• Home
  • ಮುಖ್ಯಾಂಶಗಳು
  • ಬಸ್ಸಿಗೆ ದಾರಿಬಿಡದೆ ಅಡ್ಡಗಟ್ಟಿ ನಿಂತ ಮಹಿಳೆಗೆ ಮೆಚ್ಚುಗೆ ಮಹಾಪೂರ
ಅಂಕಣ ಮುಖ್ಯಾಂಶಗಳು

ಬಸ್ಸಿಗೆ ದಾರಿಬಿಡದೆ ಅಡ್ಡಗಟ್ಟಿ ನಿಂತ ಮಹಿಳೆಗೆ ಮೆಚ್ಚುಗೆ ಮಹಾಪೂರ

ಕೊಚ್ಚಿನ್​: ತಪ್ಪು ಮಾರ್ಗದಲ್ಲಿ ಬರುತ್ತಿದ್ದ ಬಸ್​ಗೆ ಅಡ್ಡವಾಗಿ ನಡುರಸ್ತೆಯಲ್ಲಿಯೇ ತನ್ನ ಸ್ಕೂಟಿಯನ್ನು ನಿಲ್ಲಿಸಿದ ಕೇರಳ ಮೂಲದ ಮಹಿಳೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ನೆಟ್ಟಿಗರು ಮಹಿಳೆಗೆ ಮೆಚ್ಚಿಗೆ ಮಹಾಪೂರ ಹರಿಸಿದ್ದಾರೆ.

ವೈರಲ್​ ಆಗಿರುವ ವಿಡಿಯೋದಲ್ಲಿರುವಂತೆ ನಡುರಸ್ತೆಯ ಬಿಳಿಗೆರೆಯ ಪಕ್ಕದಲ್ಲಿ ಎದುರಿಗೆ ಬಂದ ಬಸ್​ಗೆ ಅಡ್ಡಲಾಗಿ ತನ್ನ ಸ್ಕೂಟಿಯನ್ನು ಮಹಿಳೆ ನಿಲ್ಲಿಸುತ್ತಾಳೆ. ತಪ್ಪು ಮಾರ್ಗದಲ್ಲಿ ಬಂದ ಬಸ್​ ತನ್ನ ಸರಿಯಾದ ಮಾರ್ಗಕ್ಕೆ ಬರೋವರೆಗೂ ಪಟ್ಟುಬಿಡದೆ ನಡುರಸ್ತೆಯಲ್ಲಿಯೇ ಮಹಿಳೆ ನಿಲ್ಲುತ್ತಾಳೆ. ಕೊನೆಯಲ್ಲಿ ಬಸ್​ ಚಾಲಕ ಮಹಿಳೆಯಿಂದ ಪಕ್ಕಕ್ಕೆ ಸರಿದು ಮುಂದೆ ಬಸ್​ ಚಲಾಯಿಸಿಕೊಂಡು ಹೋಗುತ್ತಾನೆ.

ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿರುವ ಈ ವಿಡಿಯೋವನ್ನು ಬಸ್​ ನಂಬರ್​ ಮೂಲಕ ಕೇರಳದ್ದು ಎಂದು ಪತ್ತೆಹಚ್ಚಲಾಗಿದೆ. ವಿಡಿಯೋವನ್ನು ದಿಗೋಸ್ಟ್​ರೈಡರ್​31 ಎಂಬ ಹೆಸರಿನ ಟ್ವಿಟರ್​ ಖಾತೆಯಲ್ಲಿ ಅಪ್​ಲೋಡ್​ ಮಾಡಲಾಗಿದ್ದು, ಯಾವಾಗ ನೀವು ಸರಿಯಾಗಿರುತ್ತೀರಾ, ಅದೇ ನಿಮಗೆ ವಿಭಿನ್ನ ರೀತಿಯ ಬಲವನ್ನು ನೀಡುತ್ತದೆ ಎಂದು ಬರೆದುಕೊಂಡಿದ್ದಾರೆ.

ವಿಡಿಯೋವನ್ನು ಈವರೆಗೂ ಸುಮಾರು 47,000 ಮಂದಿ ವೀಕ್ಷಣೆ ಮಾಡಿದ್ದು, 4 ಸಾವಿರಕ್ಕೂ ಹೆಚ್ಚು ಮಂದಿ ಲೈಕ್ಸ್​ ಮಾಡಿದ್ದಾರೆ. ಕಮೆಂಟ್​ ವಿಭಾಗದಲ್ಲಿ ನೆಟ್ಟಿಗರು ಮಹಿಳೆಯನ್ನು ಮೆಚ್ಚಿ ಕೊಂಡಾಡಿದ್ದಾರೆ.

Related posts

ತಿಹಾರ್‌ ಜೈಲಿಂದ ಡಿಕೆಶಿ ಹೊರಬರೋದು ಹೇಗೆ? ‘ಬಂಡೆ’ ಮುಂದಿರೋ ಆಯ್ಕೆಗಳೇನು?

Kannadigara Prajanudi

ವರುಣದೇವನ ಸಂಪ್ರೀತಗೊಳಿಸುವ ಹಬ್ಬವಾಗಿದ್ದ ದಸರಾ ನಾಡಹಬ್ಬವಾಗುತ್ತ ಸಾಗಿ ಬಂದ ಹಾದಿ

Kannadigara Prajanudi

ತಾನೇ ಗುಂಡಿ ತೋಡಿಕೊಂಡು ಜೀವಂತ ಸಮಾಧಿಯಾಗಲು ಆ ರೈತ ಪ್ರಯತ್ನಿಸಿದ್ದೇಕೆ?

Kannadigara Prajanudi

Leave a Comment