Prajanudi
ಕ್ರೀಡೆ

ಎಲ್ಲ ಮಾದರಿಯ ಕ್ರಿಕೆಟ್ ನಿಂದ ಟೀಂ ಇಂಡಿಯಾ ಆಟಗಾರ ಗೌತಮ್ ಗಂಭೀರ್ ನಿವೃತ್ತಿ


ನವದೆಹಲಿ: ಭಾರತ ತಂಡದ ಮಾಜಿ ಓಪನಿಂಗ್ ಬ್ಯಾಟ್ಸಮನ್ ಗೌತಮ್‌ ಗಂಭೀರ್ ಎಲ್ಲ ಮಾದರಿಯ ಕ್ರಿಕೆಟ್ ನಿಂದಲೂ ಮಂಗಳವಾರ ನಿವೃತ್ತಿ ಘೋಷಿಸಿದ್ದಾರೆ.

ಟೀಂ ಇಂಡಿಯಾದಲ್ಲಿ ತಮ್ಮ ಸುದೀರ್ಘ ಪಯಣದ ಬಳಿಕ ನಿವೃತ್ತಿ ನಿರ್ಧಾರ ಮಾಡಿರುವ ಗಂಭೀರ್‌, ಸುದ್ದಿ ಸಂಸ್ಥೆಗೆ ತಮ್ಮ ನಿವೃತ್ತಿ ನಿರ್ಧಾರ ಘೋಷಣೆ ಮಾಡಿದ್ದಾರೆ. ’15 ವರ್ಷ ದೇಶಕ್ಕಾಗಿ ಕ್ರಿಕೆಟ್‌ ಆಡಿದ್ದೇನೆ. ಈ ಸುಂದರವಾದ ಆಟದಲ್ಲಿ ಆಡುವುದರಿಂದ ನಾನು ನಿವೃತ್ತಿ ಬಯಸುತ್ತಿದ್ದೇನೆ’ ಎಂದಿದ್ದಾರೆ.

ಇನ್ನು ಗಂಭೀರ್ ಕೊನೆಯದಾಗಿ ಡಿಸೆಂಬರ್ 6ರಂದು ಫಿರೋಜ್ ಷಾ ಕೋಟ್ಲಾ ಮೈದಾನದಲ್ಲಿ ನಡೆಯಲಿರುವ ರಣಜಿ ಪಂದ್ಯವಾಡಲಿದ್ದು, ಅದೇ ಅವರ ವೃತ್ತಿ ಜೀವನದ ಕೊನೆಯ ಪಂದ್ಯವಾಗಿರಲಿದೆ. ಅಂತೆಯೇ ಮತ್ತೊಂದು ವಿಶೇಷವೆಂದರೆ ಗೌತಿ ಎಲ್ಲಿ ಕ್ರಿಕೆಟ್​ ಜೀವನ ಆರಂಭಿಸಿದರೋ ಅಲ್ಲಿಯೇ ನಿವೃತ್ತಿ ಪಡೆಯುತ್ತಿರುವುದು ವಿಶೇಷ.

1999 ರಿಂದ 2000ರದವರೆಗೆ ಸುಮಾರು ಎರಡು ದಶಕಗಳ ಕಾಲ ಕ್ರಿಕೆಟ್‌ನಲ್ಲಿ ತೊಡಗಿಸಿಕೊಂಡಿದ್ದ ಗೌತಮ್‌, 2016ರಲ್ಲಿ ಕೊನೆ ಬಾರಿ ಇಗ್ಲೆಂಡ್‌ ವಿರುದ್ಧದ ಟೆಸ್ಟ್‌ ಸರಣಿಯಲ್ಲಿ ಆಡಿದ್ದರು. ಇದುವರೆಗೂ 58 ಟೆಸ್ಟ್‌ ಪಂದ್ಯಗಳಲ್ಲಿ ಆಡಿರುವ ಅವರು ಒಂಬತ್ತು ಶತಕ ಮತ್ತು 22 ಅರ್ಧಶತಕಗಳನ್ನು ಗಳಿಸುವ ಮೂಲಕ ಒಟ್ಟಾರೆ 4,154 ರನ್‌ಗಳನ್ನು ಸಿಡಿಸಿದ್ದಾರೆ.

ಇದಲ್ಲದೆ 147 ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದು, 39.68 ರ ಸರಾಸರಿಯಲ್ಲಿ 5238 ರನ್‌ಗಳಿಸಿದ್ದಾರೆ. 37 ಟಿ20 ಪಂದ್ಯಗಳಲ್ಲೂ ಕೂಡ ಗೌತಮ್‌ ಆಡಿದ್ದಾರೆ.

The most difficult decisions are often taken with the heaviest of hearts.

And with one heavy heart, I’ve decided to make an announcement that I’ve dreaded all my life.
➡️https://t.co/J8QrSHHRCT@BCCI #Unbeaten— Gautam Gambhir (@GautamGambhir) December 4, 2018

Related posts

ಪಾಕ್‌ಗೆ ತಿರುಗುಬಾಣವಾಯ್ತು ತಂತ್ರ; ಆಸ್ಟ್ರೇಲಿಯಾ-ಪಾಕ್ ನಡುವಿನ ಟೆಸ್ಟ್ ಪಂದ್ಯದ ಕೊನೆಯ ಓವರ್ ಬಲು ರೋಚಕ!

Prajanudi Admin

ಕೊನೆಗೂ ಗೆದ್ದ ಮಿಥಾಲಿ ರಾಜ್, ಹೊಸ ಕೋಚ್ ಹುದ್ದೆಗೆ ಅರ್ಜಿ ಆಹ್ವಾನಿಸಿದ ಬಿಸಿಸಿಐ!

Prajanudi Admin

ವಿರೇಂದ್ರ ಸೆಹ್ವಾಗ್ ಹುಟ್ಟುಹಬ್ಬ: ಆಧುನಿಕ ಕಾಲದ ವಿವಿಯನ್ ರಿಚರ್ಡ್ಸ್ ಎಂದು ಕರೆದ ಹರ್ಭಜನ್ ಸಿಂಗ್

Prajanudi Admin

Leave a Comment