Prajanudi
ನಮ್ಮ ವಿಶೇಷ ವಿಶೇಷ ವರದಿ

ಇವನೇ ಜಗತ್ತಿನ ಮೊದಲ ಕೃತಕ ಬುದ್ಧಿಮತ್ತೆ ನ್ಯೂಸ್ ಆ್ಯಂಕರ್‌!


ಬೀಜಿಂಗ್: ಜಗತ್ತಿನ ಪ್ರಪ್ರಥಮ ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌ (ಕೃತಕ ಬುದ್ಧಿಮತ್ತೆ) ನ್ಯೂಸ್‌ ಆ್ಯಂಕರ್‌ ಚೀನಾದಲ್ಲಿ ಸೃಷ್ಟಿಯಾಗಿದ್ದಾನೆ.

ಬುಧವಾರ (ನವೆಂಬರ್7) ವೂಝೆನ್‌ ನಲ್ಲಿ ನಡೆದಿದ್ದ ವಿಶ್ವ ಅಂತರ್ಜಾಲದ ಸಮ್ಮೇಳನದಲ್ಲಿ ಚೀನಾದ  ಕ್ಸಿನ್‌ಹುವಾ ಸುದ್ದಿ ಸಂಸ್ಥೆ ಈ ಕೃತಕ ಬುದ್ದಿಮತ್ತೆ ನ್ಯೂಸ್ ಆ್ಯಂಕರ್‌ ನನ್ನು ಜಗತ್ತಿಗೆ ಪರಿಚಯಿಸಿತು.

Xinhua’s first English #AI anchor makes debut at the World Internet Conference that opens in Wuzhen, China Wednesday pic.twitter.com/HOkWnnfHdW— China Xinhua News (@XHNews) November 7, 2018

ಆಂಗ್ಲ ಭಾಷೆಯಲ್ಲಿ ಮಾತನಾಡಬಲ್ಲ ಈ ಆ್ಯಂಕರ್‌ ತಾನು ಬರವಣಿಗೆಯಲ್ಲಿ ನೀಡಿದ್ದನ್ನು ತೆರೆಯ ಮೇಲೆ ಓದಲು ಸಮರ್ಥನಾಗಿರುವುದಾಗಿ ಹೇಳಿದ್ದಾನೆ.

ಚೀನದ ಕ್ಸಿನ್‌ಹುವಾ ಮತ್ತು ಸರ್ಚ್‌ ಇಂಜಿನ್‌ ಕಂಪೆನಿ ಸೊಗೋವ್‌ ಸಂಸ್ಥೆ ಜತೆಗೂಡಿ ಸೃಷ್ಟಿಸಿದ್ದ ಈ ನ್ಯೂಸ್ ಆ್ಯಂಕರ್‌ ಚೀನಾದ  ಝಿನುವಾದ ಜಾಂಗ್ ಜಾಹೋ ಎಂಬ ಆ್ಯಂಕರ್‌ ನ ಪ್ರತಿರೂಪವಾಗಿದೆ.

ನ್ಯೂಸ್ ಚಾನಲ್ ನಲ್ಲಿ ತನ್ನನ್ನು ತಾನು ಪರಿಚಯಿಸಿಕೊಂಡ ಈ ಕೃತಕ ಬುದ್ದಿಮತ್ತೆ ನ್ಯೂಸ್ ಆ್ಯಂಕರ್‌ “ಎಲ್ಲರಿಗೂ ನಮಸ್ಕಾರ, ನಾನು ಕೃತಕ ಬುದ್ಧಿಮತ್ತೆಯುಳ್ಳ ಆ್ಯಂಕರ್‌ ಚಾನಲ್ ನಲ್ಲಿ ಇದು ನನ್ನ ಮೊದಲ ದಿನ. ನನ್ನ ದನಿ ಜಾಂಗ್ ಜಾಹೋ ಅವರ ಕಂಠದ ಪ್ರತಿರೂಪ. ಝಿನುವಾದಲ್ಲಿ ನಿಜ ಆ್ಯಂಕರ್‌ ಆಗಿರುವ ಅವರ ಪ್ರತಿರೂಪವೇ ನಾನಾಗಿದ್ದೇನೆ.

“ಮಾದ್ಯಮ ಕ್ಷೇತ್ರವು ನಿರಂತರ ಹೊಸತನವನ್ನು ಅಪೇಕ್ಷಿಸುತ್ತದೆ. ನನ್ನ ಸಿಸ್ಟಂನಲ್ಲಿ ಟೈಪ್ ಮಾಡಿದ ಎಲ್ಲಾ ಮಾಹಿತಿಯನ್ನು ನಾನು ಸದಾ ತಿಳಿಸಲಿದ್ದೇನೆ.ನಾನು ಹೊಸ ಹೊಸ ಅನುಭವವನ್ನು ನಿಮ್ಮಮುಂದೆ ಪ್ರಸ್ತುತಪಡಿಸಲು ಬಯಸುತ್ತೇನೆ.” ಎಂದಿದ್ದಾನೆ.Related posts

ವಿಶ್ವಧರ್ಮ ಸಮ್ಮೇಳನದಲ್ಲಿ ವೀರ ಸನ್ಯಾಸಿ ವಿವೇಕಾನಂದರ ವಿಜಯಪತಾಕೆ!

Prajanudi Admin

ವಿಶ್ವ ಮಾನಸಿಕ ಆರೋಗ್ಯ ದಿನ: ಯುವಜನತೆಯನ್ನು ಕಾಡುವ ಮಾನಸಿಕ ಸಮಸ್ಯೆ, ಖಿನ್ನತೆಗೆ ಪರಿಹಾರ ಹೇಗೆ? ಇಲ್ಲಿದೆ ಮಾಹಿತಿ

Prajanudi Admin

ಸಲಿಂಗಕಾಮ ಅಪರಾಧವಲ್ಲ: ಸಲಿಂಗ ವಿವಾಹ ಕಾನೂನುಬದ್ದ ಎನ್ನುವ ದೇಶಗಳಾವುದು ಗೊತ್ತೆ?

Prajanudi Admin

Leave a Comment