Prajanudi
ನಮ್ಮ ವಿಶೇಷ ವಿಶೇಷ ವರದಿ

ಮೌಂಟ್ ವಿನ್ಸನ್ ಏರಿದ ಮೊದಲ ಅಂಗವಿಕಲ ಮಹಿಳಾ ಪರ್ವತಾರೋಹಿ ಅರುಣಿಮಾ ಸಿನ್ಹಾ!


ಭೂಮಿಯ ದಕ್ಷಿಣದ ಖಂಡ ಅಂಟಾರ್ಕಟಿಕದ ಅತ್ಯಂತ ಎತ್ತರದ ಮೌಂಟ್ ವಿನ್ಸನ್ ಶಿಖರವನ್ನು ಏರುವ ಮೂಲಕ ಅರುಣಿಮಾ ಸಿನ್ಹಾ ಜಾಗತಿಕ ದಾಖಲೆ ನಿರ್ಮಿಸಿದ್ದಾರೆ. ಈ ಮೂಲಕ ಶಿಖರವನ್ನೇರಿದ ಮೊದಲ ಮಹಿಳಾ ವಿಶೇಷಚೇತನ ಎಂಬ ಹೆಗ್ಗಳಿಕೆಗೆ ಅರುಣಿಮಾ ಸಿನ್ಹಾ ಪಾತ್ರರಾಗಿದ್ದಾರೆ. ದೇಶದ ಲಕ್ಷಾಂತರ ಯುವಕ, ಯುವತಿಯರಿಗೆ ಮಾದರಿ ಹಾಗೂ ಸ್ಪೂರ್ತಿಯಾಗಿದ್ದಾರೆ. ಕೃತಕ ಕಾಲನ್ನು ಹೊಂದಿರುವ 30 ವರ್ಷದ ಅರುಣಿಮಾ ಸಿನ್ಹಾ ಈ ಹಿಂದೆ 2013ರಲ್ಲಿ ಮೌಂಟ್ ಎವರೆಸ್ಟ್ ಶಿಖರವನ್ನೇರಿದ್ದರು. ಇವರಿಗೆ 2015ರಲ್ಲಿ ಪದ್ಮಶ್ರೀ ಮತ್ತು ಟೆನ್ಸಿಂಗ್ ನಾರ್ಗೆ ರಾಷ್ಟ್ರೀಯ ಸಾಹಸ ಪ್ರಶಸ್ತಿ ಬಂದಿತ್ತು. ರಾಷ್ಟ್ರೀಯ ಮಟ್ಟದ ವಾಲಿಬಾಲ್ ಆಟಗಾರ್ತಿಯಾಗಿರುವ ಅರುಣಿಮಾ ಏಳೂ ಖಂಡಗಳ ಅತ್ಯಂತ ಎತ್ತರದ ಶಿಖರಗಳನ್ನೆಲ್ಲಾ ಹತ್ತುವ ಗುರಿ ಇಟ್ಟುಕೊಂಡಿದ್ದರು, ಅದೀಗ ಪೂರ್ಣವಾಗಿದೆ.ಉತ್ತರ ಪ್ರದೇಶ ಮೂಲದ ಅರುಣಿಮಾ 2011ರಲ್ಲಿ, ಡಕಾಯಿತರಿಂದ ಚಲಿಸುತ್ತಿರುವ ರೈಲಿನಿಂದ ತಳ್ಳಲ್ಪಟ್ಟು ಅಪಘಾತಕ್ಕೀಡಾಗಿ ತಮ್ಮ ಒಂದು ಕಾಲನ್ನು ಕಳೆದುಕೊಂಡಿದ್ದರು. ಆದರೆ ಅವರ ಛಲ, ಸಾಧನೆ, ಹಠಕ್ಕೆ ನ್ಯೂನತೆ ಎಂದೂ ಅಡ್ಡಿಯಾಗಲಿಲ್ಲ. ತಮ್ಮ ಸಾಧನೆ ಕುರಿತು ಸ್ವತಃ ಅರುಣಿಮಾರೇ ಖುಷಿಯನ್ನು ಟ್ವೀಟ್ ಮೂಲಕ ಹಂಚಿಕೊಂಡಿದ್ದಾರೆ.The wait is overwe are glad to share with youThe World recordWorld’s 1st woman amputee who climbed Mount Vinson (highest peak of Antarctica) has become to the name of our country India🇮🇳Thank’s to all for their blessings and prayJai Hind@PMOIndia @narendramodi @Ra_THORe— Dr. Arunima Sinha (@sinha_arunima) January 3, 2019

ಅರುಣಿಮಾ ಅವರ ಸಾಧನೆಗೆ ದೇಶಾದ್ಯಂತ ಅಭಿನಂದನೆಗಳ ಮಹಾಪೂರವೇ ಹರಿದುಬಂದಿದೆ. ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಅಧ್ಯಕ್ಷ ಅಮಿತ್ ಶಾ ಮೊದಲಾದವರು ಅರುಣಿಮಾರ ಸಾಧನೆ, ಶ್ರದ್ಧೆ, ನಿಷ್ಠೆಯನ್ನು ಕೊಂಡಾಡಿದ್ದಾರೆ.
Excellent! Congratulations to @sinha_arunima for scaling new heights of success. She is the pride of India, who has distinguished herself through her hardwork and perseverance. Wishing her the very best for her future endeavours. https://t.co/Fi8GTQ1QVn— Narendra Modi (@narendramodi) January 4, 2019
Kudos to @sinha_arunima for keeping the Indian flag flying high and becoming world’s first woman amputee to scale Mount Vinson, Antarctica.We salute your dedication and commitment. Entire nation is proud of your accomplishment.— Amit Shah (@AmitShah) January 4, 2019

Related posts

ಉಡುಪಿ: ನಿಜವಾಯ್ತು 'ದೈವ' ನುಡಿ: ಮನೆಯಲ್ಲೇ ಸಿಕ್ಕಿತು 1000 ವರ್ಷದ ಹಳೇ ನಾಗಮೂರ್ತಿ!

Prajanudi Admin

ಮಹಿಳಾ ದಿನಾಚರಣೆ ವಿಶೇಷ: ಯೋಗಿನಿಯ ಸಾಧನೆ, ಯೋಗಪಟುವಿನ 'ಸೌಭಾಗ್ಯ'!

Prajanudi Admin

'ಬಲಭೀಮ'ನಿಗೆ ಜನ್ಮ ನೀಡಿದ ಮೈಸೂರು ಮಹಿಳೆ!

Prajanudi Admin

Leave a Comment