Prajanudi
ರಾಜಕೀಯ

ಅತೃಪ್ತ ಶಾಸಕರ ತೀರದ ಬೇಗುದಿ: ಕಾಂಗ್ರೆಸ್ ಸಭೆಗೆ ಘಟಾನುಘಟಿಗಳ ಗೈರು!


ಬೆಂಗಳೂರು:ರಾಜ್ಯ ಕಾಂಗ್ರೆಸ್ ಉಸ್ತುವಾರಿ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ, ಕೆ.ಸಿ ವೇಣುಗೋಪಾಲ್ ಆಯೋಜಿಸಿದ್ದ ರಾಜ್ಯ ಕಾಂಗ್ರೆಸ್ ಸಭೆಗೆ ಪ್ರಮುಖ ಕೈ ನಾಯಕರು ಗೈರಾಗಿರುವುದು ಹಲವು ಸಂಶಯಗಳಿಗೆ ಎಡೆ ಮಾಡಿಕೊಟ್ಟಿದೆ.

ಸಂಪುಟ ವಿಸ್ತರಣೆ ಮಾಡುತ್ತಿಲ್ಲ ಎಂಬ ಕಾರಣಕ್ಕೆ ಅಸಮಾಧಾನಗೊಂಡಿರುವ ಶಾಸಕರನ್ನು ಸಮಾಧಾನ ಪಡಿಸುವ ಸಲುವಾಗಿ ಈ ಸಭೆ ಕರೆಯಲಾಗಿತ್ತು,  

ಆದರೆ ಸಭೆಗೆ ಪ್ರಮುಖ ಕಾಂಗ್ರೆಸ್ ನಾಯಕರುಗಳಾದ ರಾಮಲಿಂಗಾ ರೆಡ್ಡಿ, ರೋಷನ್ ಬೇಗ್ ಸೇರಿದಂತೆ ಹಲವು ಘಟಾನುಘಟಿ ನಾಯಕರು ಗೈರಾಗಿದ್ದರು.  ಈ ಮೂಲಕ ತಾವು ಸಚಿವ  ಸ್ಥಾನದ  ಪ್ರಬಲ ಆಕಾಂಕ್ಷಿಗಳು ಎಂಬ ಸಂದೇಶ ರವಾನಿಸಿದ್ದಾರೆ.ಸಮ್ಮಿಶ್ರ ಸರ್ಕಾರ ರಚನೆ ವೇಳೆ ಸಂಪುಟಕ್ಕೆ ತಮ್ಮನ್ನು ಸೇರಿಸಿಕೊಳ್ಳದೇ ದೂರವಿಟ್ಟ ಹಿನ್ನೆಲೆಯಲ್ಲಿ ಈ ಇಬ್ಬರು ನಾಯಕರಲ್ಲಿ ತೀವ್ರ ಅಸಮಾಧಾನ ಮೂಡಿದೆ.

ಡಿ.ಕೆ ಶಿವಕುಮಾರ್ ಜೊತೆಗಿನ ಮುನಿಸಿನಿಂದ ಶಾಸಕ ಸತೀಶ್ ಜಾರಕಿ ಹೊಳಿ ದೂರ ಉಳಿದಿದ್ದರು,  ಇನ್ನೂ ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಮತ್ತು ಮಾಜಿ ಸಿಎಂ ವೀರಪ್ಪ ಮೊಯ್ಲಿ, ಬೇರೆ ಕಾರ್ಯಕ್ರಮಗಳಿಂದಾಗಿ ಹಾಜರಾಗಿರಲಿಲ್ಲ, ರೆಡ್ಡಿ ಮತ್ತು ರೋಷನ್ ಬೇಗ್ ಗೈರಾಗಿದ್ದದ್ದು, ಸಚಿವ ಸ್ಥಾನ ನೀಡುವಂತೆ  ಒತ್ತಡ ಹಾಕುವ ತಂತ್ರವಾಗಿದೆ ಎಂದು ಹೇಳಲಾಗುತ್ತಿದೆ. ಆದರೆ ತಾವು ನಿನ್ನೆ ಉಪ ಮೇಯರ್ ಚುನಾವಣೆಯಲ್ಲಿ ಬ್ಯುಸಿಯಾಗಿದ್ದಾಗಿ ರೆಡ್ಡಿ ಸಮರ್ಥನೆ ನೀಡಿದ್ದಾರೆ.

ಸಭೆಯಲ್ಲಿ ಸಂಪುಟ ವಿಸ್ತರಣೆ , ಅಧಿಕಾರಿಗಳ ವರ್ಗಾವಣೆ, ಕಾಂಗ್ರೆಸ್ ಮತ್ತು ಜೆಡಿಎಸ್ ಸಮನ್ವಯದ ಬಗ್ಗೆ ಹಾಗೂ ಜೆಡಿಎಸ್ ಸಚಿವರ ಪ್ರಾಬಲ್ಯ ಸೇರಿದಂತೆ ಹಲವು ವಿಷಯಗಳ ಬಗ್ಗೆ ಚರ್ಚೆ ಮಾಡಲಾಯಿತು.

ಸಮ್ಮಿಶ್ರ ಸರ್ಕಾರಗಳ ಕಾರ್ಯ ವೈಖರಿ ಬಗ್ಗೆ ಹಾಸನ ಮತ್ತು ಮಂಡ್ಯ ಜಿಲ್ಲಾ ನಾಯಕರು ತಮ್ಮ ಅಸಮಾಧಾನ ವ್ಯಕ್ತ ಪಡಿಸಿದ್ದಾಕೆ. ಜೆಡಿಎಸ್ ಕಾರ್ಯಕರ್ತರು ಕಾಂಗ್ರೆಸ್ ಕಾರ್ಯಕರ್ತರಿಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

Related posts

ಟಿಪ್ಪು ವಿರೋಧಿಗಳೇ.. ಕಿತ್ತೂರು ಚೆನ್ನಮ್ಮ, ಸಂಗೊಳ್ಳಿ ರಾಯಣ್ಣರನ್ನು ಯಾವ ಗುಂಪಿಗೆ ಸೇರಿಸ್ತಿರಿ?: ಸಿದ್ದರಾಮಯ್ಯ

Prajanudi Admin

ಯಡಿಯೂರಪ್ಪ ರೀತಿ ಮೋದಿಗೂ ಸದ್ಯದಲ್ಲೇ ಕಾದಿದೆ 'ಶಾಸ್ತಿ': ಸಿದ್ದರಾಮಯ್ಯ

Prajanudi Admin

ಸಂಪುಟ ವಿಸ್ತರಣೆ: ಆಕಾಂಕ್ಷಿಗಳ ದೆಹಲಿ ಯಾತ್ರೆ ಆರಂಭ, ಸಚಿವ ಸ್ಥಾನಕ್ಕೆ ಲಾಬಿ

Prajanudi Admin

Leave a Comment