Prajanudi
ನ್ಯೂಸ್ ವಿದೇಶ

ಭಾರತದಷ್ಟು ವಿಶಾಲ ಪ್ರದೇಶದ ಮೇಲೆ ನಿಗಾವಹಿಸಲಿದೆ ಚೀನಾದ ಹೊಸ ರೇಡಾರ್


ಬೀಜಿಂಗ್: ಚೀನಾ ಹೊಸದಾಗಿ ಅಭಿವೃದ್ಧಿಪಡಿಸಿರುವ ಅತ್ಯಾಧುನಿಕ ಕಡಲ ರೇಡಾರ್ ಭಾರತದಷ್ಟು ವಿಶಾಲ ಪ್ರದೇಶದ ಮೇಲೆ ನಿಗಾವಹಿಸುವ ಸಾಮರ್ಥ್ಯ ಹೊಂದಿದೆ ಎಂದು ಬುಧವಾರ ಮಾಧ್ಯಮಗಳು ವರದಿ ಮಾಡಿವೆ.ಚೀನಾ ದೇಶಿಯವಾಗಿ ಅಭಿವೃದ್ಧಿಪಡಿಸಿರುವ ಈ ಹೊಸ ರೇಡಾರ್ ವ್ಯವಸ್ಥೆಯನ್ನು ಅಲ್ಲಿನ ನೌಕಾಪಡೆ ಸಂಪೂರ್ಣ ಮೇಲ್ವಿಚಾರಣೆ ನಡೆಸಲಿದೆ. ಸದ್ಯ ಅಸ್ತಿತ್ವದಲ್ಲಿರುವ ತಂತ್ರಜ್ಞಾನಕ್ಕಿಂತ ಅತಿ ವೇಗದಲ್ಲಿ ಶತ್ರುಗಳ ಹಡಗು, ವಿಮಾನ ಮತ್ತು ಕ್ಷಿಪಣಿಗಳಿಂದ ಎದುರಾಗುವ ಅಪಾಯಗಳನ್ನು ಪತ್ತೆ ಹಚ್ಚಲು ಇದು ನೆರವಾಗಲಿದೆ.ಈ ರೇಡಾರ್ ಚೀನಾದ ಸಂಪೂರ್ಣ ಸಮುದ್ರ ಪ್ರದೇಶಗಳ ಮೇಲೆ ನಿಗಾವಹಿಸಲಿದೆ ಎಂದು ಸೌಥ್ ಚೀನಾ ಮಾರ್ನಿಂಗ್ ಪೋಸ್ಟ್ ವರದಿ ಮಾಡಿದೆ.ಚೀನಾ ವಿಜ್ಞಾನ ಅಕಾಡೆಮಿ(ಸಿಎಎಸ್) ಮತ್ತು ಚೀನಾ ಎಂಜಿನಿಯರಿಂಗ್ ಅಕಾಡೆಮಿ(ಸಿಎಇ) ಈ ತಂತ್ರಜ್ಞಾನ ಅಭಿವೃದ್ಧಿ ಪಡಿಸಿದ್ದು, ಈ ಸಾಧನೆಗಾಗಿ ಸಿಎಎಸ್ ನ ಶಿಕ್ಷಣ ತಕ್ಷ ಲಿಯು ಯಂಗ್ಟನ್ ಮತ್ತು ಸೇನೆಯ ವಿಜ್ಞಾನಿ ಕಿಯಾನ್ ಕಿಹು ಅವರಿಗೆ 1.116 ಡಾಲರ್(786.75 ಕೋಟಿ ರು.) ಮೊತ್ತದ ದೇಶದ ಅತ್ಯುತ್ತಮ ವಿಜ್ಞಾನ ಪ್ರಶಸ್ತಿಯನ್ನು ನೀಡಲಾಗಿದೆ.

Related posts

ಹೀಗಿದೆ ನೋಡಿ ತ್ರಿವಿಧ ದಾಸೋಹಿಯ ಕಾರ್ಯಕ್ಷೇತ್ರ ಸಿದ್ದಗಂಗಾ ಮಠದ ಸುವರ್ಣ ಪರಂಪರೆ

Prajanudi Admin

ಜಮ್ಮು-ಕಾಶ್ಮೀರದೊಳಗೆ ನುಗ್ಗಲು ಹೊಸ ದಾರಿ ಬಳಸುತ್ತಿದ್ದಾರೆ ಉಗ್ರರು?

Prajanudi Admin

ಕುಂಭ ಮೇಳಕ್ಕೆ ಸಜ್ಜಾಗುತ್ತಿದೆ ಟಿ. ನರಸೀಪುರ!

Prajanudi Admin

Leave a Comment