Prajanudi
ದೇಶ ನ್ಯೂಸ್

2015ರ ಪ್ಯಾರಿಸ್ ಸ್ಫೋಟ: ಕೇರಳ ಜೈಲಲ್ಲಿರುವ ಇಸಿಸ್ ಉಗ್ರನ ತನಿಖೆಗೆ ಫ್ರೆಂಚ್ ತಂಡ ಆಗಮನ


ಕೊಚ್ಚಿ: 2015 ರ ಪ್ಯಾರಿಸ್ ಸ್ಫೋಟಗಳಿಗೆ ಸಂಬಂಧಿಸಿ ಕೇರಳದಲ್ಲಿ ಬಂಧಿಸಲಾಗಿರುವ ಇಸ್ಲಾಮಿಕ್ ಸ್ಟೇಟ್ ಭಯೋತ್ಪಾದಕರ ತನಿಖೆಗಾಗಿ ಫ್ರೆಂಚ್ ತನಿಖಾ ಸಂಸ್ಥೆಯ ಐವರು ಸದಸ್ಯರು ಬುಧವಾರ  ಕೊಚ್ಚಿಗೆ ಆಗಮಿಸಿದೆ.

ಈ ತಂಡ ಮುಂದಿನ ಮೂರು ದಿನಗಳ ಕಾಲ ಆರೋಪಿಗಳ ತನಿಖೆ ಕೈಗೊಳ್ಳಲಿದ್ದು ರಾಷ್ಟ್ರೀಯ ತನಿಖಾ ಸಂಸ್ಥೆಯೊಡನೆ ಈ ಕುರಿತು ಚರ್ಚಿಸಿದೆ.

ತ್ರಿಶೂರ್ ಜಿಲ್ಲೆಯ ಕೇಂದ್ರ ಜೈಲಿನಲ್ಲಿರುವ ತುಡುಪುಲ ನಿವಾಸಿ ಸುಬಹಾನಿ ಹಜಾ ಮೊಯ್ಡೆನ್ ಅವನನ್ನು ಪ್ರಶ್ನಿಸಲು ಶುಕ್ರವಾರದವರೆಗೆ ಫ್ರೆಂಚ್ ತನಿಖಾ ದಳವು ಕೊಚ್ಚಿನ್ ನಲ್ಲಿ ನೆಲೆಸಲಿದೆ.

“ಫ್ರೆಂಚ್ ಭಯೋತ್ಪಾದನಾ ವಿರೋಧಿ  ತನಿಖಾ ಸಂಸ್ಥೆಯ ಐವರ ತಂಡ  ಇಂದು ಕೊಚ್ಚಿಯಲ್ಲಿ ನಮ್ಮನ್ನು ಭೇಟಿ ಮಾಡಿದೆ” ಎಂದು ಎನ್ಐಎ ನ ಉನ್ನತ ಅಧಿಕಾರಿಗಳು  ಪಿಟಿಐಗೆ ತಿಳಿಸಿದ್ದಾರೆ.

ಕೊಚ್ಚಿಯಲ್ಲಿರುವ ಎನ್ಐಎ ನ್ಯಾಯಾಲಯವು ಸುಯಹಾನಿ ವಿಚಾರಣೆಗೆ ಫ್ರೆಂಚ್ ತನಿಖಾದಲಕ್ಕೆ ಅನುಮತಿ ನೀಡಿದ ಕಾರಣ ತಂಡ ಭಾರತಕ್ಕೆ ಆಗಮಿಸಿದೆ. “ಅವರು (ಫ್ರೆಂಚ್ ತಂಡ) ತ್ರಿಶ್ಶೂರ್ ಗೆ ಭೇಟಿ ನೀಡಲಿದ್ದಾರೆ.ಅಲ್ಲಿನ ಕೇಂದ್ರೀಯ ಕಾರಾಗೃಹದಲ್ಲಿ ಆರೋಪಿ ಸುಬಹಾನಿ ಅವರನ್ನು ಡಿಸೆಂಬರ್ 5 ರಿಂದ 7 ರವರೆಗೆ ವಿಚಾರಣೆ ನಡೆಸಲಿದೆ” ಅಧಿಕಾರಿಗಳು ತಿಳಿಸಿದ್ದಾರೆ.

2015 ರಲ್ಲಿ ಪ್ಯಾರೀಸ್ ನಲ್ಲಿನ  ರಂಗಮಂದಿರದಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 100 ಕ್ಕೂ ಅಧಿಕ ಜನ ಸಾವನ್ನಪ್ಪಿದ್ದರು. ಇದರಲ್ಲಿ ಇಸಿಸ್ ಸಂಘಟನೆ ಪರವಾಗಿ ಸುಬಹಾನಿ ಸಹ ಪಾಲ್ಗೊಂಡಿದ್ದನೆನ್ನುವುದು ಫ್ರೆಂಚ್ ತಂಡದ ನಂಬಿಕೆಯಾಗಿದ್ದು ಇದೀಗ ಈ ವಿಷಯದ ಸತ್ಯಾಸತ್ಯತೆ ಅರಿಯಲು ಅವರು ಭಾರತಕ್ಕೆ ಆಗಮಿಸಿದ್ದಾರೆ.

Related posts

ಸಿಬಿಐ ವಂಚನೆ ಪ್ರಕರಣ: ಕೇಂದ್ರ ಜಾಗೃತ ಆಯೋಗದ ಮುಂದೆ ಹಾಜರಾದ ಅಲೋಕ್ ವರ್ಮಾ

Prajanudi Admin

ತಮಿಳುನಾಡಿನಲ್ಲಿ ದೀಪಾವಳಿ ಪಟಾಕಿ ಹೊಡೆಯಲು ಸಮಯ, ನಿರ್ಬಂಧ ನಿಗದಿ!

Prajanudi Admin

ಗುಜರಾತ್ ಸಚಿವಾಲಯದ ಆವರಣದಲ್ಲಿ ಚಿರತೆ ಪ್ರತ್ಯಕ್ಷ: ವೀಡಿಯೋ

Prajanudi Admin

Leave a Comment