Prajanudi
ಸಿನಿಮಾ

'ನಟಸಾರ್ವಭೌಮ'ನಿಗಾಗಿ ಹುಬ್ಬಳ್ಳಿಗೆ ಹೊರಟ ಯಶ್.!




ಕಳೆದ ಮೂರು ದಿನಗಳಿಂದ ಐಟಿ ದಾಳಿಯಲ್ಲೇ ಮುಳುಗಿಹೋಗಿದ್ದ ಸ್ಯಾಂಡಲ್ ವುಡ್ ಇಂದು ಸಂಜೆಯೊತ್ತಿಗೆ ‘ನಟಸಾರ್ವಭೌಮ’ ಚಿತ್ರದ ಆಡಿಯೋ ಬಿಡುಗಡೆ ಸಂಭ್ರಮದಲ್ಲಿ ತೇಲಾಡಲಿದೆ. ಇದೀಗ, ನಟಸಾರ್ವಭೌಮನ ಆಡಿಯೋ ಸಂಭ್ರಮವನ್ನ ಹೆಚ್ಚಿಸಲು ರಾಕಿಂಗ್ ಸ್ಟಾರ್ ಯಶ್ ಕೂಡ ಹುಬ್ಬಳ್ಳಿ ಕಡೆ ಹೊರಟಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ‘ರಾಜಾಹುಲಿ’ ಮನೆಯಿಂದ ಸೂಟ್ ಕೇಸ್ ಹಿಡಿದು ಹೊರಟ ಐಟಿ ಅಧಿಕಾರಿಗಳು ಇಂದು ಸಂಜೆ 5.30ಕ್ಕೆ ಹುಬ್ಬಳ್ಳಿಯ ನೆಹರು ಸ್ಟೇಡಿಯಂನಲ್ಲಿ ‘ನಟಸಾರ್ವಭೌಮ’ ಆಡಿಯೋ ಬಿಡುಗಡೆಯಾಗುತ್ತಿದ್ದು, ಯಶ್ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಈಗಾಗಲೇ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ಯುವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್, ನಿರ್ದೇಶಕ ಪವನ್ ಒಡೆಯರ್ ಹುಬ್ಬಳ್ಳಿ ತಲುಪಿದ್ದಾರೆ. ಇಷ್ಟು ದಿನ ನಟಸಾರ್ವಭೌಮ ಚಿತ್ರದ ಆಡಿಯೋ ರಿಲೀಸ್ ಶೋಗೆ ಯಾರು ಅತಿಥಿಯಾಗಲಿದ್ದಾರೆ ಎಂಬ ಕುತೂಹಲ ಕಾಡುತ್ತಿತ್ತು. ಇದೀಗ, ಕೆಜಿಎಫ್ ಸ್ಟಾರ್ ಯಶ್ ಭಾಗವಹಿಸುತ್ತಿರುವುದು ದೊಡ್ಮನೆ ಅಭಿಮಾನಿಗಳಿಗೆ ಮತ್ತಷ್ಟು ಜೋಶ್ ಹೆಚ್ಚಿಸಿದೆ. 45 ಗಂಟೆಗಳ ಬಳಿಕ ಪುನೀತ್ ನಿವಾಸದ ಮೇಲಿನ ಐಟಿ ದಾಳಿ ಅಂತ್ಯ.! ಇನ್ನುಳಿದಂತೆ ಪವನ್ ಒಡೆಯರ್ ನಿರ್ದೇಶನದ ಈ ಸಿನಿಮಾದಲ್ಲಿ ಪುನೀತ್, ರಚಿತಾ ರಾಮ್, ಅನುಪಮಾ ಪರಮೇಶ್ವರನ್ ನಟಿಸಿದ್ದಾರೆ. ರಾಕ್ ಲೈನ್ ವೆಂಕಟೇಶ್ ನಿರ್ಮಾಣ ಮಾಡಿದ್ದಾರೆ. ಜನವರಿ ತಿಂಗಳಲ್ಲೇ ಈ ಸಿನಿಮಾ ತೆರೆಕಾಣಲಿದೆ. ಯಶ್ ಪುನೀತ್ ರಾಜ್ ಕುಮಾರ್ ಪಕ್ಷಿನೋಟ ಜೀವನಚರಿತ್ರೆ ಅಭಿಮಾನಿಗಳ ನುಡಿ ಅತ್ಯಾಕರ್ಷಕ ಚಿತ್ರಗಳು ಫೋಟೋ ವೀಡಿಯೊಗಳು ಮುಂಬರುವ ಚಿತ್ರಗಳು ವಾಲ್ಪೇಪರ್ಗಳು ಪಕ್ಷಿನೋಟ ಜೀವನಚರಿತ್ರೆ ಅಭಿಮಾನಿಗಳ ನುಡಿ ಅತ್ಯಾಕರ್ಷಕ ಚಿತ್ರಗಳು ಫೋಟೋ ವೀಡಿಯೊಗಳು ಮುಂಬರುವ ಚಿತ್ರಗಳು ವಾಲ್ಪೇಪರ್ಗಳು

Related posts

ಕನ್ನಡಕ್ಕೆ ಡಬ್ ಆಗ್ತಿದೆ ಪ್ರಿಯಾ ವಾರಿಯರ್ ಸಿನಿಮಾ

Prajanudi Admin

'ನಟಸಾರ್ವಭೌಮ'ನಿಗಾಗಿ ಹುಬ್ಬಳ್ಳಿಗೆ ಹೊರಟ ಯುವರಾಜ-ಒಡೆಯರ್

Prajanudi Admin

'ನಟಸಾರ್ವಭೌಮ'ನಿಗಾಗಿ ಹುಬ್ಬಳ್ಳಿಗೆ ಹೊರಟ ಯುವರಾಜ-ಒಡೆಯರ್

Prajanudi Admin

Leave a Comment