Prajanudi
ನ್ಯೂಸ್ ವಿದೇಶ

ಗಡಿಯುದ್ದಕ್ಕೂ ಪಾಕಿಸ್ತಾನ ಸವಾಲಿನ ಪರಿಸ್ಥಿತಿ'ಯನ್ನು ಎದುರಿಸುತ್ತಿದೆ: ಖುರೇಷಿ


ಇಸ್ಲಾಮಾಬಾದ್ : ಭಾರತ ಹಾಗೂ ಅಪ್ಘಾನಿಸ್ತಾನದ ಗಡಿಯುದ್ಧಕ್ಕೂ ಪಾಕಿಸ್ತಾನ ಸವಾಲಿನ ಪರಿಸ್ಥಿತಿಯನ್ನು ಎದುರಿಸುತ್ತಿದೆ ಎಂದು ಪಾಕಿಸ್ತಾನ ವಿದೇಶಾಂಗ ಸಚಿವ ಶಾ ಮೊಹಮ್ಮದ್​ ಖುರೇಷಿ  ಹೇಳಿದ್ದಾರೆ.ಉದ್ಯಮ ಮುಖಂಡರ ಶೃಂಗಸಭೆಯಲ್ಲಿ ಮಾತನಾಡಿದ ಅವರು, ನಗದು-ಕಟ್ಟಿದ ದೇಶದ ಆರ್ಥಿಕತೆಯನ್ನು ಪುನಶ್ಚೇತನಗೊಳಿಸುವುದು  ಪಾಕಿಸ್ತಾನದ ತೆಹ್ರೀಕ್-ಇ-ಇನ್ಸಾಫ್ ಸರ್ಕಾರದ ಅತ್ಯುನ್ನತ ಆದ್ಯತೆಯಾಗಿದೆ ಆದರೆ, ಪಶ್ಚಿಮ ಹಾಗೂ ಪೂರ್ವ ಗಡಿಯುದ್ಧಕ್ಕೂ ಸವಾಲಿನ ಪರಿಸ್ಥಿತಿಯನ್ನು ದೇಶ ಎದುರಿಸುತ್ತಿದೆ ಎಂದರು ಎಂದು ಜಿಯೊ ನ್ಯೂಸ್ ವರದಿ ಮಾಡಿದೆ. ಫೆಬ್ರವರಿ 14 ರಂದು ಪುಲ್ವಾಮಾ ದಾಳಿ ಬಳಿಕ ಭಾರತ ಹಾಗೂ ಪಾಕಿಸ್ತಾನ ನಡುವೆ ಉಂಟಾಗಿದ್ದ ಉದ್ರಿಕ್ತ ವಾತಾವರಣ ಉಲ್ಲೇಖಿಸಿ ಮಾತನಾಡಿದ ಶಾ ಮೊಹಮ್ಮದ್ ಖುರೇಶಿ, ಗಡಿಯಾಚೆಗೆ ಭಯೋತ್ಪಾದನೆ ತಡೆಗಟ್ಟಲು ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ಅಪ್ಘಾನಿಸ್ತಾನ ಹಾಗೂ ಭಾರತ ಎರಡು ರಾಷ್ಟ್ರಗಳು ಪಾಕಿಸ್ತಾನವನ್ನು ದೂರುತ್ತಿವೆ ಎಂದು ಹೇಳಿದರು.ಭಾರತದ ಜೊತೆಗೆ ಸಂಬಂಧ ವೃದ್ಧಿಗೆ ಪ್ರಯತ್ನಿಸಲಾಗುತ್ತಿದೆ. ಭಾರತ ಮಾತುಕತೆ ಮೂಲಕ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಒಪ್ಪಿದರೆ ಪ್ರಧಾನಿ ಇಮ್ರಾನ್ ಖಾನ್ ಕೂಡಾ ಮುಂದಿನ ಹೆಜ್ಜೆ ಕೈಗೊಳ್ಳಲಿದ್ದಾರೆ ಎಂದು ಖುರೇಷಿ ಹೇಳಿದ್ದಾರೆ ಜಿಯೋ ನ್ಯೂಸ್ ವರದಿ ಮಾಡಿದೆ.

Related posts

ಅಪಘಾತ ಪ್ರಕರಣ: ಗೀತಾ ವಿಷ್ಣು ಮಾದಕದ್ರವ್ಯ ಸೇವನೆ ಸಿಸಿಬಿ ಚಾರ್ಜ್ ಶೀಟ್ ನಲ್ಲಿ ಬಹಿರಂಗ

Prajanudi Admin

ಭಾರತದೊಂದಿಗೆ ಆದ್ಯತೆಯ ವ್ಯಾಪಾರ ಕೊನೆಗೊಳಿಸಲು ಟ್ರಂಪ್ ಮುಂದು!

Prajanudi Admin

ವಿಧಾನಸೌಧ ಗೇಟ್ ಬಳಿ 14 ಲಕ್ಷ ರು. ನಗದು ಜಪ್ತಿ, ಸಚಿವರ ಕಚೇರಿ ಸಿಬ್ಬಂದಿ ವಶಕ್ಕೆ

Prajanudi Admin

Leave a Comment