Prajanudi
ರಾಜಕೀಯ

ಹಂಪಿ ಉತ್ಸವಕ್ಕಿಂತಲೂ ಜನರಿಗೆ ಹೆಚ್ಚಿನ ಪ್ರಾಮುಖ್ಯತೆ – ಡಿ. ಕೆ. ಶಿವಕುಮಾರ್


ಬೆಂಗಳೂರು: ಹಂಪಿ ಉತ್ಸವಕ್ಕಿಂತಲೂ ಬರದಿಂದ ತೊಂದರೆ ಎದುರಿಸುತ್ತಿರುವ ರಾಜ್ಯದ ಜನರಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುವುದಾಗಿ ಜಲಸಂಪನ್ಮೂಲ ಮತ್ತು ವೈದ್ಯಕೀಯ ಶಿಕ್ಷಣ ಖಾತೆ ಸಚಿವ ಡಿ. ಕೆ. ಶಿವ ಕುಮಾರ್ ಹೇಳಿದ್ದಾರೆ.
ಅದ್ದೂರಿಯಾಗಿ ಹಂಪಿ ಉತ್ಸವ ಆಚರಿಸುವುದಿಲ್ಲ  ಎಂಬ  ಸರ್ಕಾರದ ನಿರ್ಧಾರ ಕುರಿತಂತೆ ಪ್ರತಿಕ್ರಿಯಿಸಿದ ಅವರು, ರಾಜ್ಯದ ಬಹುತೇಕ ಕಡೆಗಳಲ್ಲಿ ಬರ ಪರಿಸ್ಥಿತಿ ಇದೆ. ಜನರಿಗೆ ಕುಡಿಯುವ ನೀರು ಪೂರೈಕೆ ಮಾಡಿ ಬರಪರಿಸ್ಥಿತಿಗೆ ಸ್ಪಂದಿಸಬೇಕಾಗಿದೆ. ಜನರಿಗೆ ಪ್ರಾಮುಖ್ಯತೆ ನೀಡುವ ನಿಟ್ಟಿನಲ್ಲಿ ಹಂಪಿ ಉತ್ಸವವನ್ನು ಅದ್ದೂರಿಯಾಗಿ ಆಚರಿಸದಂತೆ ನಿರ್ಧರಿಸಲಾಗಿದೆ ಎಂದರು.
ಈ ಮಧ್ಯೆ  ಹಂಪಿ ಉತ್ಸವ ಕುರಿತಂತೆ  ಮಾತನಾಡಿದ ಲೋಕಸಭೆಯಲ್ಲಿನ ಕಾಂಗ್ರೆಸ್ ನಾಯಕ ಎಂ. ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ಜಾತ್ಯತೀತ ಸರ್ಕಾರವಾಗಿದ್ದು, ಸಮಾಜದ ಎಲ್ಲಾ ವರ್ಗಗಳಿಗಾಗಿ ಕೆಲಸ ಮಾಡುವುದಾಗಿ ತಿಳಿಸಿದರು.

ಬರ ಪರಿಸ್ಥಿತಿಯನ್ನು ನಿಭಾಯಿಸಲು ಮೊದಲಿಗೆ ಹಣಕಾಸಿನ ನೆರವು ನೀಡುವುದಾಗಿ ಹೇಳಿದ ಕೇಂದ್ರಸರ್ಕಾರ ನಂತರ, ಯಾವುದೇ ನೆರವು ನೀಡಲಿಲ್ಲ.  ರಾಜ್ಯದಲ್ಲಿನ ಬರ ಪರಿಸ್ಥಿತಿ ವಿಷಯದಲ್ಲೂ ಕೇಂದ್ರಸರ್ಕಾರ ಈಗ ರಾಜಕೀಯ ಬಣ್ಣ ಕಟ್ಟುತ್ತಿದೆ ಎಂದು ವಾಗ್ದಾಳಿ ನಡೆಸಿದರು.

ಕಾಂಗ್ರೆಸ್ ನಾಯಕರು ಬಿಜೆಪಿಗೆ ಸೇರ್ಪಡೆಯಾಗುತ್ತಿದ್ದಾರೆ ಎಂಬ ವದಂತಿ ಹಬ್ಬುವ ಮೂಲಕ ನಮ್ಮ ನಾಯಕರ ಮೇಲೆ ಬಿಜೆಪಿ ಈಗ ಒತ್ತಡ ಹಾಕಲು ಪ್ರಯತ್ನಿಸುತ್ತಿದೆ ಎಂದು ಖರ್ಗೆ  ಹೇಳಿದರು.

Related posts

ವಿಧಾನಪರಿಷತ್ ಉಪಚುನಾವಣೆ : ಕಾಂಗ್ರೆಸ್ ಅಭ್ಯರ್ಥಿಗಳ ಹೆಸರು ಪ್ರಕಟ

Prajanudi Admin

ವಿಧಾನ ಪರಿಷತ್ ಚುನಾವಣೆ : ಕೊನೆ ಕ್ಷಣದಲ್ಲಿ ಕಣದಿಂದ ಬಿಜೆಪಿ ಹಿಂದೆ ಸರಿಯಲು ಕಾರಣವೇನು?

Prajanudi Admin

ರಂಗೇರಿದ ಉಪ ಚುನಾವಣಾ ಕಣ: ಶಿವಮೊಗ್ಗದಲ್ಲಿ ರಾಘವೇಂದ್ರ, ರಾಮನಗರದಿಂದ ಚಂದ್ರಶೇಖರ್ ನಾಮಪತ್ರ ಸಲ್ಲಿಕೆ

Prajanudi Admin

Leave a Comment