Prajanudi
ಸಿನಿಮಾ

ನೆಚ್ಚಿನ ನಟನ ಸಿನಿಮಾ ನೋಡಲು ಬೆಂಗಳೂರಿಗೆ ಬರ್ತಿದ್ದಾರೆ ವರ್ಮಾ
ಭಾರತದ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ನಾಳೆ (ಡಿಸೆಂಬರ್ 7) ರಂದು ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ತಮ್ಮ ನೆಚ್ಚಿನ ನಟನ ಸಿನಿಮಾ ಬಿಡುಗಡೆಯಾಗುತ್ತಿದ್ದು, ನಟನ ಅಭಿಮಾನಿಗಳನ್ನ ನೋಡಲು ಬೆಂಗಳೂರಿನ ಚಿತ್ರಮಂದಿರಕ್ಕೆ ಬರ್ತಿದ್ದಾರೆ. ಹೀಗಂತ, ಸ್ವತಃ ರಾಮ್ ಗೋಪಾಲ್ ವರ್ಮಾ ಅವರೇ ಟ್ವೀಟ್ ಮಾಡಿದ್ದಾರೆ. ಅಷ್ಟಕ್ಕೂ, ವರ್ಮಾ ಅವರ ನೆಚ್ಚಿನ ನಟ ಬೆಂಗಳೂರಿನಲ್ಲಿ ಯಾರಿದ್ದಾರೆ ಎಂಬ ಕುತೂಹಲ ಕಾಡ್ತಿದ್ಯಾ? ಈ ಶುಕ್ರವಾರ ದೊಡ್ಡವರ ಜೊತೆಗೆ ಸಣ್ಣವರ ಕಾಳಗ ‘ಟಗರು’ ಖ್ಯಾತಿ ಡಾಲಿ ಧನಂಜಯ್ ಗೆ, ಆರ್.ಜಿ.ವಿ ಫ್ಯಾನ್ ಆಗಿದ್ದಾರೆ. ಡಾಲಿ ಪಾತ್ರ ನೋಡಿ ಫಿದಾ ಆಗಿದ್ದ ವರ್ಮಾ, ಧನಂಜಯ್ ಜೊತೆ ಸಿನಿಮಾ ಕೂಡ ಮಾಡಿದ್ದಾರೆ. ಆ ಸಿನಿಮಾ ಈ ವಾರ ತೆರೆಕಾಣ್ತಿದೆ.
ಹೌದು, ಧನಂಜಯ್ ಅಭಿನಯದ ‘ಭೈರವಗೀತಾ’ ಸಿನಿಮಾ ಕನ್ನಡ ಮತ್ತು ತೆಲುಗಿನಲ್ಲಿ ರಿಲೀಸ್ ಆಗ್ತಿದ್ದು, ಕನ್ನಡದಲ್ಲಿ ಈ ವಾರ (ಡಿಸೆಂಬರ್ 7) ಥಿಯೇಟರ್ ಗೆ ಲಗ್ಗೆಯಿಡ್ತಿದೆ. ತೆಲುಗಿನಲ್ಲಿ ಮುಂದಿನ ವಾರ (ಡಿಸೆಂಬರ್ 14) ಬಿಡುಗಡೆಯಾಗ್ತಿದೆ. ಈ ಚಿತ್ರಕ್ಕೆ ಸಿದ್ಧಾರ್ಥ್ ಎಂಬ ಯುವ ನಿರ್ದೇಶಕ ಆಕ್ಷನ್ ಕಟ್ ಹೇಳಿದ್ದು, ರಾಮ್ ಗೋಪಾಲ್ ವರ್ಮಾ ನಿರ್ಮಾಣ ಮಾಡಿದ್ದಾರೆ. ಐರಾ ನಾಯಕಿಯಾಗಿ ಅಭಿನಯಿಸಿದ್ದಾರೆ. ಬೆಂಗಳೂರಿನ ಕೆಜಿ ರಸ್ತೆಯಲ್ಲಿರುವ ಸಂತೋಷ್ ಚಿತ್ರಮಂದಿರ ಸೇರಿದಂತೆ ರಾಜ್ಯಾದ್ಯಂತ ‘ಭೈರವಗೀತಾ’ ಬರ್ತಿದ್ದು, ಸಂತೋಷ್ ಚಿತ್ರಮಂದಿರಕ್ಕೆ ನಟ ಧನಂಜಯ್ ಜೊತೆ ಆರ್.ಜಿ.ವಿ ಬೆಳಿಗ್ಗೆ 10.30 ಗಂಟೆಗೆ ಸಿನಿಮಾ ನೋಡಲಿದ್ದಾರೆ.
ಭೈರವ ಗೀತ ರಾಮ್ ಗೋಪಾಲ್ ವರ್ಮ ಧನಂಜಯ

ಪಕ್ಷಿನೋಟ ಕಥೆ ಅಭಿಮಾನಿಗಳ ನುಡಿ ಅತ್ಯಾಕರ್ಷಕ ಚಿತ್ರಗಳು ಫೋಟೋ ವೀಡಿಯೊಗಳು ಕಲಾವಿದರು ಮತ್ತು ಸಿಬ್ಬಂದಿ ವಾಲ್ಪೇಪರ್ಗಳು

ಪಕ್ಷಿನೋಟ ಜೀವನಚರಿತ್ರೆ ಅಭಿಮಾನಿಗಳ ನುಡಿ ಅತ್ಯಾಕರ್ಷಕ ಚಿತ್ರಗಳು ಫೋಟೋ ವೀಡಿಯೊಗಳು ಮುಂಬರುವ ಚಿತ್ರಗಳು ವಾಲ್ಪೇಪರ್ಗಳು

ಪಕ್ಷಿನೋಟ ಜೀವನಚರಿತ್ರೆ ಅಭಿಮಾನಿಗಳ ನುಡಿ ಅತ್ಯಾಕರ್ಷಕ ಚಿತ್ರಗಳು ಫೋಟೋ ವೀಡಿಯೊಗಳು ಮುಂಬರುವ ಚಿತ್ರಗಳು ವಾಲ್ಪೇಪರ್ಗಳು

Related posts

'ಕೆ ಜಿ ಎಫ್'ಗೆ ಚಾಲೆಂಜ್ ಹಾಕಲು ಬಂದ ವಿನಯ್ ರಾಜ್ ಕುಮಾರ್

Prajanudi Admin

ತೆಲುಗು ನಿರ್ದೇಶಕ ಪೂರಿ ಜಗನ್ನಾಥ್, ಸುಕುಮಾರ್ ಜೊತೆ ಕಿಚ್ಚ

Prajanudi Admin

ದೊಡ್ಡ ಪ್ರಶಂಸೆ ಪಡೆದ 'ಜೀರ್ಜಿಂಬೆ' ಟ್ರೇಲರ್

Prajanudi Admin

Leave a Comment