Prajanudi
ಸಿನಿಮಾ

ಸೀಮಂತದಲ್ಲಿ ರಾಧಿಕಾ ಪಂಡಿತ್ ಗೆ ಸಿಕ್ಕ ದುಬಾರಿ ಉಡುಗೊರೆಗಳ ಮೇಲೆ ಐಟಿ ಕಣ್ಣು.!




Sandalwood IT Raid: ರಾಧಿಕಾ ಪಂಡಿತ್ ಸೀಮಂತದ ಉಡುಗೊರೆಯನ್ನೂ ಬಿಡದ ಐಟಿ ಅಧಿಕಾರಿಗಳು | Oneindia Kannada ಸ್ಯಾಂಡಲ್ ವುಡ್ ನ ಸ್ಟಾರ್ ನಟರು ಮತ್ತು ನಿರ್ಮಾಪಕರ ನಿವಾಸದ ಮೇಲಿನ ಐಟಿ ದಾಳಿ ಮೂರನೇ ದಿನಕ್ಕೆ ಕಾಲಿಟ್ಟಿದೆ. ಅತ್ತ ಶಿವರಾಜ್ ಕುಮಾರ್, ಪುನೀತ್ ರಾಜ್ ಕುಮಾರ್ ಮತ್ತು ಸುದೀಪ್ ಮನೆಯಲ್ಲಿ ಆದಾಯ ತೆರಿಗೆ ಅಧಿಕಾರಿಗಳ ಪರಿಶೀಲನೆ ಮುಕ್ತಾಯಗೊಂಡಿದ್ದರೆ, ಇತ್ತ ಯಶ್ ಮನೆಯಲ್ಲಿ ಇನ್ನೂ ತಲಾಶ್ ನಡೆಯುತ್ತಲೇ ಇದೆ. ಯಶ್ ಖರೀದಿ ಮಾಡಿರುವ ಆಸ್ತಿ, ಚಿನ್ನಾಭರಣ, ಚಿತ್ರಗಳಿಗೆ ಪಡೆಯುವ ಸಂಭಾವನೆ ಸೇರಿದಂತೆ ಆದಾಯದ ಮೂಲಗಳ ಬಗ್ಗೆ ಐಟಿ ಅಧಿಕಾರಿಗಳು ತನಿಖೆ ನಡೆಸಿದ್ದಾರೆ. ಜೊತೆಗೆ ಯಶ್ ಮತ್ತು ರಾಧಿಕಾ ಪಂಡಿತ್ ಗೆ ಸೇರಿದ ದುಬಾರಿ ಉಡುಗೊರೆಗಳ ಮೇಲೂ ಐಟಿ ಕಣ್ಣಿಟ್ಟಿದೆ. ಬೆಂಗಳೂರಿಗೆ ಬಂದ ಯಶ್, ಐಟಿ ರೈಡ್ ಬಗ್ಗೆ ಹೇಳಿದ್ದೇನು? ನವೆಂಬರ್ ತಿಂಗಳಲ್ಲಿ ತುಂಬು ಗರ್ಭಿಣಿ ರಾಧಿಕಾ ಪಂಡಿತ್ ಸೀಮಂತ ಕಾರ್ಯಕ್ರಮ ಪ್ರತಿಷ್ಟಿತ ಹೋಟೆಲ್ ನಲ್ಲಿ ನಡೆದಿತ್ತು. ಸೀಮಂತಕ್ಕೆ ಕನ್ನಡ ಚಿತ್ರರಂಗದ ಗಣ್ಯರು ಮತ್ತು ರಾಜಕಾರಣಿಗಳು ಆಗಮಿಸಿ ಗರ್ಭವತಿ ರಾಧಿಕಾ ಪಂಡಿತ್ ಗೆ ದುಬಾರಿ ಗಿಫ್ಟ್ ಗಳನ್ನು ನೀಡಿದ್ದರು. ಐಟಿ ಅಧಿಕಾರಿಗಳು ಇವರನ್ನೇ ಟಾರ್ಗೆಟ್ ಮಾಡಲು ಕಾರಣ ಇದಿರಬಹುದೇ? ಈ ಬೆಲೆ ಬಾಳುವ ಉಡುಗೊರೆಗಳ ವಿಚಾರವಾಗಿ ಆದಾಯ ತೆರಿಗೆ ಅಧಿಕಾರಿಗಳು ಸದ್ಯ ಮೌಲ್ಯಮಾಪನ ನಡೆಸುತ್ತಿದ್ದಾರೆ. ಇದರ ನಡುವೆ ಪಂಚನಾಮೆಗೂ ಸಿದ್ಧತೆ ಮಾಡಕೊಳ್ಳಲಾಗಿದ್ದು, ಇಂದು ಮಧ್ಯಾಹ್ನದ ಹೊತ್ತಿಗೆ ಯಶ್ ಮನೆಯಲ್ಲಿ ಪರಿಶೀಲನೆ ಅಂತ್ಯಗೊಳ್ಳುವ ಸಾಧ್ಯತೆ ಇದೆ. ಯಶ್ ರಾಧಿಕಾ ಪಂಡಿತ್ ಪಕ್ಷಿನೋಟ ಜೀವನಚರಿತ್ರೆ ಅಭಿಮಾನಿಗಳ ನುಡಿ ಅತ್ಯಾಕರ್ಷಕ ಚಿತ್ರಗಳು ಫೋಟೋ ವೀಡಿಯೊಗಳು ಮುಂಬರುವ ಚಿತ್ರಗಳು ವಾಲ್ಪೇಪರ್ಗಳು ಪಕ್ಷಿನೋಟ ಜೀವನಚರಿತ್ರೆ ಅಭಿಮಾನಿಗಳ ನುಡಿ ಅತ್ಯಾಕರ್ಷಕ ಚಿತ್ರಗಳು ಫೋಟೋ ವೀಡಿಯೊಗಳು ಮುಂಬರುವ ಚಿತ್ರಗಳು ವಾಲ್ಪೇಪರ್ಗಳು

Related posts

'ಕೆಜಿಎಫ್-2'ಗೆ ಸಂಜಯ್ ದತ್ ಎಂಟ್ರಿ: ನಿರ್ಮಾಪಕ ವಿಜಯ್ ಹೇಳಿದ್ದೇನು?

Prajanudi Admin

ಅಣ್ಣಾವ್ರ ಎವರ್ ಗ್ರೀನ್ ಹಾಡನ್ನ ಮತ್ತೆ ಬಳಸಿದ ಶಿವಣ್ಣ

Prajanudi Admin

ಎಷ್ಟು ಬಾರಿ 'ಕೆಜಿಎಫ್' ಸಿನಿಮಾ ನೋಡಿದ್ರು ಶ್ರೀನಿಧಿ ಶೆಟ್ಟಿ?

Prajanudi Admin

Leave a Comment