Prajanudi
ಕ್ರೀಡೆ

ಮೊದಲ ಟೆಸ್ಟ್: ಭಾರತಕ್ಕೆ ಆರಂಭಿಕ ಆಘಾತ, ಕೊಹ್ಲಿ, ಕೆಎಲ್ ರಾಹುಲ್ ಔಟ್, 72/4


ಅಡಿಲೇಡ್(ಆಸ್ಟ್ರೇಲಿಯಾ): ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಬ್ಯಾಟಿಂಗ್ ಮಾಡುತ್ತಿರುವ ಟೀಂ ಇಂಡಿಯಾಗೆ ಆರಂಭಿಕ ಆಘಾತ ಎದುರಾಗಿದ್ದು 72 ರನ್ ಗಳಿಗೆ ಪ್ರಮುಖ ನಾಲ್ಕು ವಿಕೆಟ್ ಗಳನ್ನು ಕಳೆದುಕೊಂಡಿದೆ. 

ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಟೀಂ ಇಂಡಿಯಾ ಆರಂಭಿಕರಾದ ಕೆಎಲ್ ರಾಹುಲ್ 2 ರನ್ ಗಳಿಸಿ ಔಟಾದರೆ, ಮುರಳಿ ವಿಜಯ್ 11 ರನ್ ಗಳಿಸಿ ಪೆವಿಲಿಯನ್ ಸೇರಿದರು. ಇನ್ನು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಬಂದಷ್ಟೇ ವೇಗವಾಗಿ ಕ್ವಾವಜಾಗೆ ಕ್ಯಾಚ್ ನೀಡಿ ಪೆವಿಲಿಯನ್ ಸೇರಿದರು. 

ನಂತರ ತಾಳ್ಮೆಯ ಆಟವಾಡುತ್ತಿದ್ದ ಅಜಿಂಕ್ಯ ರಹಾನೆ ಸಹ 13 ರನ್ ಗಳಿಸಿ ಹಜಲ್ ವುಡ್ ಎಸೆತದಲ್ಲಿ ಹ್ಯಾಂಡ್ಸ್ ಕ್ಯೂಬ್ ಗೆ ಕ್ಯಾಚ್ ನೀಡಿ ಔಟಾದರು. ಸದ್ಯ ಚೇತೇಶ್ವರ ಪೂಜಾರ ಅಜೇಯ 17 ರನ್ ಹಾಗೂ ರೋಹಿತ್ ಶರ್ಮಾ 30 ರನ್ ಗಳಿಸಿ ಆಡುತ್ತಿದ್ದಾರೆ. 

ಸದ್ಯ ಟೀಂ ಇಂಡಿಯಾ 35 ಓವರ್ ಮುಕ್ತಾಯಕ್ಕೆ 4 ವಿಕೆಟ್ ಕಳೆದುಕೊಂಡು 74 ರನ್ ಗಳಿಸಿದೆ.

ಆಸ್ಟ್ರೇಲಿಯಾ ಪರ ಬೌಲಿಂಗ್ ನಲ್ಲಿ ಹಜಲ್ವುಡ್ 2, ಸ್ಟಾರ್ಕ್ ಮತ್ತು ಕಮ್ಮಿಸ್ ತಲಾ 1 ವಿಕೆಟ್ ಪಡೆದಿದ್ದಾರೆ.

Related posts

ಪಾಕ್, ಆಸ್ಟ್ರೇಲಿಯಾ, ಇಂಗ್ಲೆಂಡ್ ಕ್ರಿಕೆಟಿಗರ ವಿರುದ್ಧ ಸ್ಪಾಟ್-ಫಿಕ್ಸಿಂಗ್ ಆರೋಪ: ವಿಡಿಯೋ ಕೇಳಿದ ಐಸಿಸಿ

Prajanudi Admin

ಕೆಎಲ್ ರಾಹುಲ್ ವಿರುದ್ಧ ಕೋಚ್ ಸಂಜಯ್ ಬಂಗಾರ್ ಅಸಮಾಧಾನ!

Prajanudi Admin

ಶಾಕಿಂಗ್! ಭಾರತ ಕಪ್ ಗೆದ್ದಿದ್ದ 2011ರ ವಿಶ್ವಕಪ್ ಟೂರ್ನಿಯ 5 ಪಂದ್ಯಗಳು ಫಿಕ್ಸ್ ಆಗಿದ್ದವು!

Prajanudi Admin

Leave a Comment