Prajanudi
ಕ್ರೀಡೆ

ಚಾಹಲ್ ಸರಿಯಾಗಿ ಕೆಲಸ ಮಾಡ್ತಿಲ್ವ? ರೋಹಿತ್ ಶರ್ಮಾ ಮಗಳಿಗೆ ಬೇಬಿ ಸಿಟ್ಟರ್ ಆಗಲು ರೆಡಿ: ರಿಷಭ್ ಪಂತ್


ಆಸೀಸ್ ನಾಯಕ ಟಿಮ್ ಪೈನ್ ಬಳಿಕ ಟೀಂ ಇಂಡಿಯಾ ಉಪನಾಯಕ ರೋಹಿತ್ ಶರ್ಮಾ ಮಗಳಿಗೆ ಬೇಬಿ ಸಿಟ್ಟರ್ ಆಗುವುದಾಗಿ ಟೀಂ ಇಂಡಿಯಾ ಭರವಸೆಯ ಆಟಗಾರ ರಿಷಭ್ ಪಂತ್ ಹೇಳಿದ್ದಾರೆ.ರೋಹಿತ್ ಶರ್ಮಾ ಇತ್ತೀಚಿಗೆ ತಮ್ಮ ಮಗಳಿಗೆ ಬೇಬಿ ಸಿಟ್ಟರ್ ಆಗುತ್ತೇಯಾ? ಎಂದು ರಿಷಭ್ ಪಂತ್ ಅವರನ್ನು ಕೇಳಿದ್ದಾರೆ. ಇದನ್ನು ಸಂತೋಷದಿಂದಲೇ  ಸ್ವೀಕರಿಸುವುದಾಗಿ ಪ್ರತಿಕ್ರಿಯಿಸಿರುವ ರಿಷಭ್ ಪಂತ್  ಸಮೈರಾಗೆ  ಬೇಬಿ ಸಿಟ್ಟರ್ ಆಗುವುದಾಗಿ ಹೇಳಿದ್ದಾರೆ.ಮೆಲ್ಬರ್ನ್ ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಮೂರನೇ  ಟೆಸ್ಟ್ ಪಂದ್ಯದ ವೇಳೆಯಲ್ಲಿ ಆಸೀಸ್ ನಾಯಕ ಟಿಮ್ ಪೈನ್  ತಮ್ಮ ಮಗಳಿಗೆ ಬೇಟಿ ಸಿಟ್ಟರ್ ಆಗುತ್ತೀಯಾ ಎಂದು ರಿಷಭ್  ಪಂತ್ ಅವರನ್ನು ಕಿಚ್ಚಾಯಿಸಿದ್ದರು. ನಂತರ ರಿಷಭ್ ಪಂತ್, ಪೈನ್  ಮನೆಗೆ ಹೋಗಿ  ಬೋನಿ ಪೈನ್ ಮತ್ತು ಮಕ್ಕಳ ಜೊತೆ ಪೋಟೋ ತೆಗೆಸಿಕೊಂಡಿದದ್ದು  ವೈರಲ್ ಆಗಿತ್ತು.ಆಸ್ಟ್ರೇಲಿಯಾದ ಆಟಗಾರ ನಂತರ ರೋಹಿತ್ ಶರ್ಮಾ,  ತಮ್ಮ ಮಗಳಿಗೆ ಬೇಬಿ ಸಿಟ್ಟರ್ ಆಗುತ್ತೀಯಾ?  ಎಂದು ದೆಹಲಿಯ ಯುವ ಆಟಗಾರ ರಿಷಭ್ ಪಂತ್  ಅವರನ್ನು ಕೇಳಿದ್ದಾರೆ. ಇದಕ್ಕೆ ಕೂಡಲೇ ಸ್ಪಂದಿಸಿರುವ  ರಿಷಭ್ ಪಂತ್ , ಚಾಹಲ್ ಸರಿಯಾಗಿ ಕೆಲಸ ಮಾಡ್ತಿಲ್ವ? ಎಂದು ಪ್ರಶ್ನಿಸಿದ್ದು, ಸಮೈರಾಗೆ ಸಂತೋಷದಿಂದ  ಬೇಬಿ ಸಿಟ್ಟರ್ ಆಗುವುದಾಗಿ ಹೇಳಿದ್ದಾರೆ. ರೋಹಿತ್ ಶರ್ಮಾ ಹಾಗೂ ರಿಷಭ್ ಪಂತ್ ನಡುವಿನ ಹಾಸ್ಯದ ಟ್ವೀಟ್ ಗಳು ವೈರಲ್ ಆಗಿವೆ. Morning buddy. Heard your a good baby sitter, need one right now. Ritika will be quite happy 😃 @RishabPant777 https://t.co/JkGWTYpnBk— Rohit Sharma (@ImRo45) January 9, 2019
ಆಸ್ಟ್ರೇಲಿಯಾ ಹಾಗೂ ನ್ಯೂಜಿಲ್ಯಾಂಡ್  ವಿರುದ್ಧದ ಏಕದಿನ ಸರಣಿಯಲ್ಲಿ ರಿಷಭ್ ಪಂತ್ ಆಡುತ್ತಿಲ್ಲ. ಸ್ವದೇಶಕ್ಕೆ ಅವರು ವಾಪಾಸ್ಸಾಗುತ್ತಿದ್ದಾರೆ.  ಈ ತಿಂಗಳ ನಂತರ ಆರಂಭವಾಗಲಿರುವ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಭಾರತ ಎ ತಂಡದ ಪರವಾಗಿ ರಿಷಭ್ ಪಂತ್ ಆಡಲಿದ್ದಾರೆ. ಈ ಮಧ್ಯೆ ಶನಿವಾರದಿಂದ ಆಸ್ಟ್ರೇಲಿಯಾ ವಿರುದ್ಧದ ಸರಣಿ ಆರಂಭವಾಗಲಿದೆ. ನಂತರ ನ್ಯೂಜಿಲ್ಯಾಂಜ್ ವಿರುದ್ಧದ ಐದು ಏಕದಿನ ಹಾಗೂ ಮೂರು ಟಿ-20 ಪಂದ್ಯಗಳು ಆರಂಭವಾಗಲಿವೆ. ನ್ಯೂಜಿಲ್ಯಾಂಡ್ ವಿರುದ್ಧದ ಮೂರು ಟಿ-20 ಪಂದ್ಯಗಳಲ್ಲಿ ರಿಷಭ್ ಪಂತ್ ಟೀಂ ಇಂಡಿಯಾ ಜೊತೆಯಾಗಲಿದ್ದಾರೆ.

Related posts

4ನೇ ಟೆಸ್ಟ್: ಭಾರತದ ಬೃಹತ್ ಮೊತ್ತಕ್ಕೆ ಆಸಿಸ್ ದಿಟ್ಟ ಉತ್ತರ, 128-2

Prajanudi Admin

ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ನಲ್ಲಿ ಭರ್ಜರಿ ಆಟ: ಎ ಪ್ಲಸ್’ ಒಪ್ಪಂದದ ಪಟ್ಟಿ ಸೇರಲಿದ್ದಾರಾ ಚೇತೇಶ್ವರ್ ಪೂಜಾರಾ?

Prajanudi Admin

ಪೃಥ್ವಿ ಶಾ- ಮಯಾಂಕ್ ಆರಂಭಿಕರಾಗಿ ಕ್ಲಿಕ್ ಆದರೆ ತಂಡದ ಸಮಸ್ಯೆಗೆ ಪರಿಹಾರ: ಗೌತಮ್ ಗಂಭೀರ್

Prajanudi Admin

Leave a Comment