್ ನಲ್ಲಿ ಭಡ್ತಿ ನೀಡಿ ಎಂದ ಚಹಲ್ ಗೆ ರೋಹಿತ್ ಶರ್ಮಾ ಕೊಟ್ಟ ಉತ್ತರ ಕೇಳಿದ್ರೆ ಬಿದ್ದು ಬಿದ್ದು ನಗ್ತೀರಾ..!

Prajanudi Admin

Leave a Comment