• Home
  • ಮುಖ್ಯಾಂಶಗಳು
  • ದಿನೇಶ್‌ ನೆಟ್ಟಗಿದ್ದರೆ ಸರಕಾರ ಪತನವಾಗುತ್ತಿರಲಿಲ್ಲ: ಬಿ.ಸಿ. ಪಾಟೀಲ್‌ ವಾಗ್ದಾಳಿ
ಮುಖ್ಯಾಂಶಗಳು ರಾಜಕೀಯ

ದಿನೇಶ್‌ ನೆಟ್ಟಗಿದ್ದರೆ ಸರಕಾರ ಪತನವಾಗುತ್ತಿರಲಿಲ್ಲ: ಬಿ.ಸಿ. ಪಾಟೀಲ್‌ ವಾಗ್ದಾಳಿ

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ನೆಟ್ಟಗೆ ಇದ್ದಿದ್ದರೆ ಜೆಡಿಎಸ್‌-ಕಾಂಗ್ರೆಸ್‌ ಸಮ್ಮಿಶ್ರ ಸರಕಾರ ಪತನಗೊಳ್ಳುತ್ತಿರಲಿಲ್ಲ ಎಂದು ಅನರ್ಹ ಶಾಸಕ ಬಿಸಿ ಪಾಟೀಲ್‌ ಅವರು ತೀವ್ರ ವಾಗ್ದಾಳಿ ನಡೆಸಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು,”ಕಾಂಗ್ರೆಸ್‌ ಪಕ್ಷದಿಂದ ನಾನು ಹೊರ ಬಂದಿದ್ದೇನೆ. ಈಗ ಆ ವಿಚಾರ ಮಾತನಾಡುವುದು ಸರಿಯಲ್ಲ. ಆದರೆ ನಮ್ಮ ಸ್ನೇಹಿತ ಎಸ್‌.ಟಿ. ಸೋಮಶೇಖರ್‌ ದಿನೇಶ್‌ ಕುರಿತು ನೀಡಿರುವ ಹೇಳಿಕೆ ಸರಿಯಾಗಿದೆ. ಅಧ್ಯಕ್ಷರು ಸರಿಯಾಗಿದ್ದರೆ ನಾವು ಪಕ್ಷ ತ್ಯಜಿಸುವ ಪರಿಸ್ಥಿತಿಯೇ ಬರುತ್ತಿರಲಿಲ್ಲ,” ಎಂದು ಹೇಳಿದರು.

”ದಿನೇಶ್‌ ಬರುವ ಮುನ್ನ 9 ಸಂಸದರಿದ್ದರು, ಈಗ ಒಬ್ಬರು ಸಂಸದರಿದ್ದಾರೆ. ಅಧ್ಯಕ್ಷರಾದವರು ಒಂದೇ ಕಡೆ ವಾಲಬಾರದು. ಒಬ್ಬರಿಗೊಂದು ಮತ್ತೊಬ್ಬರಿಗೊಂದು ಮಾಡಬಾರದು,” ಎಂದು ಎಚ್ಚರಿಸಿದರು.”ಸುಪ್ರೀಂಕೋರ್ಟ್‌ನಲ್ಲಿ ನಮ್ಮ ಪರ ತೀರ್ಪು ಹೊರಬೀಳುವ ವಿಶ್ವಾಸದಲ್ಲಿದ್ದು ಆ ನಂತರ ಬಿಜೆಪಿ ಸೇರುವ ಬಗ್ಗೆ ನಾವೆಲ್ಲಾಒಟ್ಟಿಗೆ ಕುಳಿತು ಚರ್ಚಿಸುತ್ತೇವೆ. ಬಿಜೆಪಿ ಸೇರುವ ಬಗ್ಗೆ ಇನ್ನೂ ಯಾವುದೇ ತೀರ್ಮಾನ ಆಗಿಲ್ಲ. ಯು.ಬಿ.ಬಣಕಾರ್‌ ಸ್ಪರ್ಧೆ ಮಾಡುವ ಪರಿಸ್ಥಿತಿ ಈ ಸಲ ಉದ್ಭವಿಸಲ್ಲ. ಎಲ್ಲವೂ ಸರಿ ಹೋಗಲಿದೆ,” ಎಂದು ಬಿ.ಸಿ. ಪಾಟೀಲ್‌ ವಿಶ್ವಾಸ ವ್ಯಕ್ತಪಡಿಸಿದರು.

Related posts

ಉಪಚುನಾವಣೆ ಬಳಿಕ ಬಿಜೆಪಿ ಸರ್ಕಾರ ಪತನವಾಗಲಿದೆ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭವಿಷ್ಯ

Kannadigara Prajanudi

ಯೂಟೂಬ್​, ಮ್ಯಾಪ್​ಗಳ ಪ್ರವೈಸಿ ಟೂಲ್​ ಮೇಲ್ದರ್ಜೆಗೇರಿಸಿದೆ ಗೂಗಲ್​

Kannadigara Prajanudi

ಐಪಿಎಸ್‌ ಅಧಿಕಾರಿ ಅಲೋಕ್ ಕುಮಾರ್ ನಿವಾಸದ ಮೇಲೆ ದಾಳಿ

Kannadigara Prajanudi

Leave a Comment