Prajanudi
ಕ್ರೀಡೆ

ಮೊದಲ ಟೆಸ್ಟ್: ಮುಳುಗುತ್ತಿದ್ದ ತಂಡಕ್ಕೆ ಆಸರೆಯಾದ ಪೂಜಾರ, ದಿನದ ಅಂತ್ಯಕ್ಕೆ ಭಾರತ 250/9


ಅಡಿಲೇಡ್(ಆಸ್ಟ್ರೇಲಿಯಾ): ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಟೀಂ ಇಂಡಿಯಾ ಮೊದಲ ದಿನದಾಟದಂತ್ಯಕ್ಕೆ 9 ವಿಕೆಟ್ ಕಳೆದುಕೊಂಡು 250 ರನ್ ಪೇರಿಸಿದೆ.

ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಟೀಂ ಇಂಡಿಯಾ ಪರ ಆರಂಭಿಕರಾಗಿ ಕಣಕ್ಕಿಳಿದ ಕೆಎಲ್ ರಾಹುಲ್ 2 ರನ್ ಗಳಿಸಿ ಔಟಾದರೆ, ಮುರಳಿ ವಿಜಯ್ 11 ರನ್ ಗಳಿಸಿ ಪೆವಿಲಿಯನ್ ಸೇರಿದರು. ಇನ್ನು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಬಂದಷ್ಟೇ ವೇಗವಾಗಿ ಕ್ವಾವಜಾಗೆ ಕ್ಯಾಚ್ ನೀಡಿ ಪೆವಿಲಿಯನ್ ಸೇರಿದರು. ನಂತರ ತಾಳ್ಮೆಯ ಆಟವಾಡುತ್ತಿದ್ದ ಅಜಿಂಕ್ಯ ರಹಾನೆ ಸಹ 13 ರನ್ ಗಳಿಸಿ ಹಜಲ್ ವುಡ್ ಎಸೆತದಲ್ಲಿ ಹ್ಯಾಂಡ್ಸ್ ಕ್ಯೂಬ್ ಗೆ ಕ್ಯಾಚ್ ನೀಡಿ ಔಟಾದರು. 

ಈ ವೇಳೆ ಪ್ರಮುಖ ಆಟಗಾರರು ಔಟಾಗುತ್ತಿದ್ದರು ತಾಳ್ಮೆಯ ಆಟವಾಡಿದ ಚೇತೇಶ್ವರ ಪೂಜಾರ 123 ಗಳಿಸಿ ಔಟಾದರು. ಪೂಜಾರ ಶತಕದ ನೆರವಿನಿಂದ ತಂಡ ಅಲ್ಪಮೊತ್ತಕ್ಕೆ ಆಲೌಟ್ ಆಗುವುದರಿಂದ ತಪ್ಪಿಸಿದರು. ರೋಹಿತ್ ಶರ್ಮಾ 37, ರಿಷಬ್ ಪಂತ್ 25, ಆರ್ ಅಶ್ವಿನ್ 25 ರನ್ ಪೇರಿಸಿ ಔಟಾದರು. ಪ್ರಸ್ತುತ ಮೊಹಮ್ಮದ್ ಶಮಿ ಅಜೇಯ 6 ಹಾಗೂ ಬುಮ್ರಾ ಅಜೇಯರಾಗಿ ಉಳಿದಿದ್ದು ಎರಡನೇ ದಿನದಾಟವನ್ನು ಪ್ರಾರಂಭಿಸಲಿದ್ದಾರೆ. 

ಆಸ್ಟ್ರೇಲಿಯಾ ಪರ ಬೌಲಿಂಗ್ ನಲ್ಲಿ ಹೇಜಲ್ವುಡ್, ಸ್ಟಾರ್ಕ್, ಕಮ್ಮಿಸ್ ಹಾಗೂ ಲ್ಯಾನ್ ತಲಾ 2 ವಿಕೆಟ್ ಪಡೆದಿದ್ದಾರೆ.

Related posts

ವಿಡಿಯೋ: ಬೌಂಡರಿ ಗೆರೆಯಲ್ಲಿ ಕೇದಾರ್ ಜಾದವ್ ಅದ್ಭುತ ಕ್ಯಾಚ್‌ಗೆ ಪ್ರೇಕ್ಷಕರು ಫಿದಾ!

Prajanudi Admin

ಆರು ಎಸೆತದಲ್ಲಿ ಆರು ಸಿಕ್ಸರ್, ಒಂದೇ ಇನ್ನಿಂಗ್ಸ್ ನಲ್ಲಿ ದ್ವಿಶತಕ: ಕ್ರಿಕೆಟ್ ನಲ್ಲೊಂದು ಅತಿ ಅಪರೂಪದ ದಾಖಲೆ

Prajanudi Admin

ವಿಡಿಯೋ: 40 ಮೀಟರ್ ದೂರ ಓಡಿ 'ಸೂಪರ್‌ಮ್ಯಾನ್‌' ರೀತಿ ಡೈವ್ ಮಾಡಿ ಧೋನಿ ಅದ್ಭುತ ಕ್ಯಾಚ್!

Prajanudi Admin

Leave a Comment