Prajanudi
ನ್ಯೂಸ್ ರಾಜ್ಯ

ಜಿ ವೆಂಕಟಸುಬ್ಬಯ್ಯ, ನಾಗರಾಜಪ್ಪ ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ


ನವದೆಹಲಿ: ಕನ್ನಡದ ಖ್ಯಾತ ಸಂಶೋಧಕ, ಭಾಷಾ ತಜ್ಞ ಜಿ. ವೆಂಕಟಸುಬ್ಬಯ್ಯನವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಭಾಷಾ ಸಮ್ಮಾನ್ ಪ್ರಶಸ್ತಿ.ಲಭಿಸಿದೆ. ಇನ್ನೋರ್ವ ಸೃಜನಶೀಲ ಲೇಖಕ ಕೆ.ಜಿ ನಾಗರಾಜಪ್ಪ ಅವರ ಚಿಂತನಶೀಲ ಬರಹ ಮಾಲಿಕೆ  ‘ಅನುಶ್ರೇಣಿ ಯಜಮಾನಿಕೆ’ ಪುಸ್ತಕಕ್ಕೆ 2018ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ಲಭಿಸಿದೆ. 

2016-17ನೇ ಸಾಲಿನ ಭಾಷಾ ಸಮ್ಮಾನ್ ಪುರಸ್ಕಾರಕ್ಕೆ ವೆಂಕಟಸುಬ್ಬಯ್ಯ ಆಯ್ಕೆಯಾಗಿದ್ದಾರೆ. ಎರಡೂ ಪ್ರಶಸ್ತಿಯು ಒಂದು ಲಕ್ಷ ನಗದು ಹಾಗೂ ಸ್ಮರಣಿಕೆ ಹೊಂದಿರಲಿದೆ. 

ಕೇಂದ್ರ ಸಾಹಿತ್ಯ ಅಕಾಡಮಿ ಅಧ್ಯಕ್ಷ ಚಂದ್ರಶೇಖರ್ ಕಂಬಾರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ವಿವಿಧ ಭಾಷೆಗಳ ಒಟ್ಟು 24 ಪುಸ್ತಕಗಳಿಗೆ ಪ್ರಶಸ್ತಿ ಘೋಷಿಸಲಾಗಿದೆ.

2019ರ ಜನವರಿ 29ರಂದು ದೆಹಲಿಯಲ್ಲಿ ಪ್ರಶಸ್ತಿ ವಿತರಣೆ ಸಮಾರಂಭ ನಡೆಯಲಿದೆ.

Related posts

ಚುನಾವಣೆಗೆ ಮುನ್ನ 'ಕೈ' ಗೆ ಶಾಕ್! ಬಳ್ಳಾರಿ ಕಾಂಗ್ರೆಸ್ ಅಭ್ಯರ್ಥಿ ಉಗ್ರಪ್ಪ ಆಸ್ತಿ ಜಪ್ತಿಗೆ ಕೋರ್ಟ್ ಆದೇಶ!

Prajanudi Admin

ನ್ಯಾಯಾಧೀಶರ ನಡುವಿನ ತಪ್ಪು ತಿಳುವಳಿಕೆಗಳಿಗೆ ಅಂತ್ಯ ಹಾಡಿ; ಸಿಜೆಐ ರಂಜನ್ ಗಗೋಯ್'ಗೆ ಸಂತೋಷ್ ಹೆಗ್ಡೆ

Prajanudi Admin

ರೈಲ್ವೇ ಇಲಾಖೆಗೆ ಹೊಸ ದಿಕ್ಕು ತೋರಿಸಿದ್ದ ಸಿ.ಕೆ. ಜಾಫರ್ ಶರೀಫ್

Prajanudi Admin

Leave a Comment