Prajanudi
ಕ್ರೀಡೆ

ಡಿ.18ಕ್ಕೆ ಐಪಿಎಲ್ ಹರಾಜು ಪ್ರಕ್ರಿಯೆ: ಈ ಬಾರಿ ಬೆಂಗಳೂರು ಬದಲು ಜೈಪುರದಲ್ಲಿ ನಡೆಸಲು ಬಿಸಿಸಿಐ ತೀರ್ಮಾನ


2019ರ ಇಂಡಿಯನ್ ಪ್ರೀಮಿಯರ್ ಲೀಗ್ ಗಾಗಿ ಆಟಗಾರರ ಘರಾಜು ಪ್ರಕ್ರಿಯೆಯು ಡಿಸೆಂಬರ್ 18ರಂದು ಜೈಪುರದಲ್ಲಿ ನಡೆಯಲಿದೆ ಎಂದು ಬಿಸಿಸಿಐ ಸೋಮವಾರ ಘೋಷಿಸಿದೆ.

ಹರಾಜು  ಪ್ರಕ್ರಿಯೆ ಒಂದು ದಿನಪೂರ್ತಿ ನಡೆಯಲಿದೆ.ಹಾಗೆಯೇ ಈ ಬಾರಿ ಬೆಂಗಳೂರಿನ ಬದಲಿಗೆ ಪಿಂಕ್ ಸಿಟಿ ಜೈಪುರದಲ್ಲಿ ಆಟಗಾರರ ಹರಾಜು ನಡೆಯಲಿದೆ.

ಹರಾಜಿನಲ್ಲಿ ಈ ಬಾರಿ ಒಟ್ಟು 70 ಆಟಗಾರರು ಬಿಕರಿಯಾಗಲಿದ್ದಾರೆ. ಇದರಲ್ಲಿ 50 ಭಾರತೀಯ ಆಟಗಾರರಾದರೆ 20  ವಿದೇಶೀ ಕ್ರಿಕೆಟಿಗರಾಗಿದ್ದಾರೆ.ಎಂಟು ತಂಡಗಳು ಐಪಿಎಲ್ ಹರಾಜಿನಲ್ಲಿದ್ದು ಒಟ್ಟು ಮೊತ್ತ 145.25 ಕೋಟಿ ರೂ. ಆಗಿರಲಿದೆ.

ಕೆಲ ತಂಡಗಳು ತಮ್ಮ ಹರಾಜು ಪ್ರಕ್ರಿಯೆಗೆ ಮುನ್ನವೇ ಆಟ್ಗಾರರ ಹೆಸರನ್ನು ಘೋಷಿಸಿದೆ. ಕಿಂಗ್ಸ್ ಇಲೆವೆನ್ ಪಂಜಾಬ್ ಯುವರಾಜ್ ಸಿಂಗ್ ಹಾಗೂ ಡೆಲ್ಲಿ ಡೇರ್ ಡೆವಿಲ್ಸ್ ತಂಡ ಗೌತಮ್ ಗಂಭೀರ್ ಹೆಸರನ್ನು ಬಿಟ್ಟಿವೆ

2018 ರ ಆವೃತ್ತಿಯ ಹರಾಜಿನಲ್ಲಿ ರಾಜಸ್ಥಾನ್ ರಾಯಲ್ಸ್ ತಮ್ಮ ತಂಡಕ್ಕೆ ಜಯದೇವ್ ಉನಾದ್ಕೇತ್ ಅವರನ್ನು 11.5 ಕೋಟಿ ರೂ ಪಾವತಿಸಿ ಖರೀದಿಸಿತ್ತು. ಆದರೆ ಈ ಸಾಲಿನಲ್ಲಿ ಅವರ ಹೆಸರನ್ನು ಕೈಬಿಟ್ಟಿದೆ.

ಗಾಯಾಳು ವೃದ್ದಿಮಾನ್ ಸಹಾ ಹಾಗೂ ವೆಸ್ಟ್ ಇಂಡೀಸ್ ಟಿ೨೦ ನಾಯಕ ಕಾರ್ಲೋಸ್ ಬ್ರಾಥ್ವೈಟ್  ಅವರ ಹೆಸರನ್ನು ಸನ್ ರೈಸರ್ಸ್ ಹೈದರಾಬಾದ್ ತಂಡ ಸೂಚಿಸದಿರಲು ತೀರ್ಮಾನಿಸಿದೆ.

ಮುಂಬೈ ಇಂಡಿಯನ್ಸ್ ಜೆಪಿ ಡುಮಿನಿ ಮತ್ತು ವೇಗದ ಬೌಲಿಂಗ್ ಜೋಡಿ ಪ್ಯಾಟ್ ಕಮ್ಮಿನ್ಸ್ ಮತ್ತು ಬಾಂಗ್ಲಾದೇಶದ ಮುಸ್ತಾಫಿಝರ್ ರಹಮಾನ್ ಅವರಂತಹ ಅತ್ಯುತ್ತಮ ಅಂತಾರಾಷ್ಟ್ರೀಯ ಆಟಗಾರರನ್ನು ಹೊರಗಿಟ್ಟಿದೆ.

2019ರಲ್ಲಿ ಸಾರ್ವತ್ರಿಕ ಚುನಾವಣೆ ಇದ್ದು ಈ ಕಾರಣ ಐಪಿಎಲ್ ಪಂದ್ಯ ಭಾರತದ ಹೊರಗೆ ನಡೆಯುವ ಸಾಧ್ಯತೆ ಇದೆ.

Related posts

ಮತ್ತೆ ಡಕೌಟ್, ಡಿಆರ್‌ಎಸ್‌ನಲ್ಲಿ ಮತ್ತೆ ಕೆಎಲ್ ರಾಹುಲ್ ಫೇಲ್, ನೆಟಿಗರಿಂದ ಟ್ರೋಲ್!

Prajanudi Admin

ಟಿ20 ಕ್ರಿಕೆಟ್ ಇತಿಹಾಸದಲ್ಲೇ ಕನಿಷ್ಠ ರನ್ ಬಾರಿಸಿ ಚೀನಾ ಕಳಪೆ ವಿಶ್ವದಾಖಲೆ!

Prajanudi Admin

80 ವರ್ಷ ವಯಸ್ಸಾಗಿ ವ್ಙೀಲ್ ಚೇರ್ ಮೇಲಿದ್ದರೂ, ಧೋನಿಯೇ ನನ್ನ ಮೊದಲ ಆಯ್ಕೆ: ಎಬಿಡಿ

Prajanudi Admin

Leave a Comment