Prajanudi
ಕ್ರೀಡೆ

ಪಾಕ್ ಆಯ್ತು, ಈಗ ಆಸೀಸ್‌ನಲ್ಲೂ ಬುಮ್ರಾ ಹವಾ, ಬಾಲಕನ ಬೌಲಿಂಗ್ ವಿಡಿಯೋ ವೈರಲ್!


ಸಿಡ್ನಿ: ಟೀಂ ಇಂಡಿಯಾದ ವೇಗಿ ಜಸ್ ಪ್ರೀತ್ ಬುಮ್ರಾ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದು ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ 12 ತಿಂಗಳಲ್ಲೇ ಕಮಾಲ್ ಮಾಡಿದ್ದಾರೆ. ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ 21 ವಿಕೆಟ್ ಪಡೆಯುವ ಮೂಲಕ ಆಸ್ಟ್ರೇಲಿಯಾದ ನಾಥನ್ ಲಿಯಾನ್ ಜತೆ ಅತಿ ಹೆಚ್ಚು ವಿಕೆಟ್ ಪಡೆದ ಕೀರ್ತಿಯನ್ನು ಹಂಚಿಕೊಂಡಿದ್ದರು. ಇನ್ನು ಬುಮ್ರಾ ಅವರನ್ನು ಆಸ್ಟ್ರೇಲಿಯನ್ ಮಕ್ಕಳು ಅನುಕರಣೆ ಮಾಡುತ್ತಿದ್ದಾರೆ. ಹೌದು, ಬಾಲಕನೊಬ್ಬ ಬುಮ್ರಾ ಸ್ಟೈಲ್ ನಲ್ಲಿ ಬೌಲಿಂಗ್ ಮಾಡುವ ಪ್ರಯತ್ನ ಮಾಡಿದೆ. ತನ್ನ ಯತ್ನದಲ್ಲಿ ಮಗು ಫೆಲ್ಯೂವರ್ ಆದರೂ ಭಾರೀ ಗಮನ ಸೆಳೆದಿದೆ. ಈ ಮಗುವಿನ ಬೌಲಿಂಗ್ ವಿಡಿಯೋವನ್ನು ಬುಮ್ರಾ ಹಾಗೂ ಹರ್ಷ ಬೋಗ್ಲೆ ತಮ್ಮ ಟ್ವೀಟರ್ ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.@bhogleharsha @Jaspritbumrah93 The only problem from your great series win may be the next generation of Aussie cricketers you have inspired! 👏💪👊 pic.twitter.com/dmZNClOcBx— Michael Curtin (@c_u_r_t_o) January 9, 2019Related posts

ಮತ್ತೆ ನೆನಪಾದ ಫಿಲಿಪ್ ಹ್ಯೂಸ್; ಆಸಿಸ್ ವೇಗಿ ಬೌನ್ಸರ್ ಗೆ ಆಸ್ಪತ್ರೆ ಪಾಲಾದ ಲಂಕಾ ಬ್ಯಾಟ್ಸಮನ್

Prajanudi Admin

'ಕಾಫಿ' ತಂದ ಆಪತ್ತು: ಕೆಎಲ್ ರಾಹುಲ್, ಹಾರ್ದಿಕ್ ಪಾಂಡ್ಯಗೆ ಬಿಸಿಸಿಐ ಶೋಕಾಸ್ ನೋಟಿಸ್

Prajanudi Admin

ಕಾಫಿ ವಿತ್ ಕರಣ್ ವಿವಾದ: ಮುಂಬೈ ಖಾರ್ ಜಿಮ್ ಖಾನಾ ಸದಸ್ಯತ್ವದಿಂದ ಹಾರ್ದಿಕ್ ಪಾಂಡ್ಯ ಔಟ್!

Prajanudi Admin

Leave a Comment