ದೇಶ ಮುಖ್ಯಾಂಶಗಳು

ತಂಬಾಕು ಸೇವನೆ ಬಿಟ್ಟುಬಿಡಿ; ಮನ್ ಕಿ ಬಾತ್’ ನಲ್ಲಿ ಮೋದಿ ಸಲಹೆ

ನವದೆಹಲಿ: ಆರೋಗ್ಯ ಪೂರ್ಣ ಭಾರತ ನಿರ್ಮಿಸುವಂತೆ ದೇಶದ ಜನತೆಗೆ ಮನವಿ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ಪ್ರತಿಯೊಬ್ಬರು ತಂಬಾಕು ಹಾಗೂ ಇ-ಸಿಗರೇಟ್ ಸೇರಿದಂತೆ ಹಾನಿಕಾರ ಚಟಗಳಿಂದ ಮುಕ್ತಿ ಹೊಂದುವಂತೆ ಮನವಿ ಮಾಡಿದ್ದಾರೆ.
ಭಾನುವಾರ  ಮನ್ ಕಿ ಬಾತ್ ರೇಡಿಯೋ ಕಾರ್ಯಕ್ರಮದಲ್ಲಿ ಮಾತನಾಡಿದ ಮೋದಿ, ಪ್ರತಿಯೊಬ್ಬರು ತಂಬಾಕು ವ್ಯಸನದಿಂದ ದೂರಾಗಬೇಕು ಮತ್ತು ಇ-ಸಿಗರೇಟ್ ಕುರಿತ ತಪ್ಪು ವದಂತಿಗಳಿಗೆ ಮರುಳಾಗಬಾರದು. ಬನ್ನಿ, ಎಲ್ಲರೂ ಒಟ್ಟಾಗಿ ಆರೋಗ್ಯಪೂರ್ಣ ಭಾರತ ನಿರ್ಮಿಸೋಣ ಎಂದು ಕರೆ ನೀಡಿದರು.

ಜನರಲ್ಲಿ ಇ-ಸಿಗರೇಟ್ ಕುರಿತು ತೀರಾ ಕಡಿಮೆ ಜಾಗೃತಿ ಮೂಡಿಸಲಾಗಿದೆ. ಅದು ಅಪಾಯಕಾರಿ ಎಂಬುದು ಬಹುತೇಕರಿಗೆ ತಿಳಿದಿಲ್ಲ. ಕೆಲವೊಮ್ಮೆ ಕುತೂಹಲದ ಕಾರಣದಿಂದ ಇ-ಸಿಗರೇಟ್ ಗಳನ್ನು ಬಳಕೆ ಮಾಡಲಾಗುತ್ತದೆ ಎಂದರು.
ಇತ್ತೀಚೆಗೆ ಸರ್ಕಾರ ದೇಶಾದ್ಯಂತ ಎಲ್ಲಾ ವಿಧದ ಇ-ಸಿಗರೇಟ್ ಗಳನ್ನು ನಿಷೇಧಿಸಿದೆ.

ಪ್ರತಿಯೊಬ್ಬರಿಗೂ ತಂಬಾಕುವಿನಲ್ಲಿನ ನಿಕೋಟಿನ್ ನಿಂದ ಮತ್ತು ಬರುತ್ತದೆ ಎಂಬುದು ಪ್ರತಿಯೊಬ್ಬರಿಗೂ ತಿಳಿದಿದೆ. ಅಪ್ರಾಪ್ತ ವಯಸ್ಸಿನಲ್ಲಿ ಇದರ ಸೇವನೆಯಿಂದ ಮೆದುಳಿನ ಬೆಳವಣಿಗೆಗೆ ಹಾನಿಯಾಗುತ್ತದೆ ಎಂದರು.

ತಂಬಾಕು ಚಟ ತುಂಬಾ ಅಪಾಯಕಾರಿಯಾಗಿದ್ದು,ಅದರಿಂದ ಮುಕ್ತಿ ಹೊಂದುವುದು ತುಂಬಾ ಕಷ್ಟ. ತಂಬಾಕು ಸೇವಿಸುವ ಜನರು ಕ್ಯಾನ್ಸರ್, ಮಧುಮೇಹ ಮತ್ತು ರಕ್ತದೊತ್ತಡದಂತಹ ಅಪಾಯಕಾರಿ ರೋಗಗಳಿಗೆ ಹೆಚ್ಚಾಗಿ ತುತ್ತಾಗುತ್ತಾರೆ ಎಂದರು.
ದೇಶದ ಜನರಿಗೆ ನವರಾತ್ರಿ ಹಬ್ಬದ ಶುಭಾಶಯ ಕೋರಿದ ಮೋದಿ, ಈ ವರ್ಷ   ನಾರಿ ಶಕ್ತಿ  ಯನ್ನು ಸಂಭ್ರಮದಿಂದ ಆಚರಿಸುವಂತೆ ಸಲಹೆ ನೀಡಿದರು.

Related posts

ಅನರ್ಹರಿಗಾಗಿ ಮೀಸಲಿಟ್ಟಿದ್ದ ಖಾತೆಗಳನ್ನು ಸಚಿವರಿಗೆ ಮರು ಹಂಚಿಕೆ ಮಾಡಿದ ಸಿಎಂ ಬಿಎಸ್ ವೈ

Kannadigara Prajanudi

ಭಾರತದ ರಸ್ತೆಗೂ ಬಂತು ಬ್ಯಾಟರಿ ಚಾಲಿತ ಲಾರಿ

Kannadigara Prajanudi

ಕಾರ್ಪೋರೆಟ್‌ ತೆರಿಗೆ ಕಡಿತ : ಸ್ಥಳೀಯ ಮಟ್ಟದ ಉತ್ಪಾದನ ಘಟಕಗಳಿಗೆ ಸಹಕಾರಿ

Kannadigara Prajanudi

Leave a Comment