Prajanudi
ರಾಜಕೀಯ

ಬರೀ ಸದ್ದು ಮಾಡೋದಷ್ಟೆ ಬಿಜೆಪಿ ಕೆಲಸ: ಜಾವಡೇಕರ್ ಹೇಳಿಕೆಗೆ ಸಿಎಂ ತಿರುಗೇಟು; ಸರ್ಕಾರ ಗಟ್ಟಿ ಎಂದ ಡಿಕೆಶಿ


ಬೆಂಗಳೂರು: ಕರ್ನಾಟಕ ರಾಜಕೀಯದಲ್ಲಿ ಡಿಸೆಂಬರ್​ನಲ್ಲಿ ಧಮಾಕಾ ಆಗಲಿದೆ ಎಂದು ಮಾಧ್ಯಮ ಸಂದರ್ಶನವೊಂದರಲ್ಲಿ ಹೇಳಿರುವ ಕೇಂದ್ರ ಮಾನವ ಸಂಪನ್ಮೂಲ ಸಚಿವ  ಪ್ರಕಾಶ್​ ಜಾವಡೇಕರ್​ಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಸೇರಿದಂತೆ  ಕೆಲವು ಸಚಿವರು ತಿರುಗೇಟು ನೀಡಿದ್ದಾರೆ.
ಕರ್ನಾಟಕದ ಜನ ಬಿಜೆಪಿ ಸರ್ಕಾರವನ್ನು ಅಪೇಕ್ಷೆ ಪಡುತ್ತಿದ್ದಾರೆ.  ಜೆಡಿಎಸ್ ಅವಕಾಶವಾದಿ ರಾಜಕಾರಣ ಮಾಡಿದ್ದಾರೆ ಎಂದು ಪ್ರಕಾಶ್​ ಜಾವಡೇಕರ್​ ಹೇಳಿದ್ದರು.  ಇದಕ್ಕೆ  ತೀವ್ರವಾಗಿ  ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿ ಕುಮಾರಸ್ವಾಮಿಯವರು, ಆರು ತಿಂಗಳಿಂದ ಬಿಜೆಪಿಯವರು ಇದನ್ನೇ ಹೇಳುತ್ತಿದ್ದಾರೆ. ಬರೀ ಸದ್ದು ಮಾಡೋದಷ್ಟೇ. ಸರ್ಕಾರ ಕಲ್ಲುಬಂಡೆಯ ಹಾಗೇ ಇದೆ. ಆ ವಿಷಯ ಸತ್ತು ಹೋಗಿದೆ ಎಂದಿದ್ದಾರೆ.

ಪ್ರಕಾಶ್​ ಜಾವಡೇಕರ್​ ಹೇಳಿಕೆ ಬಗ್ಗೆ ಮಾತನಾಡಿದ ಸಚಿವ ಡಿ.ಕೆ.ಶಿವಕುಮಾರ್​, ಮುಖ್ಯಮಂತ್ರಿ ಕುಮಾರಸ್ವಾಮಿಯವರ ಸರ್ಕಾರ ಗಟ್ಟಿಯಾಗಿರುತ್ತದೆ. ನಮ್ಮದೆ ಇಲ್ಲದೆ ಆಪರೇಶನ್​ ಕಮಲ ಮಾಡಿದ್ದಾರೆ. ನಾವು ಅವರಷ್ಟು ಬುದ್ಧಿವಂತರು ಅಲ್ಲದೆ ಇರಬಹುದು. ಆದರೆ ಅವರಿಂತ ನಾವು 1% ಹೆಚ್ಚು ಯೋಚನೆ ಮಾಡುತ್ತೇವೆ ಎಂದು  ಹೇಳಿದ್ದಾರೆ.

ಸಚಿವರಾದ ಆರ್. ವಿ. ದೇಶಪಾಂಡೆ, ಪ್ರಿಯಾಂಕ್ ಖರ್ಗೆ, ಸಾರಾ ಮಹೇಶ್ ಕೂಡಾ ಪ್ರಕಾಶ್ ಜಾವಡೇಕರ್ ಹೇಳಿಕೆ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

Related posts

ದಕ್ಷಿಣ ರಾಜ್ಯಗಳಲ್ಲಿ ಶಬರಿಮಲೆ ವಿವಾದವನ್ನು ಮುಖ್ಯ ವೇದಿಕೆಗೆ ತರಲು ಬಿಜೆಪಿ ಯತ್ನ

Prajanudi Admin

ಹೆಚ್ಚಿದ ಒತ್ತಡ: ಸಂಪುಟ ವಿಸ್ತರಣೆ ಎಂಬ ಜೇನುಗೂಡಿಗೆ 'ಕೈ' ಹಾಕಲಿದ್ಯಾ ಕಾಂಗ್ರೆಸ್?

Prajanudi Admin

ರಾಮನಗರ ಶಾಸಕಿಯಾಗಿ ಅನಿತಾ ಕುಮಾರಸ್ವಾಮಿ ಪ್ರಮಾಣವಚನ ಸ್ವೀಕಾರ

Prajanudi Admin

Leave a Comment