Prajanudi
ಸಿನಿಮಾ

ಟಿಎನ್ ಸೀತಾರಾಮ್ ಒಂದು 'ಜೀವಂತ ದಂತಕತೆ'..!
ಟಿಎನ್ನೆಸ್ ಅವರು ಹೆಚ್ಚಿನ ಎಲ್ಲರಂತೆ ನನಗೂ ಟಿ.ವಿಯ ಮೂಲಕವೇ ಪರಿಚಿತರಾದವರು. ಬಹುಶಃ ‌ಕರ್ನಾಟಕದಲ್ಲಿ ಎಷ್ಟೋ ಮಂದಿ ಮೇಲ್ ಆಡಿಯನ್ಸ್ ಗಳಿಗೆ ಧಾರಾವಾಹಿ ನೋಡುವ ಹುಚ್ಚು ಬೆಳೆಸಿದವರೇ ಟಿಎನ್ನೆಸ್ ಎನ್ನಬಹುದು. ಧಾರಾವಾಹಿ ಅಂದರೆ ಹೆಣ್ಣುಮಕ್ಕಳಿಗೆ ಮಾತ್ರ ಎಂಬ ನಿಯಮವನ್ನು ಮುರಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಅವರ ಜರ್ನಿಯ ಬಗ್ಗೆ ನನ್ನಿಂದ ತಿಳಿಯುವ ಅಗತ್ಯ ಯಾರಿಗೂ ಇರಲ್ಲ. ಆದರೆ ಎಲ್ಲ ತಲೆಮಾರುಗಳ ನಡುವೆ ಒಂದು ಸೇತುವೆಯಾಗಿ ಉಳಿದುಕೊಂಡಿರುವ ಲೆಜೆಂಡ್ ಎಂದೇ ಅವರನ್ನು ಗುರುತಿಸಬಹುದು. ಪುಟ್ಟಣ್ಣ ಕಣಗಾಲ್ ಅಂಥವರಿಂದ ಹಿಡಿದು, ಇಂದಿನ ಯುವ ಟಿ.ವಿ ನಿರ್ದೇಶಕರ ತನಕ ಕೆಲಸ ಮಾಡಿರುವ ಅನುಭವ ಅವರದಾಗಿತ್ತು. ಇಂತಹ ದಿಗ್ಗಜ ಕಲಾವಿದ ನಿನ್ನೆ (ಡಿಸೆಂಬರ್ 6) ತಮ್ಮ 70ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಅವರಿಗೆ ಶುಭ ಕೋರಿರುವ ಝೀ ಕನ್ನಡ ವಾಹಿನಿಯ ಮುಖ್ಯಸ್ಥ ರಾಘವೇಂದ್ರ ಹುಣಸೂರು, ಟಿಎನ್ಎಸ್ ಜೊತೆಗಿನ ಕೆಲವು ಒಳ್ಳೆಯ ಅನುಭವಗಳನ್ನ ಹಂಚಿಕೊಂಡಿದ್ದಾರೆ. ಮುಂದೆ ಓದಿ…..

ಟಿಎನ್ಎಸ್ ಮೊದಲ ಭೇಟಿ ಅವರೊಂದಿಗೆ ನನ್ನ ಹತ್ತಿರದ ಒಡನಾಟ ಆಗಿದ್ದು ನಾನು ಸುವರ್ಣ ವಾಹಿನಿಯಿಂದ ಈ ಟಿವಿಗೆ ಕಾಲಿಟ್ಟಾಗ. ಆಗ ಅವರ ‘ಮುಕ್ತ ಮುಕ್ತ’ ಧಾರಾವಾಹಿ ಮುಕ್ತಾಯವಾಗುತ್ತಿದ್ದ ಸಮಯ. ಆ ಸಮಯದಲ್ಲಿ ಒಂದು ಗೆಟ್ ಟುಗೆದರ್ ಇರಿಸಲಾಗಿತ್ತು. ಮೊದಲ ಬಾರಿ ನನ್ನ ಅವರ ಭೇಟಿಯಾಗಿದ್ದು ಅಲ್ಲಿ. ಆದರೆ ಅದಕ್ಕೂ ಬಹಳ ಹಿಂದೆ ಝೀ ಕನ್ನಡದಲ್ಲಿ ‘ಡ್ಯಾಡಿ ನಂಬರ್ ಒನ್’ ಎಂಬ ಶೋ ಮಾಡಿದ್ದೆ. ಆ ಸಮಯದಲ್ಲಿ ಇವರ ಮುಕ್ತ ಮುಕ್ತಕ್ಕಿಂತ ಹೆಚ್ಚು ಜನಪ್ರಿಯತೆ ನನ್ನ ಶೋ ಪಡೆದಿದೆ ಎಂದು ಅರಿತುಕೊಂಡ ಅವರು ನನಗೆ ಫೋನ್ ಮಾಡಿ ಅಭಿನಂದನೆಗಳನ್ನು ತಿಳಿಸಿದ್ದರು. ‘ಜಾನಕಿ’ಯ ತಂದೆಗೆ ಜನ್ಮದಿನ, ಎಪ್ಪತ್ತರ ಸಂಭ್ರಮದಲ್ಲಿ ಟಿಎನ್ ಸೀತಾರಾಮ್

‘ಡ್ರಾಮಾ ಜೂನಿಯರ್ಸ್’ ಪ್ರಮುಖ ವೇದಿಕೆ ಹೊಸ ಹುಡುಗನೊಬ್ಬ ಏನೋ ಶೋ ಮಾಡಿ ಒಳ್ಳೆಯ ರೇಟಿಂಗ್ ತರುತ್ತಿದ್ದಾನೆ ಅಂದರೆ ಅದನ್ನು ಪ್ರಶಂಸಿಸುವ ಮನಸ್ಥಿತಿ ಅವರಿಗಿತ್ತು. ಇನ್ನು ಅವರೊಂದಿಗೆ ತುಂಬಾ ಆತ್ಮೀಯತೆ ಬೆಳೆದಿದ್ದು ‘ಡ್ರಾಮ ಜ್ಯೂನಿಯರ್ಸ್’ನಲ್ಲಿ ಅವರನ್ನು ತೀರ್ಪುಗಾರರನ್ನಾಗಿ ತೆಗೆದುಕೊಂಡಾಗ. ಆರಂಭದಲ್ಲಿ ಅದಕ್ಕೆ ಬರಲು ಅವರು ಒಪ್ಪಿರಲಿಲ್ಲ. ನನಗೂ ಕೂಡ ಅವರಂಥ ಹಿರಿಯರು ಮಕ್ಕಳೊಂದಿಗೆ ಹೇಗೆ ಬೆರೆಯುತ್ತಾರೆ ಎನ್ನುವ ಆತಂಕ ಒಳಗೆಲ್ಲೋ ಇತ್ತು. ಆದರೆ ಅಭಿನಯ ಮತ್ತು ಎಕ್ಸ್‌ಪ್ರೆಶನ್ಗಳ ಬಗ್ಗೆ ಅವರಂತೆ ಅಲ್ಲಿ ಮಕ್ಕಳ ಜೊತೆಗೆ ಹಂಚಿಕೊಂಡವರು ನನಗೆ ತಿಳಿದ ಮಟ್ಟಿಗೆ ಬೇರೆ ಯಾರೂ ಇರಲಿಲ್ಲ. ಮಕ್ಕಳ ಜೊತೆಗೆ ಮಕ್ಕಳಂತೆ ಬೆರೆತು ಅವರಿಗೆ ಅರ್ಥವಾಗುವಂತೆ ಜಡ್ಜ್ ಮೆಂಟ್ ಕೊಡುವು ಅವರ ರೀತಿ ಇದೆಯಲ್ವಾ? ಅದೊಂದು ದೊಡ್ಡ ಕಲೆಯೇ ಸರಿ!

ಅವರದು ಮಿಡಿಯುವ ಹೆಂಗರುಳು ಇನ್ನೊಂದು ವಿಚಾರ ಏನು ಅಂದರೆ ಅವರಷ್ಟು ಎಮೋಶನಲ್ ವ್ಯಕ್ತಿಯನ್ನು ನಾನು ನೋಡಿಲ್ಲ. ಸ್ಕಿಟ್ ಗಳಲ್ಲಿ ವಿಶೇಷವಾಗಿ ಏನಾದರೂ ತಂದೆ ಮಗಳ ದೃಶ್ಯಗಳಿದ್ದರೆ ಸಾಕು, ಕಣ್ಣೀರು ಸುರಿಸಿಯೇ ಬಿಡುವಂಥ ಹೆಂಗರುಳು ಅವರದಾಗಿತ್ತು. ಅವರದೇ ಸೃಷ್ಟಿಯ ಪಾತ್ರಗಳು ಪರದೆಯ ಮೇಲೆ ಬಹಳಷ್ಟು ಸ್ಟ್ರಾಂಗ್ ಆಗಿರುತ್ತದೆ. ಆದರೆ ಈ ಸೃಷ್ಟಿಕರ್ತ ಮಾತ್ರ ಒಳಗಡೆ ಅಷ್ಟೇ ಮೃದು ಸ್ವಭಾವ ಹೊಂದಿದವರು.
ಅವರಲ್ಲಿ ಒಂದು ತುಂಟತನವೂ ಇದೆ ಇವೆಲ್ಲದರ ಜೊತೆಗೆ ಅವರ ಒಳಗೆ ಒಂದು ತುಂಟತನ ಕೂಡ ಇದೆ. ಇದು ಅವರನ್ನು ಹತ್ತಿರದಿಂದ ಬಲ್ಲವರಿಗೆ ಮಾತ್ರ ತಿಳಿದಿರಲು ಸಾಧ್ಯ. ಬಿಹೈಂಡ್ ದ ಸ್ಕ್ರೀನ್ ಅಪರೂಪಕ್ಕೆ ಅವರ ಜೊತೆಗೆ ಮನಸು ಬಿಚ್ಚಿ ‘ಒಂದೆಡೆ ಕುಳಿತು’ ಮಾತನಾಡುವ ಸಂದರ್ಭ ಸಿಕ್ಕರೆ ಅವರು ತಮ್ಮ ಹಳೆಯ ಅನುಭವಗಳನ್ನು ಅತ್ಯಂತ ಸೊಗಸಾಗಿ ಹಂಚಿಕೊಳ್ಳುತ್ತಿದ್ದರು. ನಮ್ಮ ಡ್ರಾಮದ ಮುಂದಿನ ಸೀಸನ್ ಗಳಲ್ಲಿ ಕೆಲವು ಅನಿವಾರ್ಯ ಕಾರಣಗಳಿಂದ ಅವರು ಪಾಲ್ಗೊಳ್ಳಲಿಲ್ಲ. ಆದರೆ ನಮ್ಮ ಬೆಸ್ಟ್ ಮೆಮೊರಿಗಳೆಲ್ಲ ಆ ಮೊದಲ ಸೀಸನಲ್ಲೇ ಭದ್ರವಾಗಿವೆ. ಒಟ್ಟಿನಲ್ಲಿ ಜೀವಂತ ದಂತಕತೆಯಾಗಿರುವ ಅವರಿಗೆ ಭಗವಂತ ಆರೋಗ್ಯ, ಆಯಸ್ಸು ನೀಡಲಿ ಎಂದು ಈ ಸಂದರ್ಭದಲ್ಲಿ ಹಾರೈಸುತ್ತೇನೆ – ರಾಘವೇಂದ್ರ ಹುಣಸೂರು, ಝೀ ಕನ್ನಡ ವಾಹಿನಿಯ ಮುಖ್ಯಸ್ಥ
ಟಿ.ಎನ್. ಸೀತರಾಮ್

ಪಕ್ಷಿನೋಟ ಜೀವನಚರಿತ್ರೆ ಅಭಿಮಾನಿಗಳ ನುಡಿ ಅತ್ಯಾಕರ್ಷಕ ಚಿತ್ರಗಳು ಫೋಟೋ ವೀಡಿಯೊಗಳು ಮುಂಬರುವ ಚಿತ್ರಗಳು ವಾಲ್ಪೇಪರ್ಗಳು

Related posts

ಶಿವಣ್ಣನ ನಂತರ 'ರಾಜಣ್ಣನ ಮಗ'ನಿಗೆ ಸಾಥ್ ನೀಡಿದ ಪುನೀತ್

Prajanudi Admin

ದರ್ಶನ್ ಈಸ್ ಬ್ಯಾಕ್, ಫೀಲ್ಡ್ ಗೆ ಇಳಿದ ದಾಸ

Prajanudi Admin

ಪ್ರೇಮ್ ಅವರಿಗೇ ಟಾಂಗ್ ಕೊಟ್ಟ 'ಜೋಗಿ' ಯೋಗೇಶ

Prajanudi Admin

Leave a Comment