Prajanudi
ದೇಶ ನ್ಯೂಸ್

ಸಂಸತ್ತಿನಲ್ಲಿ 2 ಗಂಟೆಗಳ ಕಾಲ ಮಾತನಾಡಿದ ರಕ್ಷಣಾ ಸಚಿವರು ನನ್ನ 2 ಸರಳ ಪ್ರಶ್ನೆಗೆ ಉತ್ತರಿಸಲಿಲ್ಲ: ರಾಹುಲ್


ನವದೆಹಲಿ: ಸಂಸತ್ತಿನಲ್ಲಿ 2 ಗಂಟೆಗಳ ಕಾಲ ಮಾತನಾಡಿದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು, ನಾನು ಕೇಳಿದ್ದ 2 ಸರಳ ಪ್ರಶ್ನೆಗಳಿಗೆ ಉತ್ತರ ನೀಡಲೇ ಇಲ್ಲ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ಶನಿವಾರ ಹೇಳಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ, ರಫೇಲ್ ಒಪ್ಪಂದ ಕುರಿತು ರಕ್ಷಣಾ ಸಚಿವರು ಸ್ಪಷ್ಟನೆ ನೀಡಿದ್ದರು. ಆದರೆ, ಇಡೀ ದೇಶದ ಜನರು ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಕೇಳುತ್ತಿರುವ 2 ಸರಳ ಪ್ರಶ್ನೆಗಳಿಗೆ ಮಾತ್ರ ಅವರು ಉತ್ತರಿಸಲೇ ಇಲ್ಲ ಎಂದು ಕಾಲೆಳೆದಿದ್ದಾರೆ.
RM spoke for 2 hrs. in Parliament, but she couldn’t answer the 2 simple questions I asked her. Watch & SHARE this video. Let every Indian ask the PM & his Ministers these questions.#2SawalDoJawab pic.twitter.com/YR8zuyO6Al— Rahul Gandhi (@RahulGandhi) January 5, 2019ರಕ್ಷಣಾ ಸಚಿವರು ಮಾತನಾಡುತ್ತಿರುವ ವಿಡಿಯೋವನ್ನು ಪೋಸ್ಟ್ ಮಾಡಿರುವ ರಾಹುಲ್ ಗಾಂಧಿಯವರು, 2 ಗಂಟೆಗಳ ಕಾಲ ರಕ್ಷಣಾ ಸಚಿವರು ಸದನದಲ್ಲಿ ಮಾತನಾಡಿದರು. ಆದರೆ, ನಾನು ಕೇಳಿದ್ದ 2 ಸರಳ ಪ್ರಶ್ನೆಗೆ ಉತ್ತರಿಸಲೇ ಇಲ್ಲ. ಈ ವಿಡಿಯೋವನ್ನು ನೋಡಿ, ಶೇರ್ ಮಾಡಿ. ಪ್ರತೀಯೊಬ್ಬ ಭಾರತೀಯನೂ ಪ್ರಧಾನಿ ಹಾಗೂ ಅವರ ಸಚಿವರನ್ನು ರಫೇಲ್ ಕುರಿತು ಪ್ರಶ್ನೆಗಳನ್ನು ಕೇಳುವಂತಾಗಲಿ ಎಂದು ತಿಳಿಸಿದ್ದಾರೆ. Related posts

ಇಂಡೋನೇಷಿಯಾ: ಭೀಕರ ಸುನಾಮಿಯ ಅಟ್ಟಹಾಸ, ಸಾವಿನ ಸಂಖ್ಯೆ 373ಕ್ಕೆ ಏರಿಕೆ

Prajanudi Admin

ಕಾಂಗ್ರೆಸ್ ಇಟಲಿ ಮಹಿಳೆ ಬಗ್ಗೆ ಚಿಂತಿಸುತ್ತದೆಯೇ ವಿನಾಃ ಭಾರತದ ಮುಸ್ಲಿಮ್ ಮಹಿಳೆಯರ ಬಗೆಗಲ್ಲ: ಸ್ವಾಮಿ

Prajanudi Admin

ಭಾರತದ ಕೋರಿಕೆ ಮೇರೆಗೆ ಲಂಡನ್‍ನಲ್ಲಿ ನೀರವ್ ಮೋದಿ ಬಂಧನ!

Prajanudi Admin

Leave a Comment