Prajanudi
ಕ್ರೀಡೆ

ನಾಯಕನಿಗೆ ಪಂದ್ಯದ ಗೆಲುವಿನಷ್ಟೇ ರಾಷ್ಟ್ರದ ಗೌರವ ಗಳಿಸಿಕೊಳ್ಳುವುದು ಸಹ ಮುಖ್ಯ: ಟಿಮ್ ಪೈನೆ


ಅಡಿಲೇಡ್: ಪಂದ್ಯವನ್ನು ಗೆಲ್ಲುವುದು ಹಾಗೂ ಹೃದಯವನ್ನು ಗೆಲ್ಲುವುದು ಎರಡೂ ಮುಖ್ಯ. ನಾವು ಪಂದ್ಯ ಗೆಲ್ಲಬೇಕಾಗಿ ಆಡುತ್ತೇವೆ ಎನ್ನುವುದರಲ್ಲಿ ಸಂದೇಹವಿಲ್ಲ ಆದರೆ ಟೆಸ್ಟ್ ಕ್ರಿಕೆಟ್ ನ ಕೆಲವು ವಿಭಾಗಗಳಲ್ಲಿ ನಾವು  ಇನ್ನೂ ತಕ್ಕಷ್ಟು ಕೆಲಸ ಮಾಡಬೇಕಿದೆ ಎನ್ನುವುದನ್ನು ಸ್ಪಷ್ಟವಾಗಿ ಕಂಡುಕೊಂಡಿದ್ದೇವೆ- ಆಸ್ಟ್ರೇಲಿಯಾ ನಾಯಕ ಟಿಮ್ ಪೈನೆ ಹೇಳಿದ್ದಾರೆ. 

ಗುರುವಾರದಿಂದ ಪ್ರಾರಂಭವಾಗಲಿರುವ ನಾಲ್ಕು ಟೆಸ್ಟ್ ಗಳ ಸರಣಿಯ ಮುನ್ನ ಟಿಮ್ ಪೈನೆ ತಾವು ಮಾದ್ಯಮದೊಡನೆ ಮಾತನಾಡಿದ್ದಾರೆ.”ಪಂದ್ಯದ ಗೆಲುವಿನಷ್ಟೇನಮ್ಮ ದೇಶದ ಗೌರವನ್ನು ಎತ್ತಿ ಹಿಡಿದು ಜನರ ಹೃದಯ್ತ ಗೆಲ್ಲುವುದು ಹೆಚ್ಚು ಆದ್ಯತೆಯ ವಿಷಯವಾಗಿದೆ. ನಾನು ರಿಕಿ ಪಾಂಟಿಂಗ್ ಜತೆ ನಡೆಸಿದ ಸಂದರ್ಶನದ ವೇಳೆ ಆಸ್ಟ್ರೇಲಿಯಾ ನಾಯಕರಾಗಿ ಕಾರ್ಯನಿರ್ವಹಿಸಿದ ಕೆಲವು ಆಟಗಾರರ ಪಟ್ಟಿಯನ್ನು ತಿಳಿದೆನು. ಅದೇ ರೀತಿ ನಾನು ಸಾಧ್ಯವಾದಷ್ಟು ಸರಳವಾಗಿರಲು ಪ್ರಯತ್ನಿಸುತ್ತೇನೆ ಎಂದು ಅವರು ಹೇಳಿದ್ದಾರೆ.

ನಾನು ಆಸ್ಟ್ರೇಲಿಯದ ನಾಯಕನಾಗಿ ಭಾರಿ ಗೌರವವನ್ನು ಹೊಂದಿದ್ದೇನೆ ಆದರೆ ನಾನು ಅದನ್ನುನನ್ನ ಪಾಲಿಗೆ ಅತೀ ಕಠೀಣವಾನ್ನಾಗಿಸಿಕೊಳ್ಳಲು ಬಯಸುವುದಿಲ್ಲ.

ಯುಎಇನಲ್ಲಿ ಪಾಕಿಸ್ತಾನ ಸರಣಿಯನ್ನು ಕಳೆದುಕೊಂಡ ಬಳಿಕ ಸಹ ಪೈನೆ ಆಟಗಾರರನ್ನು ವಿಶ್ವಾಸದಿಂದ ಕಾಣುವುದು ಮುಖ್ಯವಾಗುತ್ತದೀಂದು ಹೇಳಿದ್ದಾರೆ.ಆಟ ಅಥವಾ ಕ್ರೀಡೆ ನಮಗೆಂದಿಗೂ ಸಹಾಯ ಮಾಡುತ್ತದೆ. ನಾಲ್ವರು ಬೌಲರ್ ಗಳ ಕ್ರೀಡಾಕ್ಷಮತೆ ಮೊದಲ ಟೆಸ್ಟ್ ನಲ್ಲಿ ಅತಿ ಪ್ರಮುಖ ಪಾತ್ರ ವಹಿಸಲಿದೆ ಎಂದು ಅವರು ಭರವಸೆ ನೀಡಿದ್ದಾರೆ.

ಜೋಶ್ ಹ್ಯಾಝೆಲ್ವುಡ್ ಮತ್ತು ಪ್ಯಾಟ್ ಕಮ್ಮಿನ್ಸ್ ಮರಳುವಿಕೆ ವಿಭಿನ್ನ ವಿಚಾರವಾಗಿದೆ.ಹಾಗೆಯೇ ಯುಎಇ ನಲ್ಲಿ ಆಸ್ಟ್ರೇಲಿಯಾ ತಂಡದ ಪ್ರದರ್ಶನಕ್ಕೆ ಹೋಲಿಸಿದರೆ ಈ ಬಾರಿಯ ಪ್ರದರ್ಶನ ಶೈಲಿ ಸಂಪೂರ್ಣ ಭಿನ್ನವಾಗಿರಲಿದೆ. ನಾವು ಬೇರೆಯದೇ ಯುದ್ಧತಂತ್ರವನ್ನು ಪ್ರಯೋಗಿಸುತ್ತೇವೆ.

ಕಳೆದ ವರ್ಷ ಅವರು ಆಶಸ್ ಸರಣಿಯನ್ನು ನೆನೆದ ಪೈನೆ ಈ ಬಾರಿ ನಾವು ಉತ್ತಮ ಸಿದ್ದತೆ ನಡೆಸಿದ್ದೇವೆ ಎಂದಿದ್ದಾರೆ.

ಈ ಟೆಸ್ಟ್ ಸರಣಿಯಿಂದ ತಂಡದ ಉಪ ನಾಯಕ, ಆಲ್ ರೌಂಡರ್  ಮಿಚೆಲ್ ಮಾರ್ಷ್ಹೊರಗುಳಿದಿದ್ದಾರೆ.ಆರಂಭಿಕ ಆಟಗಾರ ಮಾರ್ಕಸ್ ಹ್ಯಾರಿಸ್ ಇದೇ ಮೊದಲ ಬಾರಿಗೆ ಅಂತರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ ಆಡುತ್ತಲಿದ್ದಾರೆ.ಮಾರ್ಷ್ ಅವರನ್ನು ಹಿಂದೆಂ ಸಹ ಕಳಪೆ ಫಾರ್ಮ್ ಕಾರಣದಿಂದ ಹೊರಗಿಡಲಾಗಿತ್ತು.

Related posts

ಏಷ್ಯಾ ಕಪ್ : ಬಾಂಗ್ಲಾ ವಿರುದ್ಧ ಭಾರತಕ್ಕೆ 3 ವಿಕೆಟ್ ಗಳ ರೋಚಕ ಜಯ !

Prajanudi Admin

ಬಿರಿಯಾನಿ ಅಂದ್ರೆ ಪಂಚ ಪ್ರಾಣ ಆದ್ರೂ ನಾನ್ ವೆಜ್ ಬಿಟ್ಟು ಸಸ್ಯಾಹಾರಿಯಾದ ಟೀಂ ಇಂಡಿಯಾ ಕ್ಯಾಪ್ಟನ್ ಕೊಹ್ಲಿ!

Prajanudi Admin

ವಿಡಿಯೋ: ವಿರಾಟ್ ಭರ್ಜರಿ ಸಿಕ್ಸರ್, ಬೌಂಡರಿಯಲ್ಲಿ ಬಾಲ್ ಬಾಯ್ ವಂಡರ್, ಪ್ರೇಕ್ಷಕರು ಫಿದಾ!

Prajanudi Admin

Leave a Comment