Prajanudi
ನ್ಯೂಸ್ ವಿದೇಶ

ನಗ್ನ ವಿಡಿಯೋ ಅಶ್ಲೀಲ ವೆಬ್‌ಸೈಟ್‌ಗೆ ಅಪ್‌ಲೋಡ್: ಹೋಟೆಲ್ ನಿಂದ 707 ಕೋಟಿ ಪರಿಹಾರ ಕೇಳಿದ ಮಹಿಳೆ!


ನ್ಯೂಯಾರ್ಕ್: ಹೊಟೇಲ್‌ನ ಕೊಠಡಿಯಲ್ಲಿ ತಾನು ನಗ್ನವಾಗಿ ಸ್ನಾನ ಮಾಡುತ್ತಿದ್ದುದ್ದನ್ನು ರಹಸ್ಯ ಕ್ಯಾಮೆರಾ ಮೂಲಕ ಸೆರೆ ಹಿಡಿದು ಈ ವಿಡಿಯೋವನ್ನು ಅಶ್ಲೀಲ ವೆಬ್ ಸೈಟ್ ಗೆ ಅಪ್ ಲೋಡ್ ಮಾಡಿದ್ದರ ವಿರುದ್ಧ ಸಮರ ಸಾರಿರುವ ಮಹಿಳೆ ತನಗೆ ಬರೋಬ್ಬರಿ 707 ಕೋಟಿ ರುಪಾಯಿ ಪರಿಹಾರಕ್ಕೆ ಬೇಡಿಕೆ ಇಟ್ಟಿದ್ದಾರೆ. 

ಅಮೆರಿಕದ ಚಿಕಾಗೋದ ಹಿಲ್ಟನ್ ಹೋಟೆಲ್ ನ ಸಿಬ್ಬಂದಿಗಳೇ ಈ ಕೃತ್ಯ ಎಸಗಿದ್ದರು. ಅಲ್ಲದೆ ತನ್ನ ನಗ್ನ ದೇಹದ ವಿಡಿಯೋವನ್ನು ಅಶ್ಲೀಲ ವೆಬ್ ಸೈಟ್ ಗೆ ಅಪ್ ಲೋಡ್ ಮಾಡಿದ್ದು ಇದರಿಂದ ಮಹಿಳೆ ಹಿಲ್ಟನ್ ಹೋಟೆಲ್ ನವರು 100 ಮಿಲಿಯನ್ ಡಾಲರ್ ಅಂದರೆ ಸುಮಾರು 707 ಕೋಟಿ ರುಪಾಯಿ ಪರಿಹಾರ ನೇಡಬೇಕೆಂದು ಹೋಟೆಲ್ ನವರ ವಿರುದ್ಧ ಮೊಕದ್ದಮೆ ಹೂಡಿದ್ದಾರೆ. 

ತಮ್ಮ ಹೋಟೆಲ್ ಗೆ ಬರುವ ಅತಿಥಿಗಳ ಖಾಸಗೀತನವನ್ನು ಕಾಪಾಡದೆ ರಹಸ್ಯ ಕ್ಯಾಮೆರಾ ಮೂಲಕ ವಿಡಿಯೋ ಚಿತ್ರೀಕರಣ ಮಾಡಿದ್ದಕ್ಕೆ ನನಗೆ ಮಾನಸಿಕವಾಗಿ ಹಾಗೂ ದೈಹಿಕವಾಗಿ ನೋವಾಗಿದೆ. ಅಲ್ಲದೆ ಪರಿಚಯಸ್ಥರ ಮುಂದೆ ಆಗಿರುವ ಅವಮಾನಕ್ಕೆ 707 ಕೋಟಿ ರುಪಾಯಿ ಪರಿಹಾರ ನೀಡಲೇಬೇಕು ಎಂದು ಮಹಿಳೆ ವಾದಿಸಿದ್ದಾರೆ. 

ಮಹಿಳೆ 2015ರಲ್ಲಿ ಹಿಲ್ಟನ್ ಹೋಟೆಲ್ ನ ರೂಂನಲ್ಲಿ ಉಳಿದುಕೊಂಡಿದ್ದರು. ಆಗ ತನ್ನ ನಗ್ನ ವಿಡಿಯೋವನ್ನು ಸೆರೆಹಿಡಿದು ಸಾಮಾಜಿಕ ಜಾಲತಾಣಕ್ಕೆ ಅಪ್ ಲೋಡ್ ಮಾಡಲಾಗಿತ್ತು. ಆದರೆ ಈ ವಿಷಯ ಮಹಿಳೆಗೆ ಈ ವರ್ಷ ತಿಳಿದಿತ್ತು. ಮಹಿಳೆಯ ಸ್ನೇಹಿತನೊಬ್ಬ ಈ ವಿಡಿಯೋ ನೋಡಿ ಅದನ್ನು ಆಕೆಗೆ ಕಳುಹಿಸಿದ್ದ ಇದಾದ ನಂತರ ಆಕೆ ಹೋಟೆಲ್ ವಿರುದ್ಧ ದೂರು ದಾಖಲಿಸಿದ್ದಾರೆ.

Related posts

ಕತ್ತೆಗಳ ಪಾದಪೂಜೆ ಮಾಡಿ ಹುಟ್ಟುಹಬ್ಬ ಆಚರಿಸಿಕೊಂಡ ವಾಟಾಳ್ ನಾಗರಾಜ್!

Prajanudi Admin

ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗಳು ಮಾಧ್ಯಮದವರೊಂದಿಗೆ ಸಂಹವನ ನಡೆಸುವಂತಿಲ್ಲ: ಮೈಸೂರು ವಿವಿ ಆದೇಶ

Prajanudi Admin

ನಿವೃತ್ತಿ ನಿಧಿ ಹಣದಲ್ಲಿ ಪಾಲು ನೀಡದಕ್ಕೆ ತಂದೆಯನ್ನೇ ಕೊಂದ ಕಿರಾತಕ!

Prajanudi Admin

Leave a Comment