Prajanudi
ನ್ಯೂಸ್ ರಾಜ್ಯ

ಪೋಷಕರ ವಿರೋಧ, ಜೀವ ಬೆದರಿಕೆ ನಡುವೆಯೂ ಹಿಂದು ಯುವಕನನ್ನು ವಿವಾಹವಾದ ಮುಸ್ಲಿಂ ಯುವತಿ!


ಹಾಸನ: ಪೋಷಕರ ವಿರೋಧ, ಜೀವ ಬೆದರಿಕೆ ನಡುವೆಯೂ ಮಹಿಳಾ ರಕ್ಷಣಾ ಕೇಂದ್ರದಲ್ಲಿದ್ದ ಮುಸ್ಲಿಂ ಯುವತಿಯೊಬ್ಬಳು ಅಲ್ಲಿಂದ ತಪ್ಪಿಸಿಕೊಂಡು ಪ್ರೀತಿಸುತ್ತಿದ್ದ ಹಿಂದೂ ಯುವಕನನ್ನು ವಿವಾಹವಾಗಿದ್ದಾಳೆ. 

ಹಾಸನದ ಆಲೂರು ತಾಲೂಕಿನ ಕರಡೀಬೈಲು ಗ್ರಾಮದಲ್ಲಿ 2017ರ ನವೆಂಬರ್ 13ರಂದು ಮಹಮ್ಮದ್ ಅಲಿ ಪುತ್ರಿ ರಂಸೀನಾ ರಾತ್ರೋರಾತ್ರಿ ನಾಪತ್ತೆಯಾಗಿದ್ದಳು. ಈ ಸಂಬಂಧ ರಘು ಮಗಳನ್ನು ಅಪಹರಿಸಿದ್ದಾನೆ ಅಂತ ರಂಸೀನಾ ಪೋಷಕರು ಪೊಲೀಸರಿಗೆ ದೂರು ನೀಡಿದ್ದಲ್ಲದೇ ಹೈಕೋರ್ಟ್ ಮೆಟ್ಟಿಲೇರಿದ್ದರು. ಬಳಿಕ ಪತ್ತೆಯಾದ ರಂಸೀನಾ ಹಾಸನದ ಬಾಲ ಭವನದಲ್ಲಿ ಆಶ್ರಯ ಪಡೆದಿದ್ದಳು. 

ಸೆಪ್ಟೆಂಬರ್ 25ರಂದು ಬಾಲಭವನದ ಬಳಿ ಬಂದ ರಘು ತನ್ನೊಡನೆ ರಂಸೀನಾಳನ್ನು ಕಳುಹಿಸಿಕೊಡುವಂತೆ ಪಟ್ಟು ಹಿಡಿದಿದ್ದನು. ಈಗ ಯುವತಿ ಪೋಷಕರು ಹಾಗೂ ರಘು ನಡುವೆ ವಾಗ್ವಾದ ತಾರಕಕ್ಕೇರಿತ್ತು. ಇಶ್ಟೇಲ್ಲಾ ರಂಪಾಟದ ಬಳಿಕ ರಂಸೀನಾ ಪೋಷಕರು ಮಗಳನ್ನು ಹಾಸನದ ಕೆಆರ್ ಪುರಂನ ಶ್ವೇತಾ ಉಜ್ವಲ ಕೇಂದ್ರದ ಆಶ್ರಯದಲ್ಲಿರಿಸಿದ್ದರು. 

ಶನಿವಾರ ಬೆಳಗ್ಗೆ ಅಲ್ಲಿಂದ ತಪ್ಪಿಸಿಕೊಂಡ ರಂಸೀನಾ ರಘುವಿನೊಂದಿಗೆ ಅರಸೀಕೆರೆ ರಸ್ತೆಯ ದೇವಾಲಯದಲ್ಲಿ ಪರಸ್ಪರ ಹಾರ ಬದಲಿಸಿಕೊಂಡು ವಿವಾಹವಾಗಿದ್ದರು. ಆಕೆಗೆ 18 ವರ್ಷವಾಗಿದೆ ಹಾಗಾಗಿ ರಘು ಜೊತೆ ಮದುವೆಯಾಗಿದ್ದೇನೆ. ಮುಂದೆ ನಾವು ಚೆನ್ನಾಗಿ ಬಾಳುತ್ತೇವೆ. ಆದರೆ ನಮಗೆ ಜೀವ ಭಯವಿದ್ದು ನಮಗೆ ಕಾನೂನು ರಕ್ಷಣೆ ಕೊಡಬೇಕು ಅಂತ ರಂಸೀನಾ ಮನವಿ ಮಾಡಿಕೊಂಡಿದ್ದಾರೆ.

Related posts

ಪಂಚರಾಜ್ಯಗಳ ಫಲಿತಾಂಶ ಮೋದಿ ಸರ್ಕಾರದ ಕುರಿತಂತೆ ಮೌಲ್ಯಮಾಪನವಲ್ಲ: ರಾಜನಾಥ್ ಸಿಂಗ್

Prajanudi Admin

ಬೆಂಗಳೂರು; ಭದ್ರತಾ ಸಿಬ್ಬಂದಿಗಳ ಹತ್ಯೆ, ಶಂಕಿತ ನಾಪತ್ತೆ

Prajanudi Admin

ಕಾಶ್ಮೀರ: ಕಲ್ಲು ತೂರಾಟದಲ್ಲಿ ಗಾಯಗೊಂಡಿದ್ದ ಯೋಧ ರಾಜೇಂದ್ರ ಸಿಂಗ್ ಹುತಾತ್ಮ

Prajanudi Admin

Leave a Comment