Prajanudi
ನ್ಯೂಸ್ ವಿದೇಶ

ಬಾಲಾಕೋಟ್ ನಿಂದ ಖೈಬರ್ ಪಕ್ತುಂಕ್ವಾಗೆ 200ಕ್ಕೂ ಹೆಚ್ಚು ಉಗ್ರರ ಶವಗಳ ರವಾನೆ: ಗಿಲ್ಗಿಟ್ ನಲ್ಲಿರುವ ಅಮೆರಿಕ ಕಾರ್ಯಕರ್ತನ ಹೇಳಿಕೆ


ಇಸ್ಲಾಮಾಬಾದ್: ಬಾಲಾಕೋಟ್ ನಲ್ಲಿ ಭಾರತೀಯ ವಾಯುಸೇನೆ ನಡೆಸಿದ ವಾಯುದಾಳಿಯಲ್ಲಿ 200ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದು, ಬಾಲಾಕೋಟ್ ಕ್ಯಾಂಪ್ ನಿಂದ ಶವಗಳನ್ನು ಖೈಬರ್ ಫಕ್ತುಂಕ್ವಾ ಪ್ರಾಂತ್ಯಕ್ಕೆ ರವಾನೆ ಮಾಡಲಾಗುತ್ತಿತ್ತು ಎಂದು ಗಿಲ್ಗಿಟ್ ನಲ್ಲಿರುವ ಅಮೆರಿಕ ಹೋರಾಟಗಾರರೊಬ್ಬರು ಹೇಳಿದ್ದಾರೆ.ಈ  ಬಗ್ಗೆ ಟ್ವೀಟ್ ಮಾಡಿರುವ ಅಮೆರಿಕ ಮೂಲದ ಹೋರಾಟಗಾರ ಸೆಂಗೆ ಹಸ್ನಾನ್ ಸೆರಿಂಗ್, ಟ್ವೀಟ್ ಮಾಡಿದ್ದು, ಟ್ವೀಟ್ ನಲ್ಲಿ ಬಾಲಾಕೋಟ್ ಕ್ಯಾಂಪ್ ನಿಂದ ಪಾಕಿಸ್ತಾನ ಸೇನೆ ಹಲವು ಶವಗಳನ್ನು ಖೈಬರ್ ಪಕ್ತುಂಕ್ವಾ ಮತ್ತು ಅದರ ಸುತ್ತಮುತ್ತಲಿನ ಬುಡಕಟ್ಟು ಪ್ರಾಂತ್ಯಗಳಿಗೆ ರವಾನೆ ಮಾಡಿತ್ತು ಎಂದು ಹೇಳಿದ್ದಾರೆ. ಅಲ್ಲದೆ ಇದಕ್ಕೂ ಪೂರಕವೆಂಬಂತೆ ದಾಳಿ ಬಳಿಕ ಬಾಲಾಕೋಟ್ ಕ್ಯಾಂಪ್ ಗೆ ಭೇಟಿ ನೀಡಿದ್ದ ಪಾಕಿಸ್ತಾನ ಸೇನಾಧಿಕಾರಿಗಳ ವಿಡಿಯೊವೊಂದನ್ನೂ ಕೂಡ ಅಪ್ಲೋಡ್ ಮಾಡಿದ್ದಾರೆ.ವಿಡಿಯೋದಲ್ಲಿ ಅಲ್ಲಿನ ಬುಡಕಟ್ಟು ನಾಯಕರೊಂದಿಗೆ ಮಾತನಾಡಿರುವ ಸೇನಾಧಿಕಾರಿಯೊಬ್ಬರು ‘ಜಿಹಾದ್ ಗಾಗಿ ನಮ್ಮ 200ಕ್ಕೂ ಅಧಿಕ ಮಂದಿ ಹುತಾತ್ಮರಾಗಿದ್ದಾರೆ. ಪಾಕಿಸ್ತಾನಕ್ಕಾಗಿ ಅವರ ಮಾಡುತ್ತಿದ್ದ ಹೋರಾಟದಿಂದಾಗಿ ಅವರು ಅಲ್ಲಾಹುನ ಪ್ರೀತಿ ಪಾತ್ರರಾಗಿದ್ದಾರೆ ಎಂದು ವಿಡಿಯೋದಲ್ಲಿ ಹೇಳಿದ್ದಾನೆ. ಆದರೆ ವಿಡಿಯೋ ಕುರಿತು ಮಾತನಾಡಿರುವ ಸೆಂಗೆ ಹಸ್ನಾನ್ ಸೆರಿಂಗ್, ವಿಡಿಯೋದಲ್ಲಿ ಪಾಕ್ ಸೇನಾಧಿಕಾರಿ 200ಕ್ಕೂ ಅಧಿಕ ಮಂದಿ ಸಾವಿಗೀಡಾಗಿದ್ದಾರೆ ಎಂದು ಹೇಳಿದ್ದಾನೆಯಾದರೂ, ಸಾವಿನ ನಿಖರ ಸಂಖ್ಯೆಯ ಕುರಿತು ಮಾಹಿತಿ ಇಲ್ಲ ಎಂದು ಹೇಳಿದ್ದಾರೆ.ಒಟ್ಟಾರೆ ಅಮೆರಿಕ ಹೋರಾಟಗಾರರ ಹೇಳಿಕೆಗೆ ಇದೀಗ ಮತ್ತೊಂದು ಸುದ್ದಿನ ಚರ್ಚೆಗೆ ಗ್ರಾಸವಾಗಿದೆ.#Pakistan military officer admits to “martyrdom” of more than 200 militants during Indian strike on #Balakot. Calls the terrorists Mujahid who receive special favors/ sustenance from Allah as they fight to support PAK government [against enemies]. Vows to support families pic.twitter.com/yzcCgCEbmu— #SengeSering ས།ཚ། (@SengeHSering) March 13, 2019Related posts

ಶಬರಿಮಲೆಗೆ ಮಹಿಳೆಯರ ಪ್ರವೇಶ: ದೇವಾಲಯದ ಸಂಪ್ರದಾಯಕ್ಕೆ ಬೆಲೆ ಕೊಡಿ, ಹಿಂದೂ ಧರ್ಮ ರಕ್ಷಿಸಿ- ನಟಿ ಶ್ರೀರೆಡ್ಡಿ

Prajanudi Admin

ಪಂಜಾಬ್, ಖೈಬರ್ ಪ್ರಾಂತ್ಯದಲ್ಲಿ ವಿಮಾನ ಸೇವೆ ರದ್ದುಗೊಳಿಸಿದ ಪಾಕ್

Prajanudi Admin

ಕಾಂಗ್ರೆಸ್ ಪಕ್ಷದ 10 ಹೊಸ ರಾಷ್ಟ್ರೀಯ ವಕ್ತಾರರನ್ನು ನೇಮಿಸಿದ ರಾಹುಲ್ ಗಾಂಧಿ

Prajanudi Admin

Leave a Comment