Prajanudi
ದೇಶ ನ್ಯೂಸ್

ಗೂಗಲ್'ನಲ್ಲಿರುವ ಸೂಕ್ಷ್ಮ ಮಾಹಿತಿ ರಕ್ಷಣೆಗೆ ಶೀಘ್ರದಲ್ಲೇ ಕಾನೂನು ಜಾರಿ: ರವಿ ಶಂಕರ್ ಪ್ರಸಾದ್


ಜಲಂಧರ್: ಗೂಗಲ್ ನಲ್ಲಿರುವ ಜನರ ವೈಯಕ್ತಿಕ ಹಾಗೂ ವೃತ್ತಿಪರ ಮಾಹಿತಿಗಳನ್ನು ರಕ್ಷಣೆ ಮಾಡಲು ಶೀಘ್ರದಲ್ಲಿಯೇ ಕಾನೂನು ಜಾರಿಗೆ ತರಲಾಗುತ್ತದೆ ಎಂದು ಕೇಂದ್ರ ಕಾನೂನು ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್ ಅವರು ಭಾನುವಾರ ಹೇಳಿದ್ದಾರೆ. ಜಲಂಧರ್ ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಅವರು, ಭಾರತದಲ್ಲಿರುವ ಜನರ ವೈಯಕ್ತಿಕ ಹಾಗೂ ವೃತ್ತಿಪರ ಮಾಹಿತಿಗಳನ್ನು ರಕ್ಷಣೆ ಮಾಡಲು ಕಾನೂನು ಜಾರಿಗೆ ತರಲು ಚಿಂತನೆಗಳನ್ನು ನಡೆಸಲಾಗುತ್ತಿದೆ. ಯಾರಾದರೂ ಕಾನೂನಿಗೆ ವಿರುದ್ಧವಾಗಿ ನಡೆದರೆ, ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ. ಭಾರತ ಇದೀಗ ತಂತ್ರಜ್ಞಾನ ವಹಿವಾಟುಗಳಿಗೆ ಮರನೇ ಆಕರ್ಷಿತ ಹೂಡಿಕೆಯ ದೇಶವಾಗಿದೆ. ಭಾರತದಲ್ಲಿ ವಿಜ್ಞಾನ ನಡೆಸಲು ಇದು ಅತ್ಯುತ್ತಮ ಸಮಯವಾಗಿದೆ ಎಂದು ತಿಳಿಸಿದ್ದಾರೆ. 

Related posts

'ಮೋಸ್ಟ್ ನಟೋರಿಯಸ್'; ಕೊನೆಗೂ ಮುಂಬೈ ಉಗ್ರ ದಾಳಿಯನ್ನು ಖಂಡಿಸಿದ ಚೀನಾ

Prajanudi Admin

ಧಾರವಾಡ: ನಾಡೋಜ 'ಪಾಪು'ಗೆ 100ರ ಸಂಭ್ರಮ, ಶತಮಾನೋತ್ಸವ ಮೆರವಣಿಗೆ

Prajanudi Admin

ಸಿದ್ದಗಂಗಾ ಶ್ರೀಗಳ ಆರೋಗ್ಯದಲ್ಲಿ ಮತ್ತೆ ಏರುಪೇರು, ಮಠದತ್ತ ದೌಡಾಯಿಸುತ್ತಿರುವ ಗಣ್ಯರು

Prajanudi Admin

Leave a Comment