• Home
  • ಅಂಕಣ
  • ವರ್ತಮಾನ! ವಿಶ್ವಾಸಾರ್ಹತೆ ಕಳೆದುಕೊಳ್ಳುತ್ತಿರುವ ಚುನಾವಣಾ ಆಯೋಗ
ಅಂಕಣ

ವರ್ತಮಾನ! ವಿಶ್ವಾಸಾರ್ಹತೆ ಕಳೆದುಕೊಳ್ಳುತ್ತಿರುವ ಚುನಾವಣಾ ಆಯೋಗ

 

ಕು..ಮಧುಸೂದನರಂಗೇನಹಳ್ಳಿ

 

      ಕೇಂದ್ರದ ಇತರೇ ಸ್ವಾಯತ್ತ ಸಂಸ್ಥೆಗಳ ಹಾದಿಯಲ್ಲಿಯೇ ಚುನಾವಣಾ ಆಯೋಗವೂ ಆಳುವ ಪಕ್ಷದ ಕೈಗೊಂಬೆಯಾಗುತ್ತಿದೆಯೇ ಎಂಬ ಅನುಮಾನವೊಂದು ಜನತೆಯಲ್ಲಿ ನಿದಾನವಾಗಿ ಮೊಳಕೆ ಹೊಡೆಯಲು ಪ್ರಾರಂಭವಾಗಿದೆ.ಇದಕ್ಕೆ ಆಯೋಗದ ಅನುಮಾಸ್ಪದವಾದ ಕೆಲವು ನಡವಳಿಕೆಳೇ ಕಾರಣ.

      ಕರ್ನಾಟಕದಲ್ಲಿ ನಡೆದ ವಿಚಿತ್ರ ರಾಜಕೀಯ ಬೆಳವಣಿಗೆಗಳಿಂದಾಗಿ ಹದಿನೇಳು ಶಾಸಕರುಗಳು ವಿದಾನಸಭಾದ್ಯಕ್ಷರಿಂದ ಅನರ್ಹರೆಂದು ಘೋಷಿಸಲ್ಪಟ್ಟರು.ಅದರ ಪರಿಣಾಮವಾಗಿ ಕಾಂಗ್ರೇಸ್ ಮತ್ತು ಜನತಾದಳದ ಮೈತ್ರಿ ಸರಕಾರ ಬಹುಮತ ಕಳೆದುಕೊಂಡು ಬಿಜೆಪಿ ಅಧಿಕಾರಕ್ಕೇರಿತುನಂತರದಲ್ಲಿ ವಿದಾನಸಭೆಯ ಕಾರ್ಯಾಲಯ ಖಾಲಿಯಾದ ಹದಿನೇಳು ಸ್ಥಾನಗಳ ಬಗ್ಗೆ ಅಧಿಕೃತವಾಗಿ ಚುನಾವಣಾ ಆಯೋಗಕ್ಕೆ ಪತ್ರ ಬರೆಯಿತು.ಒಂದು ಶಾಸಕ ಸ್ಥಾನಖಾಲಿಯಾದ ಆರು ತಿಂಗಳುಗಳ ಒಳಗೆಚುನಾವಣೆ ನಡೆಸಬೇಕೆನ್ನುವ ಕಾನೂನಿನ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಹದಿನೈದು ಕ್ಷೇತ್ರಗಳಿಗೆ ಚುನಾವಣೆ ಘೋಷಿಸಿಬಿಟ್ಟಿತು. ಶಾಸಕರ ರಾಜಿನಾಮೆ ಮತ್ತು ಅನರ್ಹತೆಯ ವಿವಾದ ಸುಪ್ರೀಂ ಕೋರ್ಟಿನಲ್ಲಿರುವುದನ್ನು ಅರಿತಿದ್ದರೂ ಹೀಗೆ ಆತುರಾತುರವಾಗಿ ಚುನಾವಣೆ ಘೋಷಿಸಿದ ಆಯೋಗದ ಅವಸರದ ನಡೆಯ ಬಗ್ಗೆಯೇ ಮೊದಲ ಅನುಮಾನ ಶುರುವಾಗುತ್ತದೆ. ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಸರಕಾರವನ್ನು ಉಳಿಸಲೆಂದೇ ಆಯೋಗ ಆತುರದ ಕ್ರಮ ತೆಗೆದುಕೊಂಡಿತೆಂಬುದು ಮೇಲ್ನೋಟಕ್ಕೆ ಗೋಚರವಾಗುತ್ತದೆ.

     ಹೋಗಲಿ ಚುನಾವಣೆಗಳ ಘೋಷಣೆಯಾದ ಮೇಲೂ ಆಯೋಗದ ಇಬ್ಬಂದಿತನದ  ನಡವಳಿಗೆ ಬದಲಾಗಲಿಲ್ಲ.ರಾಜ್ಯದ ಚುನಾವಣಾಧಿಕಾರಿಗಳು ಅನರ್ಹ ಶಾಸಕರುಗಳು ಉಪಚುನಾವಣೆಗಳಲ್ಲಿ ಸ್ಪರ್ದಿಸುವುದಕ್ಕೆ ಅವಕಾಶ ಇಲ್ಲವೆಂದು ಹೇಳಿಕೆ ನೀಡಿದರು.ಆದರೆ ಸರ್ಚೋಚ್ಚ ನ್ಯಾಯಾಲಯದಲ್ಲಿ ಅನರ್ಹ ಶಾಸಕರ ವಿಚಾರಣೆ ಬಂದಾಗ  ಕೇಂದ್ರ ಚುನಾವಣಾ ಆಯೋಗ ಅನವಶ್ಯಕವಾಗಿ ಮೂಗು ತೂರಿಸಿಕೊಂಡು ಹೋಗಿ, ಘೋಷಣೆಯಾದ ಚುನಾವಣೆಗಳನ್ನು  ರದ್ದುಪಡಿಸಲಾಗುವುದಿಲ್ಲ, ಆದರೆ ಅನರ್ಹ ಶಾಸಕರು ಚುನಾವಣೆಯಲ್ಲಿ  ಸ್ಪರ್ದಿಸಲು ತನ್ನ ತಕರಾರೇನಿಲ್ಲವೆಂದು  ಹೇಳಿತು. ಬೆಳವಣಿಗೆಯ ಹಿನ್ನೆಲೆಯಲ್ಲಿ ರಾಜ್ಯ ಚುನಾವಣಾಆಯೋಗ ತಾನುಅನರ್ಹರು  ಸ್ಪರ್ದಿಸುವಂತಿಲ್ಲವೆಂದು ಹೇಳಿಲ್ಲ, ಬದಲಿಗೆ ಎಲ್ಲರಂತೆ ಅವರೂ ನಾಮಪತ್ರ ಸಲ್ಲಿಸಬಹುದು. ಆದರೆ ಅದನ್ನು ಅಂಗೀಕರಿಸುವುದು ಆಯಾ ಕ್ಷೇತ್ರದ ಚುನಾವಣಾದಿಕಾರಿಗಳಿಗೆ ಬಿಟ್ಟಿದ್ದುಎಂದು ಹೇಳಿತು. ರಾಜ್ಯ ಚುನಾವಣಾ ಆಯೋಗ ಹೀಗೆ ಉಲ್ಟಾ ಹೊಡೆದಿದ್ದರ ಹಿಂದೆ ಕೇಂದ್ರ ಸರಕಾರದ ಪ್ರಭಾವ ಇಲ್ಲವೆಂದು ನಂಬುವುದುಕಷ್ಟ.

   ನ್ಯಾಯಾಲಯದ ವಿಚಾರಣೆಯ ಸಂದರ್ಭದಲ್ಲಿ ಸ್ವಯಂಪ್ರೇರಿತವಾಗಿ ಹೇಳಿಕೆ ನೀಡಿದ ಆಯೋಗ, ತಾನು ಚುನಾವಣೆಗಳನ್ನು ತಾತ್ಕಾಲಿಕವಾಗಿ ಮುಂದೂಡುವ ಹೇಳಿಕೆ ನೀಡಿತು. ಇದಾದ ನಂತರ ನ್ಯಾಯಾಲಯ ಅನರ್ಹರ ವಿಚಾರಣೆಯನ್ನು ಅಕ್ಟೋಬರ್ ಮೂರನೇ ವಾರಕ್ಕೆ ಮುಂದೂಡಿತು.ತರುವಾಯ ಚುನಾವಣಾ ಆಯೋಗ ಹದಿನೈದು ಕ್ಷೇತ್ರಗಳ ಉಪಚುನಾವಣೆಗಳನ್ನು ಮುಂದೂಡಿ ಆದೇಶ ಹೊರಡಿಸಿದೆ.ಒಮ್ಮೆ ದಿನಾಂಕ ಪ್ರಕಟಿಸಿಅಧಿಸೂಚನೆ ಹೊರಡಿಸಿದ ನಂತರ ಚುನಾವಣಾ ಪ್ರಕ್ರಿಯೆಗಳನ್ನುರದ್ದು ಮಾಡುವ ಅವಕಾಶ ಕಾನೂನಿನಲ್ಲಿಇಲ್ಲದೇ ಹೋದರು(ಕೆಲವುವಿಶೇಷ ಪ್ರಕರಣಗಳ ಹೊರತಾಗಿ: ಮತಗಟ್ಟೆಯ ವಶ, ಮತಗಟ್ಟೆಯಲ್ಲಿ ಹಿಂಸೆ,ಅಭ್ಯರ್ಥಿಯ ಸಾವು,ಹಣಹಂಚುವಿಕೆ ಮುಂತಾದವುಗಳು ನಡೆದಾಗ ಮಾತ್ರ) ಚುನಾವಣೆಗಳನ್ನು ಮುಂದೂಡಿರುವ ಆಯೋಗದ ಕ್ರಮ ಖಂಡಿತಾ ದುರುದ್ದೇಶಪೂರ್ಣವಾದುದು ಎನ್ನುವುದರಲ್ಲಿ ಅನುಮಾನವಿಲ್ಲ.

    ಜುಲೈ ತಿಂಗಳಲ್ಲಿ ಖಾಲಿಯಾದ ಸ್ಥಾನಗಳನ್ನು ತುಂಬಲು ಡಿಸೆಂಬರ್ ತಿಂಗಳವರೆಗು ಸಮಯಾವಕಾಶವಿದ್ದರೂ ತರಾತುರಿಯಲ್ಲಿ ಚುನಾವಣೆ ಘೋಷಿಸಿದ ಆಯೋಗ ತದನಂತರದಲ್ಲಿ ತನ್ನ ನಿಲುವನ್ನು ಪದೆಪದೆ ಬದಲಾಯಿಸಿ ತನ್ನ  ಪಕ್ಷಪಾತ ನಿಲುವನ್ನುಪ್ರದರ್ಶಿಸಿದೆ. ದಿನೇ ದಿನೇ ತಮ್ಮ ವಿಶ್ವಾಸಾರ್ಹತೆಯನ್ನು ಕಳೆದುಕೊಳ್ಳುತ್ತಿರುವ ಹಲವು ಸ್ವಾಯತ್ತ ಸಂಸ್ಥೆಗಳ ಸಾಲಿಗೆ ಚುನಾವಣಾಆಯೋಗವೂ ಸೇರುತ್ತಿರುವುದು ಪ್ರಜಾಸತ್ತೆಯ ಪಾಲಿಗೆ ಮಾರಕವಂತು ಹೌದು!

Related posts

ಬಸ್ಸಿಗೆ ದಾರಿಬಿಡದೆ ಅಡ್ಡಗಟ್ಟಿ ನಿಂತ ಮಹಿಳೆಗೆ ಮೆಚ್ಚುಗೆ ಮಹಾಪೂರ

Kannadigara Prajanudi

ವಿಶ್ವ ಬಾಹ್ಯಕಾಶ ಸಪ್ತಾಹ -2019

Kannadigara Prajanudi

ಬಸವಣ್ಣನ ಆಲೋಚನೆಗಳನ್ನು ಎದೆಯೊಳಗಿಟ್ಟುಕೊಂಡು ಬದುಕಿನಲ್ಲಿ ಜಾರಿಗೆ ತರಬೇಕು. -ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು

vivaanwebservices@gmail.com

Leave a Comment