Prajanudi
ದೇಶ ನ್ಯೂಸ್

ಸಹೋದ್ಯೋಗಿಗಳ ಮೇಲೆ ಗುಂಡು ಹಾರಿಸಿ, ಆತ್ಮಹತ್ಯೆಗೆ ಶರಣಾದ ಸಿಆರ್ ಪಿಎಫ್ ಯೋಧ


ಶ್ರೀನಗರ:  ಕಣಿವೆ ರಾಜ್ಯ ಜಮ್ಮು-ಕಾಶ್ಮೀರದ ಶ್ರೀನಗರದಲ್ಲಿನ ಸೇನಾ ಶಿಬಿರದ ಒಳಗಡೆ ಸಿಆರ್ ಪಿಎಫ್
ಯೋಧರೊಬ್ಬರು ಇಬ್ಬರು ಸಹೋದ್ಯೋಗಿಗಳ ಮೇಲೆ ಗುಂಡು ಹಾರಿಸಿ ಬಳಿಕ ತನ್ನ ಸರ್ವಿಸ್ ರೈಪಲ್
ನಿಂದ ಗುಂಡು ಹೊಡೆದುಕೊಂಡು ಮೃತಪಟ್ಟಿದ್ದಾರೆ.ಶನಿವಾರ ತಡರಾತ್ರಿ ಈ ದುರ್ಘಟನೆ ನಡೆದಿದ್ದು,  ಮುಕೇಶ್ ಬಾವುಕ್ ಎಂಬ ಯೋಧ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು  ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.ಪಂತಾ ಚೌಕ್ ಸೇನಾ ಶಿಬಿರದಲ್ಲಿದ್ದ ಸಿಆರ್ ಪಿಎಫ್ ನ 29  ಬೆಟಲಿಯಾನ್ ನ ಮುಕೇಶ್ ಬಾವುಕ್ ಕೆಲ ವಿಚಾರಗಳಿಂದಾಗಿ  ತನ್ನಿಬ್ಬರು ಸಹೋದ್ಯೋಗಿಗಳ ಮೇಲೆ ಗುಂಡು ಹಾರಿಸಿದ್ದಾರೆ. ಬಳಿಕ ತಮ್ಮ ಸರ್ವಿಸ್ ರೈಪಲ್ ನಿಂದ ಗುಂಡು ಹಾರಿಸಿಕೊಂಡು ಮೃತಪಟ್ಟಿದ್ದಾರೆ ಎಂದು ಅವರು ಹೇಳಿದ್ದಾರೆ.ಗುಂಡಿನ ದಾಳಿಯಿಂದಾಗಿ ಗಾಯಗೊಂಡಿದ್ದ ಇಬ್ಬರು ಯೋಧರ ಆರೋಗ್ಯ ಪರಿಸ್ಥಿತಿ ಸ್ಥಿರವಾಗಿದೆ. ಈ ಘಟನೆ ಕಾರಣ ಏನು ಎಂಬುದನ್ನು ಪತ್ತೆ ಹಚ್ಚುವ ಸಲುವಾಗಿ ಇಲಾಖಾ ತನಿಖೆಗೆ ಆದೇಶಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

Related posts

ಕೇರಳ: ಗೆಳತಿಯನ್ನು ಮದುವೆಯಾಗಲು ಲಿಂಗಪರಿವರ್ತನೆ ಮಾಡಿಸಿಕೊಂಡ ಯುವತಿ!

Prajanudi Admin

ಕಾರ್ಯವಾಸಿ ಕತ್ತೆ ಕಾಲು..!; ಆರ್ಥಿಕ ಸಂಕಷ್ಟದಿಂದ ಪಾರಾಗಲು 'ಕತ್ತೆ' ಮೊರೆ ಹೋದ ಪಾಕಿಸ್ತಾನ!

Prajanudi Admin

ಗಡಿ ಗೋಡೆ ನಿರ್ಮಿಸಲು ರಾಷ್ಟ್ರೀಯ ತುರ್ತನ್ನು ಘೋಷಿಸಿದ ಡೊನಾಲ್ಡ್ ಟ್ರಂಪ್

Prajanudi Admin

Leave a Comment