Prajanudi
ರಾಜಕೀಯ

2019 ಲೋಕಸಭಾ ಚುನಾವಣೆ: ಜೆಡಿಎಸ್ 12 ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಚಿಂತನೆ , ಕಾಂಗ್ರೆಸ್ ರಕ್ಷಣಾತ್ಮಕ ಆಟ


ಬೆಂಗಳೂರು: 2019ರ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿನ 28  ಸ್ಥಾನಗಳ ಪೈಕಿ 12 ಸ್ಥಾನಗಳಲ್ಲಿ ಸ್ಪರ್ಧಿಸಲು ಜೆಡಿಎಸ್ ಚಿಂತನೆ ನಡೆಸಿದೆ. ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವಿನ ಸೀಟು ಹೊಂದಾಣಿಕೆ  ಜನವರಿ 15 ರಂದು ಅಂತಿಮಗೊಳ್ಳುವ ಸಾಧ್ಯತೆ ಇದೆ.  ಜೆಡಿಎಸ್ ವರಿಷ್ಠ ಹೆಚ್. ಡಿ. ದೇವೇಗೌಡ ಅಂದುಕೊಂಡಂತೆ ಸೀಟು ಪಡೆದುಕೊಳ್ಳುವ ವಿಶ್ವಾಸದಲ್ಲಿದ್ದಾರೆ. ಆದರೆ.  ಕಾಂಗ್ರೆಸ್ ರಕ್ಷಣಾತ್ಮಕ ಆಟವಾಡುತ್ತಿದೆ.ಈ ಸಂಬಂಧ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ದೇವೇಗೌಡ, 12 ಸ್ಥಾನಗಳನ್ನು ಬಿಟ್ಟುಕೊಡುವಂತೆ  ಬೇಡಿಕೆ ಇಡಲಾಗಿದೆ. ಅದನ್ನು ಪಡೆಯುದಲ್ಲಿ ಯಾವುದೇ ಅಡಚಣೆ ಇಲ್ಲ, ಸೀಟು ಹೊಂದಾಣಿಕೆ ಸಂಬಂಧ ಜನವರಿ 15ಕ್ಕೂ ಮುಂಚಿತವಾಗಿ ರಾಹುಲ್ ಗಾಂಧಿ ಅವರೊಂದಿಗೆ ಮಾತುಕತೆ ನಡೆಸಲಾಗುವುದು ಎಂದು  ಎಂದು ತಿಳಿಸಿದರು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತವರೂ ಜಿಲ್ಲೆ ಮೈಸೂರು, ತುಮಕೂರು ಮೊದಲಾದ ಕಡೆಗಳಲ್ಲಿ ಕಾಂಗ್ರೆಸ್  ಸಂಸದರಿದ್ದಾರೆ. ಹಾಸನ, ಮಂಡ್ಯ, ಹೊರತುಪಡಿಸಿದಂತೆ  ಬೆಂಗಳೂರು ಉತ್ತರ ಜಿಲ್ಲೆಯಲ್ಲಿ  ಅಭ್ಯರ್ಥಿಗಳನ್ನು ಕಣಕ್ಕಿಳಿಸಲು  ಜೆಡಿಎಸ್  ಚಿಂತನೆ ನಡೆಸುತ್ತಿದೆ.  ದೇವೇಗೌಡರು ಹಿರಿಯ ರಾಜಕಾರಣಿಯಾಗಿದ್ದು, ಅವರ ಪಕ್ಷಕ್ಕೆ ಎಷ್ಟು ಬೇಕು ಅಂತಾ ಮಾತನಾಡಿದ್ದಾರೆ. ಚರ್ಚೆಯ ನಂತರ ಸೀಟು ಹೊಂದಾಣಿಕೆ ಅಂತಿಮಗೊಳಿಸಲಾಗುತ್ತದೆ. ಸಮ್ಮಿಶ್ರ ಸರ್ಕಾರದಲ್ಲಿ ತೆಗೆದುಕೊಳ್ಳುವುದು, ಬಿಡುವುದರ ಬಗ್ಗೆ ಕೂತು ಚರ್ಚಿಸಲಾಗುವುದು ಎಂದು ಎಐಸಿಸಿ  ಕಾರ್ಯದರ್ಶಿ  ಕೆ. ಸಿ. ವೇಣುಗೋಪಾಲ್ ತಿಳಿಸಿದ್ದಾರೆ.ಹಳೆಯ ಮೈಸೂರು, ಹೈದ್ರಾಬಾದ್ ಕರ್ನಾಟಕ, ಮುಂಬೈ ಕರ್ನಾಟಕ ಮತ್ತಿತರ ಕಡೆಗಳಲ್ಲಿ ಜೆಡಿಎಸ್  ಅಭ್ಯರ್ಥಿಗಳನ್ನು ಕಣಕ್ಕಿಳಿಸಲು 12 ಸ್ಥಾನಗಳನ್ನು  ಕೇಳಲಾಗುತ್ತಿದೆ. ಮಾತುಕತೆ ನಂತರವೇ ಇದು ಅಂತಿಮ ನಿರ್ಧಾರವಾಗಲಿದೆ. ಯಾವುದೇ ತೊಂದರೆಯಾಗದ ರೀತಿಯಲ್ಲಿ  ಈ ಸಂಬಂಧ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು  ಎಂದು ಅವರು ತಿಳಿಸಿದ್ದಾರೆ.

Related posts

2-3 ದಿನದಲ್ಲಿ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ರಚನೆ: ಕುತೂಹಲ ಕೆರಳಿಸಿದ ರಾಮ್ ಶಿಂಧೆ ಹೇಳಿಕೆ

Prajanudi Admin

ನಾನು ನಟ ಮಾತ್ರ ಅಲ್ಲ, ಬೆಂಗಳೂರಿಗರಿಗೆ ನಾನು ಏನೆಂದು ಗೊತ್ತಿದೆ: ಪ್ರಕಾಶ್ ರೈ

Prajanudi Admin

ತನ್ನ ಶಾಸಕರ ಮೇಲೆ ಬಿಜೆಪಿಗೆ ನಂಬಿಕೆಯಿಲ್ಲ: ಕುಮಾರಸ್ವಾಮಿ ಟಾಂಗ್

Prajanudi Admin

6 comments

Leave a Comment