Prajanudi
ರಾಜಕೀಯ

ಸಮ್ಮಿಶ್ರ ಸರ್ಕಾರದಲ್ಲಿ ಎರಡೂವರೆ ಸಿಎಂಗಳು: ಅಮಿತ್ ಶಾ ಟೀಕೆ


ಬೆಂಗಳೂರು: ಲೋಕಸಭೆ ಚುನಾವಣೆಗೆ ಕೇಸರಿ ಪಕ್ಷ ಭಾರತೀಯ ಜನತಾ ಪಾರ್ಟಿಯಿಂದ ರಣಕಹಳೆ ಮೊಳಗಿದೆ. ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ನಿನ್ನೆ ದೇವನಹಳ್ಳಿಯಲ್ಲಿ ಬಿಜೆಪಿಯ ಶಕ್ತಿ ಕೇಂದ್ರ ಪ್ರಮುಖರ ರ್ಯಾಲಿಯನ್ನು ಉದ್ಘಾಟಿಸಿ ಎಂದಿನಂತೆ ರಾಜ್ಯ ಮೈತ್ರಿ ಸರ್ಕಾರದ ಮೇಲೆ ವಾಗ್ದಾಳಿ  ನಡೆಸಿದರು.ಕಳೆದ ಬಾರಿ ಪ್ರಧಾನಿಯವರು ಹುಬ್ಬಳ್ಳಿಗೆ ಬಂದಿದ್ದಾಗ ರ್ಯಾಲಿಯಲ್ಲಿ ಮಾತನಾಡಿದ್ದ ಕೆಲವು ಮಾತುಗಳನ್ನು ನಿನ್ನೆ ಅಮಿತ್ ಶಾ ಕೂಡ ಪುನರುಚ್ಛರಿಸಿದರು. ಕೇಂದ್ರದಲ್ಲಿ ಕಾಂಗ್ರೆಸ್ ಒಳಗೊಂಡಂತೆ ಸ್ಥಳೀಯ ಪಕ್ಷಗಳ ಮಹಾಘಟಬಂಧನವನ್ನು ಟೀಕಿಸಿದರು.ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿಯವರು ತಮ್ಮನ್ನು ತಾವು ಕ್ಲರ್ಕ್ ಎಂದು ಕರೆದುಕೊಳ್ಳುತ್ತಾರೆ. ಈ ಮೈತ್ರಿ ಸರ್ಕಾರದಲ್ಲಿ ಸಿದ್ದರಾಮಯ್ಯ ಸೂಪರ್ ಸಿಎಂ, ಪರಮೇಶ್ವರ್ ಅರ್ಧ ಸಿಎಂ, ಕರ್ನಾಟಕದಲ್ಲಿ  ಎರಡೂವರೆ ಸಿಎಂ ಆಡಳಿತವಿದೆ ಎಂದು ವ್ಯಂಗ್ಯವಾಡಿದರು. ಮೈತ್ರಿ ಸರ್ಕಾರ ಏನು ಮಾಡುತ್ತಿದೆ ಎಂದು ಇಡೀ ದೇಶ ನೋಡುತ್ತಿದೆ. ಈ ಮೈತ್ರಿಯಲ್ಲಿ ದೇವೇಗೌಡರು ಪ್ರಧಾನಿಯಾಗಬೇಕು ಎಂದು ಬಯಸುತ್ತಿದ್ದಾರೆ. ಪ್ರಧಾನಿ ಹುದ್ದೆಗೆ ಕಚ್ಚಾಟ ನಡೆಯಲಿದೆ. ಮುಂದಿನ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತಂದರೆ ಮೈತ್ರಿ ಸರ್ಕಾರದ ಮಜಬೂರ್ ಆಡಳಿತದ ಬದಲಿಗೆ ಮಜಬೂತ್ ಸರ್ಕಾರವನ್ನು ತರುತ್ತೇವೆ ಎಂದರು.ಮೋದಿ ಸರ್ಕಾರ ಕಳೆದ 5 ವರ್ಷಗಳಲ್ಲಿ ಜಾರಿಗೆ ತಂದಿರುವ ಅನೇಕ ಅಭಿವೃದ್ಧಿ ಯೋಜನೆಗಳನ್ನು ಮತ್ತು ಸಮ್ಮಿಶ್ರ ಸರ್ಕಾರದ ವೈಫಲ್ಯಗಳನ್ನು ಜನತೆಗೆ ಸಾರುವಲ್ಲಿ ಬಿಜೆಪಿ ಕಾರ್ಯಕರ್ತರು ಗಮನ ಹರಿಸಬೇಕೆಂದು ಅಮಿತ್ ಶಾ ಕಾರ್ಯಕರ್ತರಿಗೆ ಕರೆ ನೀಡಿದರು.ಮಹಾಘಟಬಂಧನ್’ ಒಂದು ವೇಳೆ ಅಧಿಕಾರಕ್ಕೆ ಬಂದರೆ ಎಂತಹ ಸರ್ಕಾರ ರಚಿಸಬಹುದು ಎಂಬುದನ್ನು
ಜನರ ಮುಂದಿಡಿ. ಹಾಗೆಯೇ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಈ ಮೈತ್ರಿ ನಾಯಕರನ್ನು
ಹೋಲಿಸಿ; ಯಾರು ದೇಶಕ್ಕೆ ಅಭಿವೃದ್ಧಿ ಪರ ಸರ್ಕಾರ ಕೊಡಬಲ್ಲರು ಎಂಬುದನ್ನು ಸಾರಿ ಹೇಳಿ
ಎಂದಿದ್ಧಾರೆ. ಅಲ್ಲದೇ ನಮಗೆ ಈ ಬಾರಿಯೂ ಬಹಮತ ಸಿಗುತ್ತೆ. ಶಿವಸೇನೆ, ಎಐ.ಡಿಎಂ.ಕೆ
ಸೇರಿದಂತೆ ಜೆಡಿಯು ಎಲ್ಲರೂ ನಮ್ಮ ಜೊತೆಯಲ್ಲೇ ಇದ್ದಾರೆ. ಇಡೀ ದೇಶದಲ್ಲಿ ಬಿಜೆಪಿ ಪರ
ವಾತಾವರಣ ನಿರ್ಮಾಣವಾಗಿದೆ.  ಹೀಗಾಗಿ ಕಾರ್ಯಕರ್ತರು ಇದಿನಿಂದಲೇ ಪೂರ್ಣ ಸಮಯ
ಚುನಾವಣೆಗಾಗಿ ಮೀಸಲಿಡಬೇಕು ಎಂದು ಅಮಿತ್ ಶಾ ಕರೆ ನೀಡಿದರು.

Related posts

ಶಾಸಕರ ಮಾರಾಮಾರಿ: ಕಾಂಗ್ರೆಸ್ ನಿಂದ ಕಂಪ್ಲಿ ಶಾಸಕ ಗಣೇಶ್ ಅಮಾನತು

Prajanudi Admin

ಅಂಬಿ ಸ್ಮರಣೆಗೆ 'ದಳ' ಪತಿಗಳ ಗೈರು: ಜೆಡಿಎಸ್ ನಡೆಗೆ ಅಸಮಾಧಾನ; ಮಂಡ್ಯ ಕ್ಷೇತ್ರಕ್ಕೆ ನಿಖಿಲ್-ಅಭಿಷೇಕ್ ಪೈಪೋಟಿ!

Prajanudi Admin

ಕಾಂಗ್ರೆಸ್ ಶಾಸಕರ ಬಡಿದಾಟ: ಗಣೇಶ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತೇನೆ; ಆನಂದ್ ಸಿಂಗ್ ಪತ್ನಿ

Prajanudi Admin

Leave a Comment