• Home
  • Uncategorized
  • ಮಹಾಲಯ ಅಮಾವಾಸ್ಯೆ ದಿನದಂದು ಹುಟ್ಟಿದ ಎಲ್ಲ ಮಕ್ಕಳ ವಿದ್ಯಾಭ್ಯಾಸದ ಖರ್ಚಿನ ಹೊಣೆ ನಮ್ಮದೇ – ಡಾ.ಶಿವಮೂರ್ತಿ ಮುರುಘಾ ಶರಣರು
Uncategorized ಅಂಕಣ

ಮಹಾಲಯ ಅಮಾವಾಸ್ಯೆ ದಿನದಂದು ಹುಟ್ಟಿದ ಎಲ್ಲ ಮಕ್ಕಳ ವಿದ್ಯಾಭ್ಯಾಸದ ಖರ್ಚಿನ ಹೊಣೆ ನಮ್ಮದೇ – ಡಾ.ಶಿವಮೂರ್ತಿ ಮುರುಘಾ ಶರಣರು

ಚಿತ್ರದುರ್ಗ ಸೆ. 28 : ಮಹಾಲಯ ಅಮಾವಾಸ್ಯೆಯ ದಿನವಾದ ಇಂದು ನಗರದ ಜಿಲ್ಲಾ ಆಸ್ಪತ್ರೆಯಲ್ಲಿ ಹುಟ್ಟಿದ ಎಲ್ಲ ಮಕ್ಕಳಿಗೆ ಸಂಪೂರ್ಣ ವಿದ್ಯಾಭ್ಯಾಸದ ಖರ್ಚಿನ ಹೊಣೆ ನಮ್ಮದೇ ಎಂದು ಡಾ. ಶಿವಮೂರ್ತಿ ಮುರುಘಾ ಶರಣರು ಹೇಳಿದರು.

ಮಹಾಲಯ ಆಮಾವಾಸ್ಯೆಯ ಈ ದಿನ ಹುಟ್ಟಿದ ಎಲ್ಲಾ ಮಕ್ಕಳನ್ನು ಆಶೀರ್ವದಿಸಿ, ತಾಯಂದಿರಿಗೆ ಬ್ರೆಡ್, ಬಿಸ್ಕತ್, ಹಣ್ಣು ಹಾಗು ಒಳಲೆ (ಹಾಲುಣಿಸುವ ಸಾಮಗ್ರಿ)ಗಳನ್ನು ಉಡುಗೊರೆಯಾಗಿ ನೀಡಿ ಶ್ರೀಗಳು ಮಾಧ್ಯಮದವರೊಂದಿಗೆ ಮಾತನಾಡಿದರು.

ಅಮಾವಾಸ್ಯೆ ಮತ್ತು ಹುಣ್ಣಿಮೆ ಈ ಎರಡೂ ನಿಸರ್ಗದ ಪ್ರಕ್ರಿಯೆಗಳು. ಅಮಾವಾಸ್ಯೆಯನ್ನು ಅಮಂಗಲ, ಹುಣ್ಣಿಮೆಯನ್ನು ಮಂಗಳ ಎಂದು ಬಹುತೇಕ ಜನ ತಪ್ಪಾಗಿ ಭಾವಿಸಿದ್ದಾರೆ. ಅಮಾವಾಸ್ಯೆಯ ದಿನ ಯಾವುದೇ ಕಾರ್ಯಗಳನ್ನು ಮಾಡದೆ ಮೂಢನಂಬಿಕೆಯ ನಿರ್ಬಂಧವನ್ನು ಹಾಕಿಕೊಳ್ಳುತ್ತಾರೆ. ಹೀಗಿರುವಾಗ, ಏನೂ ಅರಿಯದೆ ಇಂದು ಹುಟ್ಟಿರುವ ಮಕ್ಕಳಿಗೆ ಆ ಮೂಢನಂಬಿಕೆ, ಮೌಢ್ಯಗಳ ವಿಚಾರಗಳು ತಾಕದಿರಲಿ ಎಂದು ಈ ದಿನ ಇಲ್ಲಿ ಜನಿಸಿರುವ 5 ಗಂಡುಮಕ್ಕಳಿಗೆ  4 ಹೆಣ್ಣುಮಕ್ಕಳಿಗೆ ಆಶೀರ್ವದಿಸಿ. ಆ ಮಕ್ಕಳ ಶಿಕ್ಷಣದ ಖರ್ಚನ್ನು  ಬರಿಸಲಿದ್ದೇವೆ ಎಂದು ಶರಣರು ನುಡಿದರು.

ಈ ಸಂದರ್ಭದಲ್ಲಿ ಡಿ.ಹೆಚ್.ಓ. ಪಾಲಾಕ್ಷಪ್ಪ, ಜಿಲ್ಲಾ ಸರ್ಜನ್ ಬಸವರಾಜು, ಡಾ|| ರವಿ ಹಾಗೂ ಸಿಬ್ಬಂದಿ, ಬಸವೇಶ್ವರ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಪ್ರಾಂಶುಪಾಲರಾದ ಡಾ|| ಪ್ರಶಾಂತ್, ಜಿ.ಪಂ. ಮಾಜಿ ಅಧ್ಯಕ್ಷ ಮೀಸೆ ಮಹಲಿಂಗಪ್ಪ, ಎಸ್.ಜೆ.ಎಂ. ವಿದ್ಯಾಪೀಠದ ಕಾರ್ಯದರ್ಶಿ ಎ.ಜೆ. ಪರಮಶಿವಯ್ಯ, ಕಾರ್ಯನಿರ್ವಹಣಾಧಿಕಾರಿ ಎಂ.ಜಿ.ದೊರೆಸ್ವಾಮಿ, ಪೈಲ್ವಾನ್ ತಿಪ್ಪೇಸ್ವಾಮಿ, ಶ್ರೀಮತಿ ರೀನಾ ವೀರಭದ್ರಪ್ಪ ಮುಂತಾದವರಿದ್ದರು.

 

 

Related posts

ವರ್ತಮಾನ! ವಿಶ್ವಾಸಾರ್ಹತೆ ಕಳೆದುಕೊಳ್ಳುತ್ತಿರುವ ಚುನಾವಣಾ ಆಯೋಗ

Kannadigara Prajanudi

ಶ್ರೀ ಕ್ಷೇತ್ರ ಆದಿಚುಂಚನಗಿರಿಯಲ್ಲಿ 41ನೇ ರಾಜ್ಯಮಟ್ಟದ ಶ್ರೀ ಕಾಲಭೈರವಶ್ವರ ಜಾನಪದ ಕಲಾಮೇಳ

Kannadigara Prajanudi

ಅನಾರೋಗ್ಯದಿಂದ ಸತ್ತ ಸಿಎಂ ಸಾಕು ನಾಯಿ, ವೈದ್ಯಕೀಯ ನಿರ್ಲಕ್ಷ್ಯ ತೋರಿದ್ದಕ್ಕೆ ಪಶುವೈದ್ಯರಿಗೆ ಜೈಲು!

Kannadigara Prajanudi

Leave a Comment