Prajanudi
ರಾಜಕೀಯ

ನಾನು ನಟ ಮಾತ್ರ ಅಲ್ಲ, ಬೆಂಗಳೂರಿಗರಿಗೆ ನಾನು ಏನೆಂದು ಗೊತ್ತಿದೆ: ಪ್ರಕಾಶ್ ರೈ


ಬೆಂಗಳೂರು: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ನಟ ಪ್ರಕಾಶ್ ರೈ ತಮ್ಮ ಅದೃಷ್ಟ ಪರೀಕ್ಷೆಗೆ ಬೆಂಗಳೂರು ಕೇಂದ್ರ ಭಾಗವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಬಿಜೆಪಿ ಮತ್ತು ಕೇಂದ್ರ ಸರ್ಕಾರದ ಕಾರ್ಯಗಳನ್ನು ಪ್ರಶ್ನಿಸುತ್ತಾ, ಮೋದಿಯವರನ್ನು ಟೀಕೆ ಮಾಡಿಕೊಂಡು ಬರುತ್ತಿರುವ ದಕ್ಷಿಣ ಭಾರತದ ಖ್ಯಾತ ನಟ ಪ್ರಕಾಶ್ ರೈ ಇತ್ತೀಚಿಗೆ ತಮ್ಮ ಹೇಳಿಕೆಗಳಿಂದ ತೀವ್ರ ಸುದ್ದಿಯಲ್ಲಿರುತ್ತಾರೆ. ಈ ಸಂದರ್ಭದಲ್ಲಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡಿದ ಅವರು ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಆಯ್ಕೆ ಮತ್ತು ತಮ್ಮ ಮುಂದಿನ ಯೋಜನೆಗಳ ಬಗ್ಗೆ ಮಾತನಾಡಿದ್ದಾರೆ. ಅವರ ಸಂದರ್ಶನದ ಆಯ್ದ ಭಾಗ ಇಲ್ಲಿದೆ.ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಲ್ಲಿ 8 ವಿಧಾನಸಭೆ ಕ್ಷೇತ್ರಗಳಿವೆ, 5ರಲ್ಲಿ ಕಾಂಗ್ರೆಸ್ ಶಾಸಕರು ಮತ್ತು 3 ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರಿದ್ದಾರೆ. ಹೀಗಿರುವಾಗ ಕಾಂಗ್ರೆಸ್ ಮತ್ತು ಬಿಜೆಪಿಯನ್ನು ಸೋಲಿಸಿ ನೀವು ಹೇಗೆ ಗೆದ್ದುಬರುತ್ತೀರಿ?-ನಾನು ಅವರನ್ನು ಸೋಲಿಸುವ ಅಗತ್ಯವಿಲ್ಲ. ಕ್ಷೇತ್ರದ ಮತದಾರರು ಅವರನ್ನು ಸೋಲಿಸುತ್ತಾರೆ. ಇದು ವಿಷಯಾಧಾರಿತ ಚುನಾವಣೆಯಾಗಿದ್ದು ನಾಗರಿಕರಿಗೆ ತಮಗೆ ಏನು ಬೇಕು ಎಂಬುದು ಗೊತ್ತಿದೆ ಅವರು ನನಗೆ ಸಹಾಯ ಮಾಡುತ್ತಾರೆ.ಕ್ಷೇತ್ರದಲ್ಲಿ ಸುಮಾರು 19.3 ಲಕ್ಷ ಮತದಾರರಿದ್ದಾರೆ. ಅವರನ್ನು ಹೇಗೆ ಸಂಪರ್ಕಿಸುತ್ತೀರಿ?-ಜನರಿಗೆ ನನ್ನನ್ನು ಪರಿಚಯವಿದೆ. ತೀವ್ರ ಒತ್ತಡದಲ್ಲಿ ಕೂಡ ನಾನು ಸಮಸ್ಯೆಗಳಿಗೆ ಹೇಗೆ ಸ್ಪಂದಿಸುತ್ತೇನೆ, ಪ್ರಚಲಿತ ವಿದ್ಯಮಾನಗಳಿಗೆ ಹೇಗೆ ಪ್ರತಿಕ್ರಿಯಿಸುತ್ತೇನೆ ಎಂಬುದು ಗೊತ್ತಿದೆ. ನಾನು ಬೆಂಗಳೂರಿಗ, ಇಲ್ಲೇ ಹುಟ್ಟಿ ಬೆಳೆದಿದ್ದು. ಶಾಲಾ ಕಾಲೇಜುಗಳಲ್ಲಿ ನಾನು ಬೆಳೆದಿದ್ದನ್ನು ಸ್ನೇಹಿತರು ನೋಡಿದ್ದಾರೆ. ಜನರು ನನ್ನನ್ನು ಗಮನಿಸುತ್ತಾರೆ. ಅವರನ್ನು ಕೂಡ ನಾನು ಬಲ್ಲೆ. ನಾನು ಕೇವಲ ನಟನಲ್ಲ. ವಿದ್ಯಾರ್ಥಿಗಳು ಮತ್ತು ಜನರ ಸಶಕ್ತೀಕರಣದ ವಿಷಯಗಳನ್ನು ನಾನು ಕೈಗೆತ್ತಿಕೊಳ್ಳುತ್ತೇನೆ.ಸೋಷಿಯಲ್ ಮೀಡಿಯಾದಲ್ಲಿ ನಿಮಗೆ ಸಿಗುವ ಬೆಂಬಲವನ್ನು ಮತ ಗಳಿಕೆಗೆ ಹೇಗೆ ಬದಲಿಸಿಕೊಳ್ಳುತ್ತೀರಿ?-ನಾನು ಜನರೊಂದಿಗೆ ನೇರವಾಗಿ ಮಾತನಾಡಬಲ್ಲೆ. ಅದೊಂದು ಸಮೂಹ ಯತ್ನ. ಸೋಷಿಯಲ್ ಮೀಡಿಯಾ ನಮ್ಮನ್ನು ಒಟ್ಟು ಸೇರಿಸುತ್ತದೆ. ನಾವು ಹಣ ಕೊಟ್ಟು ಜನರನ್ನು ಒಗ್ಗೂಡಿಸಬೇಕೆಂದು ನನಗೆ ಅನಿಸುವುದಿಲ್ಲ, ಯುವಕರು ನನ್ನ ಜೊತೆ ಇದ್ದಾರೆ. ಅದು ನನಗೆ ತುಂಬಾ ಸಂತೋಷದ ವಿಷಯ.ಕಳೆದ 20 ವರ್ಷಗಳಲ್ಲಿ ಬೆಂಗಳೂರಿನಲ್ಲಿ ಯಾವುದೇ ಸ್ವತಂತ್ರ ಅಭ್ಯರ್ಥಿ ಗೆದ್ದಿಲ್ಲ. ಅದನ್ನು ಹೇಗೆ ಮುರಿಯುತ್ತೀರಿ?ನಾನು ಅದನ್ನು ಮುರಿಯುವುದಿಲ್ಲ, ಈ ಬಾರಿ ಜನರೇ ನನ್ನನ್ನು ಗೆಲ್ಲಿಸುತ್ತಾರೆ.ಮೂರು ಪ್ರಮುಖ ಪಕ್ಷಗಳಲ್ಲಿ ಯಾರಾದರೂ ನಿಮ್ಮನ್ನು ಸಂಪರ್ಕಿಸಿದ್ದಾರಾ? ಒಂದು ವೇಳೆ ಕೇಳಿದರೆ ಏನು ಮಾಡುತ್ತೀರಿ?-ಹೌದು, ಮೂರು ಪಕ್ಷಗಳಿಂದ ನಾಯಕರು ನನ್ನನ್ನು ಸಂಪರ್ಕಿಸಿದ್ದಾರೆ. ಆದರೆ ಯಾರ ಜೊತೆ ಹೋರಾಡುತ್ತೇನೆ ಎಂಬುದು ಅವರಿಗೆ ಗೊತ್ತಿದೆ. ಜಾತ್ಯತೀತ ಪಕ್ಷಗಳು ನನ್ನನ್ನು ಅವರ ಪಕ್ಷದ ವ್ಯವಸ್ಥೆಗೆ ಎಳೆಯಲು ಪ್ರಯತ್ನಿಸಬಾರದು ಬದಲಿಗೆ ನನಗೆ ಬೆಂಬಲ ಸೂಚಿಸಬೇಕು. ನಮಗೆ ಪಕ್ಷ ಏಕೆ ಬೇಕು, ನಮ್ಮ ಸಂವಿಧಾನದ ಪ್ರಕಾರ ಚುನಾವಣಾ ಪ್ರತಿನಿಧಿಗಳು ಬೇಕೆ ಹೊರತು ಪಕ್ಷಗಳಲ್ಲ.ಚುನಾವಣೆಯಲ್ಲಿ ಗೆದ್ದು ಬಂದರೆ ಏನು ಮಾಡುತ್ತೀರಿ?-ಸಂಸದನಾಗಿ ಗೆದ್ದು ಬಂದರೆ ಜನರಿಗಾಗಿ ಕೆಲಸ ಮಾಡುತ್ತೇನೆ. ಜನರಿಗೆ ಏನು ಬೇಕೆಂದು ಕೇಳಿ ಅದರ ಪ್ರಕಾರ ಕೆಲಸ ಮಾಡುತ್ತೇನೆ ನನಗೆ ಎಲ್ಲ ಗೊತ್ತಿದೆ ಎಂದು ತೋರಿಸಿಕೊಳ್ಳುವುದು, ದರ್ಪ ತೋರುವುದು ಮಾಡುವುದಿಲ್ಲ. ಜಾತ್ಯತೀತ ಮತಗಳನ್ನು ವಿಭಜಿಸುತ್ತೀರಿ ಎಂದು ಅನಿಸುವುದಿಲ್ಲವೇ?-ಜಾತ್ಯಾತೀತ ಮತದಾರರು ಒಟ್ಟಾಗಿ ಹೋರಾಟ ಮಾಡಬೇಕು. ಜಾತ್ಯಾತೀತತೆಯನ್ನು ರಕ್ಷಿಸಲು ಸಾಧ್ಯವಾಗದಿದ್ದರೆ ಪಕ್ಷಗಳು ಏನು ಮಾಡುತ್ತವೆ, ಅವು ಇದ್ದು ಏನು ಪ್ರಯೋಜನ?

Related posts

ಆಪರೇಷನ್ ಆಡಿಯೋ: ಎಸ್ಐಟಿ ತನಿಖೆಗೆ ಬಿಜೆಪಿ ವಿರೋದ, ನ್ಯಾಯಾಂಗ ತನಿಖೆಗೆ ಆಗ್ರಹ

Prajanudi Admin

ಸುಳ್ಳು ಸುದ್ದಿ ಪ್ರಸಾರ ಮಾಡುವ ಮೂಲಕ ಮಾಧ್ಯಮಗಳು ಜನತೆಗೆ ದಿಗಿಲು ಮೂಡಿಸುತ್ತಿವೆ: ಜೆಡಿಎಸ್-ಕಾಂಗ್ರೆಸ್ ಆರೋಪ

Prajanudi Admin

ಕೇಂದ್ರದ ನೆರವಿನೊಂದಿಗೆ ರಾಜ್ಯ ಬಿಜೆಪಿ ಕುದುರೆ ವ್ಯಾಪಾರ, ಇದಕ್ಕೆ ನಮ್ಮ ಬಳಿ ಸಾಕ್ಷಿ ಇದೆ: ಡಿ.ಕೆ.ಸುರೇಶ್

Prajanudi Admin

Leave a Comment