Prajanudi
ನ್ಯೂಸ್ ರಾಜ್ಯ

ಬೆಂಗಳೂರಿನಲ್ಲಿ ಭೀಕರ ಅಪಘಾತ: ಸ್ನೇಹಿತನ ಹುಟ್ಟುಹಬ್ಬಕ್ಕಾಗಿ ಹೊರಟ ನಾಲ್ವರು ಸಾವು!


ಬೆಂಗಳೂರು: ಬೆಂಗಳೂರಿನಲ್ಲಿ ನಡೆದ ಭೀಕರ ಅಪಘಾತದಲ್ಲಿ ಸ್ನ್ನೇಹಿತನ ಹುಟ್ಟುಹಬ್ಬಕ್ಕೆಂದು ಹೊರಟ ನಾಲ್ವರು ದಾರುಣ ಸಾವನ್ನಪ್ಪಿದ್ದಾರೆ. ಮಂಗಳವಾರ ತಡರಾತ್ರಿ ಅಪಘಾತ ನಡೆದಿದೆ.

ಮಾರುತಿ ಓಮ್ನಿ ಕಾರ್ ಗೆ ಇನ್ನೋವಾ ಕಾರ್ ಡಿಕ್ಕಿಯಾಗಿ ನಾಲ್ವರು ಯುವಕರು ಸ್ಥಳದಲ್ಲೇ ಸಾವನ್ನಪ್ಪಿ ಏಳು ಮಂದಿ ಗಾಯಗೊಂಡಿರುವ ಘಟನೆ ಬೆಂಗಳೂರಿನ ದೇವನಹಲ್ಳಿ ಸಮೀಪ ಕನ್ನಮಂಗಲ ಗೇಟ್ ನಲ್ಲಿ ನಡೆದಿದೆ.

ಆರ್ ಟಿ ನಗರ ಚೋಳನಾಯ್ಕನ ಪಾಳ್ಯದ ಸುಂದರ್ (25), ವೆಂಕಟೇಶ್ (28), ಸತೀಶ್(24), ವಿಕಾಸ್(23) ಮೃತ ದುರ್ದೈವಿಗಳು. ಇನ್ನು ವ್ಯಾನ್ ಚಾಲಕ ಹೇಮಂತ್, ಅಜಿತ್, ರವಿ, ಭರತ್, ಅವಿನಾಶ್, ಮಧು ಹಾಗೂ ಮನೋಜ್ ತೀವ್ರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಪ್ರಾಣಾಪಾಯದಿಂದ ಪಾರಾಗಿರುವುದಾಗಿ ವರದಿಯಾಗಿದೆ.

ಹೂವಿನ ಅಲಂಕಾರ (ಫ್ಲವರ್ ಡೆಕೋರೇಷನ್) ಕೆಲಸ ಮಾಡುತ್ತಿದ್ದ ಈ ಯುವಕರು ಸ್ನೇಹಿತನ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಲು ಮಧ್ಯರಾತ್ರಿ ವೇಳೆ ನಂದಿ ಗಿರಿಧಾಮದತ್ತ ತೆರಳುತ್ತಿದ್ದರು.

ನಡುರಾತ್ರಿಯಲ್ಲಿ ಅತಿ ವೇಗವಾಗಿ ಓಮ್ನಿ ಚಲಾಯಿಸುತ್ತಿದ್ದದ್ದು ಅಪಘಾತಕ್ಕೆ ಕಾರಣವೆನ್ನಲಾಗಿದೆ. ದೇವನಹಳ್ಳಿಯ ಕನ್ನಮಂಗಲ ಗೇಟ್ ಸಮೀಪದಲ್ಲಿ ವಾಹನ ಆಗಮಿಸುವಾಗ ಚಿಕ್ಕಬಳ್ಳಾಪುರ ಕಡೆ ಹೋಗುತ್ತಿದ್ದ ಇನ್ನೋವಾ ಕಾರ್ ಗೆ ಗುದ್ದಿ ಅವಘಡ ಸಂಭವಿಸಿದೆ.

ಡಿಕ್ಕಿ ರಭಸಕ್ಕೆ ಓಮ್ನಿಯಲ್ಲಿದ್ದ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇನ್ನೋವಾದಲ್ಲಿ ಏರ್ ಬ್ಯಾಗ್ ಇದ್ದ ಕಾರಣ ಹೆಚ್ಚು ಅಪಾಯವಾಗಿಲ್ಲ.

ಘಟನಾ ಸ್ಥಳಕ್ಕೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಸಂಚಾರಿ ಪೋಲೀಸರು, ಆಗಮಿಸಿ ಪರಿಶೀಲಿಸಿದ್ದು ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

Related posts

ಎಲ್ಲೆಂದರಲ್ಲಿ ಕಸ, ಮೂತ್ರ ವಿಸರ್ಜನೆ ಮಾಡುವವರ ವಿರುದ್ಧ ಬಿಬಿಎಂಪಿ ಕಾರ್ಯಾಚರಣೆ: ರೂ.4.8 ಲಕ್ಷ ದಂಡ ಸಂಗ್ರಹ

Prajanudi Admin

ಟಿಪ್ಪು ಸುಲ್ತಾನ್ ಅತ್ಯಾಚಾರಿ, ಹಿಂದೂ ವಿರೋಧಿ: ಚಿದಾನಂದ ಮೂರ್ತಿ ಕಿಡಿ

Prajanudi Admin

ತಮಗೆ ತಾವೇ A+ ಕೊಟ್ಟುಕೊಂಡ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ !

Prajanudi Admin

Leave a Comment